HOME » NEWS » State » BANGALORE CRIME NEWS BIKE THIEVE ARRESTED BY BAGALGUNTE POLICE TODAY LG

ಕೇವಲ ಸ್ಪ್ಲೆಂಡರ್ ಬೈಕ್​ಗಳನ್ನೇ ಕದಿಯುತ್ತಿದ್ದ ಆರೋಪಿ ಅರೆಸ್ಟ್; 18 ಬೈಕ್​ಗಳ ವಶ

ಸ್ಪ್ಲೆಂಡರ್ ಬೈಕ್​ಗಳನ್ನು ಕದಿಯುವುದು ತುಂಬಾ ಸುಲಭ. ಅಲ್ಲದೆ ಇದಕ್ಕೆ ಬೇಡಿಕೆಯೂ ಜಾಸ್ತಿ ಇತ್ತು. ಹೀಗಾಗಿ ಖದೀಮರು ಸ್ಪ್ಲೆಂಡರ್ ಬೈಕ್ ಮೇಲೆ ಕಣ್ಣು ಹಾಕಿದ್ದರು ಎನ್ನಲಾಗಿದೆ.

news18-kannada
Updated:May 26, 2020, 3:28 PM IST
ಕೇವಲ ಸ್ಪ್ಲೆಂಡರ್ ಬೈಕ್​ಗಳನ್ನೇ ಕದಿಯುತ್ತಿದ್ದ ಆರೋಪಿ ಅರೆಸ್ಟ್; 18 ಬೈಕ್​ಗಳ ವಶ
ಬೈಕ್​ಗಳು ಹಾಗೂ ಆರೋಪಿ ಪೊಲೀಸರ ವಶದಲ್ಲಿ
  • Share this:
ಬೆಂಗಳೂರು(ಮೇ 26): ಕೇವಲ ಸ್ಪ್ಲೆಂಡರ್ ಬೈಕ್​ಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. 

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಬಂಧಿತನಿಂದ 18 ಸ್ಪ್ಲೆಂಡರ್ ಬೈಕ್​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಶಶಿಕುಮಾರ್ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ನರಸಿಂಹಮೂರ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಶಶಿಕುಮಾರ್ ಕೇವಲ ಸ್ಪ್ಲೆಂಡರ್ ಬೈಕ್​ಗಳನ್ನು ಮಾತ್ರ ಕದಿಯುತ್ತಿದ್ದ. ಕದ್ದ ಬೈಕ್​ಗಳನ್ನು ಮತ್ತೊಬ್ಬ ಆರೋಪಿ ಎನ್ನಲಾದ ನರಸಿಂಹಮೂರ್ತಿ  ಮೂಲಕ ಮಾರಾಟ ಮಾಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ಲಾಕ್​​ಡೌನ್ ಎಫೆಕ್ಟ್​ನಿಂದಾಗಿ ಕಹಿಯಾದ ಜೇನು ಕೃಷಿ; ನಷ್ಟದಲ್ಲಿ ದಕ್ಷಿಣ ಕನ್ನಡ ಜೇನು ಬೆಳೆಗಾರರು

ಸ್ಪ್ಲೆಂಡರ್ ಬೈಕ್​ಗಳನ್ನು ಕದಿಯುವುದು ತುಂಬಾ ಸುಲಭ. ಅಲ್ಲದೆ ಇದಕ್ಕೆ ಬೇಡಿಕೆಯೂ ಜಾಸ್ತಿ ಇತ್ತು. ಹೀಗಾಗಿ ಖದೀಮರು ಸ್ಪ್ಲೆಂಡರ್ ಬೈಕ್ ಮೇಲೆ ಕಣ್ಣು ಹಾಕಿದ್ದರು ಎನ್ನಲಾಗಿದೆ.

ಸದ್ಯ ತಲೆ ಮರೆಸಿಕೊಂಡಿರುವ ಆರೋಪಿ ನರಸಿಂಹಮೂರ್ತಿಗಾಗಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
First published: May 26, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories