ಕೊಲೆ-ಪ್ರತೀಕಾರ-ಸುಪಾರಿ: 70 ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆಗೆ ಸ್ಕೆಚ್ ಹಾಕಿದ್ದ ಮಹಿಳೆ; ಕ್ಯಾಟ್​ರಾಜ ಸೇರಿ ಆರೋಪಿಗಳು ಪೊಲೀಸರ ಬಲೆಗೆ

ರೌಡಿ ಲಕ್ಷ್ಮಣ ಕೊಲೆ ಕೇಸ್ ಸೇರಿದಂತೆ 25 ಕ್ಕೂ ಹೆಚ್ಚು ಪ್ರಕರಣದ ಆರೋಪಿ ಕ್ಯಾಟ್‌ರಾಜ ಬೆಳಗಾವಿಯ ಹಿಂಡಲಗಾ ಜೈಲಲ್ಲಿದ್ದಾನೆ. ಮತ್ತೊಬ್ಬ ಆರೋಪಿ ಹೇಮಂತ್ ಅಲಿಯಾಸ್ ಹೇಮಿ  ಬಳ್ಳಾರಿ ಜೈಲಿನಲ್ಲಿದ್ದಾನೆ. ಚಿಕ್ಕತಿಮ್ಮೇಗೌಡನ ತಮ್ಮಂದಿರಾದ  ನಟರಾಜ್‌ , ಹೇಮಂತ್‌ನನ್ನ ಮುಗಿಸಲು ವರಮಹಾಲಕ್ಷ್ಮಿ ಇವರಿಬ್ಬರಿಗೂ 70 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದು, ಈಗಾಗ್ಲೇ 4-5 ಲಕ್ಷವನ್ನ ಅವರ ಕೈಸೇರಿಸಿದ್ದಳು ಎನ್ನಲಾಗಿದೆ.

news18-kannada
Updated:July 29, 2020, 2:45 PM IST
ಕೊಲೆ-ಪ್ರತೀಕಾರ-ಸುಪಾರಿ: 70 ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆಗೆ ಸ್ಕೆಚ್ ಹಾಕಿದ್ದ ಮಹಿಳೆ; ಕ್ಯಾಟ್​ರಾಜ ಸೇರಿ ಆರೋಪಿಗಳು ಪೊಲೀಸರ ಬಲೆಗೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜು.29): ಬೃಹತ್ ಬೆಂಗಳೂರಲ್ಲಿ ಪಾತಕ ಲೋಕದ ಮುಖ ಅನಾವರಣಗೊಳ್ಳುತ್ತಿದೆ. 2016 ರ ಕೊಲೆ, 2017ರಲ್ಲಿ ಪ್ರತೀಕಾರ, 2020 ರಲ್ಲಿ ಸುಪಾರಿ ಸ್ಕೆಚ್‌. ಹೀಗೆ ಎರಡು ಕುಟುಂಬಗಳ ನಡುವಿನ ದ್ವೇಷ ನಾಲ್ಕು ವರ್ಷ ಕಳೆದರೂ ತಣ್ಣಗಾಗದೇ ಸೇಡಿನ ಬೆಂಕಿಯಲ್ಲೇ ಬೇಯುತ್ತಿದೆ.

ಆಕೆಯ ಹೆಸರು ವರಮಹಾಲಕ್ಷ್ಮಿ ಅಲಿಯಾಸ್ ಖಾರದಪುಡಿ ಲಕ್ಷ್ಮಿ. ನಾವು ಹೇಳುತ್ತಿರುವ ಈ ಸುಪಾರಿ ಕಥೆಗೆ ಈಕೆಯೇ ವಿಲನ್. ಈಕೆಯೇ ನಾಯಕಿ. ಅದು 2016 ರ ನವೆಂಬರ್.  ಕಾಮಾಕ್ಷಿಪಾಳ್ಯ ಸ್ಟೇಷನ್ ವ್ಯಾಪ್ತಿಯಲ್ಲಿ ರಾಜಕೀಯ ದ್ವೇಷಕ್ಕೆ  ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡನ ಕೊಲೆಯಾಗಿತ್ತು.  ಕೊಲೆಗೆ ಸುಪಾರಿ ನೀಡಿದ ಆರೋಪದಡಿ  ಎ1 ವರಮಹಾಲಕ್ಷ್ಮಿ ಆಕೆಯ ಪತಿ ಎ2 ಗೋವಿಂದೇಗೌಡ ಜೈಲು ಪಾಲಾಗಿದ್ದರು.

ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಈ ಹೆಣ್ಣಿನ ದ್ವೇಷ ಅದೆಷ್ಟು ವರ್ಷವೋ?  ಚಿಕ್ಕತಿಮ್ಮೇಗೌಡನ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದ ಗಂಡ- ಹೆಂಡತಿ 5 ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಗೋವಿಂದೇಗೌಡ ಹೊರಗಡೆ ಬಂದಿದ್ದೇ ತಡ  ಹೆಗ್ಗನಹಳ್ಳಿಯಲ್ಲಿ 2017 ರ ಡಿಸೆಂಬರ್‌ನಲ್ಲಿ ಕೊಲೆಯಾಗಿದ್ದ.

ಯಡಿಯೂರಪ್ಪ ಅವರೇ‌ ಮುಂದಿನ ಮೂರು ವರ್ಷಕ್ಕೂ ಮುಖ್ಯಮಂತ್ರಿ: ಲಕ್ಷ್ಮಣ ಸವದಿ ಸ್ಪಷ್ಟನೆ

ಇದನ್ನ ಚಿಕ್ಕತಿಮ್ಮೇಗೌಡನ ಕಡೆಯವರೇ ಮಾಡಿದ್ದಾರೆ ಎಂಬ ಅನುಮಾನದ ಬೆಂಕಿಯಲ್ಲಿ ಹೊಗೆ ಆಡ್ತಾನೇ ಇತ್ತು. ಗಂಡನ ಹತ್ಯೆ ಕಂಡ ವರಮಹಾಲಕ್ಷ್ಮಿ ಕಣ್ಣುಗಳಲ್ಲಿ ದ್ವೇಷದ ಬೆಂಕಿ ಹೊತ್ತಿಕೊಂಡಿತ್ತು.  ಚಿಕ್ಕತಿಮ್ಮೇಗೌಡನ ಫ್ಯಾಮಿಲಿಯನ್ನ ಮುಗಿಸಲೇಬೇಕು ಅಂತ ರೌಡಿ ಲಕ್ಷ್ಮಣ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದವರಿಗೆ 70 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಳು.

ರೌಡಿ ಲಕ್ಷ್ಮಣ ಕೊಲೆ ಕೇಸ್ ಸೇರಿದಂತೆ 25 ಕ್ಕೂ ಹೆಚ್ಚು ಪ್ರಕರಣದ ಆರೋಪಿ ಕ್ಯಾಟ್‌ರಾಜ ಬೆಳಗಾವಿಯ ಹಿಂಡಲಗಾ ಜೈಲಲ್ಲಿದ್ದಾನೆ. ಮತ್ತೊಬ್ಬ ಆರೋಪಿ ಹೇಮಂತ್ ಅಲಿಯಾಸ್ ಹೇಮಿ  ಬಳ್ಳಾರಿ ಜೈಲಿನಲ್ಲಿದ್ದಾನೆ. ಚಿಕ್ಕತಿಮ್ಮೇಗೌಡನ ತಮ್ಮಂದಿರಾದ  ನಟರಾಜ್‌ , ಹೇಮಂತ್‌ನನ್ನ ಮುಗಿಸಲು ವರಮಹಾಲಕ್ಷ್ಮಿ ಇವರಿಬ್ಬರಿಗೂ 70 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದು, ಈಗಾಗ್ಲೇ 4-5 ಲಕ್ಷವನ್ನ ಅವರ ಕೈಸೇರಿಸಿದ್ದಳು ಎನ್ನಲಾಗಿದೆ.

ಜೈಲಿನಲ್ಲೇ ಕುಳಿತು ಸ್ಕೆಚ್ ಹಾಕಿದ ಕ್ಯಾಟ್ ರಾಜ ಮತ್ತು  ಹೇಮಿ, ಹೇಮಿ ಸೋದರ ಚೇತನ್‌ ಸೇರಿದಂತೆ ಅವನ ಸಹಚರರಿಗೆ ಡೀಲ್ ಕೊಟ್ಟರು.  ಡೀಲ್ ತಗೊಂಡು ಫೀಲ್ಡಿಗಳಿದ ಅವರು, ಕಳೆದ ವಾರ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆಗೆ ಹೊಂಚು ಹಾಕ್ತಿದ್ದಾಗ  ಪೊಲೀಸರು ಬಲೆಗೆ ಬೀಳಿಸಿದರು. ಈ ವೇಳೆ ವರಮಹಾಲಕ್ಷ್ಮಿಯ ಮಹಾ ಸ್ಕೆಚ್ ಬಯಲಾಯಿತು.

ಸದ್ಯ ಸುಪಾರಿ ಪಡೆದಿದ್ದ ರೌಡಿ ಹೇಮಿ‌ ಸಹೋದರ ಚೇತು ಸೇರಿದಂತೆ 9 ಮಂದಿಯನ್ನ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನ ವಿಷಯ ತಿಳಿದ ವರಮಹಾಲಕ್ಷ್ಮಿ ಎಸ್ಕೇಪ್ ಆಗಿದ್ದಾಳೆ.
Published by: Latha CG
First published: July 29, 2020, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading