ಬೆಂಗಳೂರು(ಜೂ.12): ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಸ್ವಂತ ಗಂಡನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಮಹಿಳೆ ಗಂಡ ಸುರೇಶ್(32)ನನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 7 ರಂದು ಆರೋಪಿ ಸುರೇಶ್ ಮನೆಗೆ ಚಿಕನ್ ತಂದಿದ್ದು, ಇದೇ ವೇಳೆ ಕುಡಿಯೋಕೆ ಎಣ್ಣೆಯನ್ನು ತಂದಿದ್ದ. ನಂತರ ಗಂಡ ಹೆಂಡತಿ ಇಬ್ಬರು ಜೊತೆಯಲ್ಲಿ ಪಾರ್ಟಿ ಸಹ ಮಾಡಿದ್ದಾರೆ. ಪಾರ್ಟಿ ಆದ ಬಳಿಕ ಗಂಡ ಹೆಂಡತಿ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಟೈಲರ್ ಆಗಿದ್ದ ಸುರೇಶ್ ದುಡಿದಿದ್ದು ಸಂಸಾರ ನಡೆಸುವುದಕ್ಕೆ ಸಾಕಾಗುತ್ತಿರಲಿಲ್ಲ. ಇದರ ಜೊತೆಗೆ ಹಣ ಮಾಡಿಲ್ಲ, ಜಾಗ ಮಾಡಿಲ್ಲ ಅಂತ ಹೆಂಡತಿ ಕಿರಿಕ್ ತೆಗೆದು ಜಗಳ ಜಗಳವಾಡಿದ್ದಾಳೆ. ಕುಡಿದ ಅಮಲಿನಲ್ಲಿ ಜಗಳ ತಾರಕ್ಕಕೇರಿ, ಗಂಡ ಸುರೇಶ್ ಹೆಂಡತಿ ವೆಂಕಟಲಕ್ಷ್ಮಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
![]()
ಆರೋಪಿ ಸುರೇಶ್
ಕೊಲೆ ಮಾಡಿದ ಬಳಿಕ ಆಕೆಯ ಮೊಬೈಲ್ ತೆಗೆದುಕೊಂಡ ಸುರೇಶ್ ತನ್ನ ಮೊಬೈಲ್ ಗೆ ನಾನು ಸಾಯುತ್ತೀದಿನಿ, ಹಣಕಾಸಿನ ತೊಂದರೆ ತುಂಬಾ ಇದೆ. ನನ್ನ ಸಾವಿಗೆ ನಾನೇ ಕಾರಣ ಅಂತ ಮೆಸೇಜ್ ಮಾಡಿಕೊಂಡಿದ್ದಾನೆ. ನಂತರ ಪೊಲೀಸರಿಗೂ ಅದೇ ಮೆಸೇಜ್ ತೋರಿಸಿ ತನಿಖೆಯ ದಿಕ್ಕು ತಪ್ಪಿಸುವುದಕ್ಕೆ ಯತ್ನ ಮಾಡಿದ್ದ.ಇನ್ನು ಮೊದಲಿಗೆ ಪೊಲೀಸರು ಸಹ ಈತನ ಮಾತನ್ನು ನಂಬಿದ್ದರು.
ಇದನ್ನೂ ಓದಿ :
ಲಾಕ್ ಡೌನ್ ಹಿನ್ನಲೆ ಊರಿಗೆ ಹೋಗಲಾಗದೆ ಹತಾಶೆಗೊಂಡು ವ್ಯಕ್ತಿ ಆತ್ಮಹತ್ಯೆ
ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತ್ಮಹತ್ಯೆ ಅಲ್ಲ ಕೊಲೆ ಇದು ಅಂತ ಗೊತ್ತಾಗಿದ್ದು, ಕೂಡಲೇ ಮೃತ ಮಹಿಳೆಯ ಗಂಡ ಸುರೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆದಾಗ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪೊಲೀಸರು ಕಾರಣ ಕೇಳಿದ್ರೆ ಪ್ರತಿನಿತ್ಯ ಹಣ ಸಂಪಾದನೆ ಮಾಡಿಲ್ಲ, ಆಸ್ತಿ ಸಂಪಾದಿಸಿಲ್ಲ, ಅಂತ ಜಗಳ ಮಾಡುತ್ತಿದ್ದಳು ಅದಕ್ಕೆ ಕೊಲೆ ಮಾಡಿದೆ ಎಂದು ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಗಂಡ ಹೆಂಡತಿಯ ಜಗಳದಲ್ಲಿ ಹೆಂಡತಿ ಕೊಲೆ ಮಾಡಿದ ಗಂಡ ಜೈಲು ಪಾಲಾಗಿದ್ದಾನೆ. ಆದರೆ, ನಾಲ್ಕು ವರ್ಷದ ಗಂಡು ಮಗು ಮಾತ್ರ ಈಗ ಅನಾಥವಾಗಿದೆ. ಸದ್ಯ ಬೊಮ್ಮನಹಳ್ಳಿ ಪೊಲೀಸ್ ಇನ್ಸ್ಪೇಕ್ಟರ್ ರವಿ ಶಂಕರ್ ತನಿಖೆಯನ್ನು ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ