ರೌಡಿಶೀಟರ್​ ಸ್ಲಂ ಭರತ್​ ಬೆನ್ನಿಗೆ ನಿಂತಿದ್ದಳು ಆ ಯುವತಿ; ಪ್ರಿಯಕರನಿಗಾಗಿ ಪೊಲೀಸರನ್ನೇ ಎದುರು ಹಾಕಿಕೊಂಡಿದ್ದ ಅವಳ್ಯಾರು?

ಇತ್ತೀಚೆಗೆ ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಭರತ್ ನಂತರ ಉತ್ತರ ಭಾರತದ ಕಡೆ ಹೋಗಿ ತಲೆಮರೆಸಿಕೊಂಡಿದ್ದ. ಆತನನ್ನು ಹುಡುಕಿಕೊಂಡು ಉತ್ತರ ಪ್ರದೇಶಕ್ಕೆ ಹೋಗಿದ್ದ ಪೊಲೀಸರನ್ನು ಆತನ ಪ್ರೇಯಸಿ ಯಾಮಾರಿಸಿದ್ದಳು.

ಬೆಂಗಳೂರು ರೌಡಿ ಶೀಟರ್ ಸ್ಲಂ ಭರತ್

ಬೆಂಗಳೂರು ರೌಡಿ ಶೀಟರ್ ಸ್ಲಂ ಭರತ್

  • Share this:
ಬೆಂಗಳೂರು (ಫೆ. 27): ರೌಡಿಶೀಟರ್​​ ಸ್ಲಂ ಭರತ್​ನನ್ನು ಬೆಂಗಳೂರು  ಪೊಲೀಸರು ಹೈದರಾಬಾದ್​ನಲ್ಲಿ ಬಂಧಿಸಿ ಇಂದು ಬೆಳಗ್ಗೆ ಕರೆತರುವಾಗ ಸಿನಿಮೀಯವಾಗಿ ಪರಾರಿಯಾಗಿದ್ದ. ಆತನನ್ನು ಹುಡುಕಿದ್ದ ಪೊಲೀಸರು ಆತನ ಎದೆ, ಕಾಲಿಗೆ ಗುಂಡು ಹಾರಿಸಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದ. ಈತನ ಬಗ್ಗೆ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿದ್ದು, ಭರತ್​ನನ್ನು ಎಸ್ಕೇಪ್ ಮಾಡಲು ಆತನ ಪ್ರೇಯಸಿ ಕೈಜೋಡಿಸಿದ್ದಳು.

ರೌಡಿ ಶೀಟರ್ ಸ್ಲಂ ಭರತ್​ ಕಾಮಾಕ್ಷಿಪಾಳ್ಯ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿಯಾಗಿದ್ದ. ಇತ್ತೀಚೆಗೆ ಆತನನ್ನು ಬಂಧಿಸಲು ಮುಂದಾಗಿದ್ದ ರಾಜಗೋಪಾಲನಗರ ಪೊಲೀಸರ ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಬನಶಂಕರಿ ಬಳಿ ಇರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಭರತ್ ನಂತರ ಉತ್ತರ ಭಾರತದ ಕಡೆ ಹೋಗಿ ತಲೆಮರೆಸಿಕೊಂಡಿದ್ದ. ಆತನನ್ನು ಹುಡುಕಿಕೊಂಡು ಉತ್ತರ ಭಾರತಕ್ಕೆ ಹೋಗಿದ್ದ ಪೊಲೀಸರನ್ನು ಆತನ ಪ್ರೇಯಸಿ ಯಾಮಾರಿಸಿದ್ದಳು.

ಇದನ್ನೂ ಓದಿ: ಎಸ್ಕೇಪ್ ಆಗಿದ್ದ ಸ್ಲಂ ಭರತ್​ ಮೇಲೆ ಬೆಂಗಳೂರು ಪೊಲೀಸರ ಫೈರಿಂಗ್; ಚಿಕಿತ್ಸೆ ಫಲಕಾರಿಯಾಗದೆ ರೌಡಿಶೀಟರ್ ಸಾವು

ಸ್ಲಂ ಭರತ್​ ಇರುವ ಜಾಗವನ್ನು ಪತ್ತೆ ಮಾಡಿದ್ದ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಜನರನ್ನು ಸೇರಿಸಿ, ಗಲಾಟೆ ಮಾಡಿದ್ದ ಭರತ್​ನ ಪ್ರೇಯಸಿ, ಭರತ್​ನನ್ನು ಬಂಧಿಸಲು ಹೋದ ಪೊಲೀಸರು ಕೈ ಕಚ್ಚಿದ್ದಳು. ಈ ಘಟನೆಯಿಂದ 6 ಜನ ಕರ್ನಾಟಕದ ಪೊಲೀಸರ ತಂಡ ದಿಗ್ಭ್ರಮೆಗೊಂಡಿತ್ತು. ಬಾರ್​ ಗರ್ಲ್​ ಆಗಿದ್ದ ಭರತ್​ನ ಪ್ರೇಯಸಿ 20 ದಿನಗಳ ಹಿಂದೆ ಪೊಲೀಸರ ಮೇಲೆ ಹಲ್ಲೆ ಮಾಡಿ, ತನ್ನ ಪ್ರಿಯಕರನನ್ನು ರಕ್ಷಿಸಿದ್ದಳು.

ಇಂದು ನಡೆದಿದ್ದೇನು?:

ಸ್ಲಂ ಭರತ್​ನನ್ನು ಬಂಧಿಸಿ, ಇಂದು ಬೆಂಗಳೂರಿಗೆ ಕರೆತರುತ್ತಿದ್ದಾಗ ಪೀಣ್ಯ ಬಳಿ ಭರತ್​ನ ಗ್ಯಾಂಗ್​ನವರು 2 ಕಾರುಗಳಲ್ಲಿ ಬಂದು ಪೊಲೀಸರ ಕಾರನ್ನು ಅಡ್ಡಗಟ್ಟಿದ್ದರು. ಪೊಲೀಸರು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ಪೊಲೀಸರು ಗಾಬರಿಗೊಂಡು, ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ಅವರ ವಶದಲ್ಲಿದ್ದ ಸ್ಲಂ ಭರತ್​ ಪೊಲೀಸರ ಕೈ ಕಚ್ಚಿ ತನ್ನ ಗ್ಯಾಂಗ್​ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ.

ಇದನ್ನೂ ಓದಿ: Bangalore Crime: ಬೆಂಗಳೂರಲ್ಲಿ ಪೊಲೀಸರ ಕಣ್ಣೆದುರೇ ಸಿನಿಮೀಯವಾಗಿ ರೌಡಿಶೀಟರ್ ಸ್ಲಂ ಭರತ್ ಪರಾರಿ!

ಪೊಲೀಸರ ಕಾರಿಗೆ ಅಡ್ಡಗಟ್ಟಿದ ಭರತ್​ನ ಗ್ಯಾಂಗ್​ನವರು ಪೊಲೀಸರ ಮೇಲೆ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದರು. ಈ ವೇಳೆ ಪೊಲೀಸ್ ಪೇದೆ ಸುಭಾಷ್ ಎಂಬುವವರಿಗೆ ಗಾಯವಾಗಿತ್ತು. ಸ್ಲಂ ಭರತ್​ನನ್ನು ಬೆನ್ನತ್ತಿದ್ದ ಪೊಲೀಸರು ಬೈಕ್​ನಲ್ಲಿ ಸಹಚರನೊಂದಿಗೆ ಪರಾರಿಯಾಗುತ್ತಿದ್ದ ಆತನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪಿಸ್ತೂಲ್​ನಿಂದ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಭರತ್​ ಶೂಟ್ ಮಾಡಿದ್ದ. ಆದರೆ, ಇನ್​ಸ್ಪೆಕ್ಟರ್​ ದಿನೇಶ್​ ಪಾಟೀಲ್ ಧರಿಸಿದ್ದ ಬುಲೆಟ್​ ಪ್ರೂಫ್​ ಜಾಕೆಟ್​ನಿಂದ ಹೆಚ್ಚಿನ ಅಪಾಯವೇನೂ ಆಗಿರಲಿಲ್ಲ.

ಅದೇ ವೇಳೆ ಇನ್ನೋರ್ವ ಪೊಲೀಸ್ ಇನ್​ಸ್ಪೆಕ್ಟರ್​ ಲೋಹಿತ್​ ರೌಡಿ ಶೀಟರ್​ ಭರತ್​ನ ಎದೆಗೆ ಗುಂಡು ಹಾರಿಸಿದ್ದರು. ತಕ್ಷಣ ಕುಸಿದುಬಿದ್ದ ಭರತ್​ನನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ.
First published: