Bangalore Crime: ಬೆಂಗಳೂರಲ್ಲಿ ಪೊಲೀಸರ ಕಣ್ಣೆದುರೇ ಸಿನಿಮೀಯವಾಗಿ ರೌಡಿಶೀಟರ್ ಸ್ಲಂ ಭರತ್ ಪರಾರಿ!

Slum Bharath: ಕಾಮಾಕ್ಷಿಪಾಳ್ಯ ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿ ಸ್ಲಂ ಭರತ್. ಇತ್ತೀಚೆಗೆ ಆತನನ್ನು ಬಂಧಿಸಲು ಮುಂದಾಗಿದ್ದ ರಾಜಗೋಪಾಲನಗರ ಪೊಲೀಸರ ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ.

ಸ್ಲಂ ಭರತ್​ನನ್ನು ಬಂಧಿಸಿ, ಇಂದು ಬೆಂಗಳೂರಿಗೆ ಕರೆತರುತ್ತಿದ್ದಾಗ ಪೀಣ್ಯ ಬಳಿ ಭರತ್​ನ ಗ್ಯಾಂಗ್​ನವರು 2 ಕಾರುಗಳಲ್ಲಿ ಬಂದು ಪೊಲೀಸರ ಕಾರನ್ನು ಅಡ್ಡಗಟ್ಟಿದ್ದರು. ಪೊಲೀಸರು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ಪೊಲೀಸರು ಗಾಬರಿಗೊಂಡು, ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ಅವರ ವಶದಲ್ಲಿದ್ದ ಸ್ಲಂ ಭರತ್​ ಪೊಲೀಸರ ಕೈ ಕಚ್ಚಿ ತನ್ನ ಗ್ಯಾಂಗ್​ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ.

ಸ್ಲಂ ಭರತ್​ನನ್ನು ಬಂಧಿಸಿ, ಇಂದು ಬೆಂಗಳೂರಿಗೆ ಕರೆತರುತ್ತಿದ್ದಾಗ ಪೀಣ್ಯ ಬಳಿ ಭರತ್​ನ ಗ್ಯಾಂಗ್​ನವರು 2 ಕಾರುಗಳಲ್ಲಿ ಬಂದು ಪೊಲೀಸರ ಕಾರನ್ನು ಅಡ್ಡಗಟ್ಟಿದ್ದರು. ಪೊಲೀಸರು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದರು. ಇದರಿಂದ ಪೊಲೀಸರು ಗಾಬರಿಗೊಂಡು, ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ಅವರ ವಶದಲ್ಲಿದ್ದ ಸ್ಲಂ ಭರತ್​ ಪೊಲೀಸರ ಕೈ ಕಚ್ಚಿ ತನ್ನ ಗ್ಯಾಂಗ್​ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ.

  • Share this:
ಬೆಂಗಳೂರು (ಫೆ. 27): ಕುಖ್ಯಾತ ರೌಡಿಶೀಟರ್ ಸ್ಲಂ ಭರತ್​ನನ್ನು ಬಂಧಿಸಿ, ಬೆಂಗಳೂರಿಗೆ ಕರೆತರುವಾಗ ಸಿನಿಮೀಯ ರೀತಿಯಲ್ಲಿ ಪೊಲೀಸರನ್ನು ಯಾಮಾರಿಸಿ, ಪರಾರಿಯಾಗಿದ್ದಾನೆ.

ಸ್ಲಂ ಭರತ್​ನನ್ನು ಹೈದರಾಬಾದ್​ನಲ್ಲಿ ಬಂಧಿಸಿದ್ದ ಪೊಲೀಸರು ಆತನನ್ನು ಬೆಂಗಳೂರಿಗೆ ಕರೆತರುತ್ತಿದ್ದರು. ಈ ವೇಳೆ ಪೀಣ್ಯ ಬಳಿ ಭರತ್​ನ ಗ್ಯಾಂಗ್​ನವರು 2 ಕಾರುಗಳಲ್ಲಿ ಬಂದು ಪೊಲೀಸರ ಕಾರನ್ನು ಅಡ್ಡಗಟ್ಟಿದರು. ಪೊಲೀಸರು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದರು. ಇದರಿಂದ ಪೊಲೀಸರು ಗಾಬರಿಗೊಂಡು, ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ಅವರ ವಶದಲ್ಲಿದ್ದ ಸ್ಲಂ ಭರತ್​ ಪೊಲೀಸರ ಕೈ ಕಚ್ಚಿ ತನ್ನ ಗ್ಯಾಂಗ್​ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾನೆ.

ಕ್ಷಣಮಾತ್ರದಲ್ಲಿ ಸಿನಿಮಾ ಶೈಲಿಯಲ್ಲಿ ಈ ಘಟನೆ ನಡೆದಿದೆ. ಸ್ಲಂ ಭರತ್​ನನ್ನು ಬೆಂಗಳೂರು ನಗರ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದರು. ಪೊಲೀಸರ ಕಾರಿಗೆ ಅಡ್ಡಗಟ್ಟಿದ ಭರತ್​ನ ಗ್ಯಾಂಗ್​ನವರು ಪೊಲೀಸರ ಮೇಲೆ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ಪೇದೆ ಸುಭಾಷ್ ಎಂಬುವವರಿಗೆ ಗಾಯವಾಗಿದೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಶೂಟೌಟ್​ ಹಿಂದಿತ್ತು ಲವ್​ ಸ್ಟೋರಿ; ಸೇಡು ತೀರಿಸಿಕೊಳ್ಳಲು ಗುಂಡು ಹಾರಿಸಿದ ಮಾಜಿ ಪ್ರಿಯಕರ

ಪರಾರಿಯಾಗಿರುವ ಆರೋಪಿ ಸ್ಲಂ ಭರತ್​ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಆಗಿರುವ ಸ್ಲಂ ಭರತ್​ ಮೇಲೆ ಹಲವಾರು ಗಂಭೀರ ಪ್ರಕರಣಗಳು ದಾಖಲಾಗಿವೆ. ಆತನನ್ನು ಸೆರೆ ಹಿಡಿಯಲು ಬೆಂಗಳೂರಿನ ಎಲ್ಲಾ ಹೊರ ವಲಯದಲ್ಲಿ ನಾಕಾಬಂಧಿ ಹಾಕಿ ತಪಾಸಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೊಳಗಿತು ಗುಂಡಿನ ಸದ್ದು; ಯುವತಿಗೆ ಶೂಟ್ ಮಾಡಿ ಆರೋಪಿ ಪರಾರಿ

ಕಾಮಾಕ್ಷಿಪಾಳ್ಯ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿ ಸ್ಲಂ ಭರತ್. ಇತ್ತೀಚೆಗೆ ಆತನನ್ನು ಬಂಧಿಸಲು ಮುಂದಾಗಿದ್ದ ರಾಜಗೋಪಾಲನಗರ ಪೊಲೀಸರ ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಬನಶಂಕರಿ ಬಳಿ ಇರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಭರತ್ ನಂತರ ಉತ್ತರ ಭಾರತದ ಕಡೆ ಹೋಗಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಎಗೆ ಹೈದರಾಬಾದ್​ಗೆ ತೆರಳಿದ್ದ ಪೊಲೀಸರು ಆತನನ್ನು ಬಂಧಿಸಿ, ವಾಪಾಸ್ ಕರೆರುವಾಗ ಮತ್ತೊಮ್ಮೆ ಪರಾರಿಯಾಗಿದ್ದಾನೆ.
First published: