ಕ್ಯಾಬ್ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ; ಬೆಂಗಳೂರಲ್ಲಿ ಉಬರ್ ಚಾಲಕನ ಬಂಧನ

ಫೆ. 1ರಂದು ಬೆಂಗಳೂರಿನ ಯುವತಿ ತನ್ನ ಆಫೀಸಿನಿಂದ ಮನೆಗೆ ಹೋಗುವಾಗ ಉಬರ್ ಕ್ಯಾಬ್ ಬುಕ್ ಮಾಡಿದ್ದಳು. ಆದರೆ, ರಾಮ್ ಮೋಹನ್ ಎಂಬ ಚಾಲಕ ಆಕೆಗೆ ಲೈಂಗಿಕ ಕಿರುಕುಳನ ನೀಡಿದ್ದರಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಊಬರ್ ಚಾಲಕ ರಾಮ್ ಮೋಹನ್

ಊಬರ್ ಚಾಲಕ ರಾಮ್ ಮೋಹನ್

  • Share this:
ಬೆಂಗಳೂರು (ಫೆ. 17): ಮಹಾನಗರಗಳಲ್ಲಿ ದಿನದ 24 ಗಂಟೆಗಳೂ ಜನ ಸಂಚರಿಸುತ್ತಲೇ ಇರುತ್ತಾರೆ.  ಕೆಲವು ಆಫೀಸ್​ಗಳು ರಾತ್ರಿಯೂ ತೆರೆದಿರುವುದರಿಂದ  ಸುರಕ್ಷತೆಯ ದೃಷ್ಟಿಯಿಂದ ಹಲವು ಉದ್ಯೋಗಿಗಳು ಸ್ವಂತ ವಾಹನದ ಬದಲು ಕ್ಯಾಬ್, ಆಟೋಗಳನ್ನು ಅವಲಂಬಿಸುತ್ತಾರೆ. ಆದರೆ, ಈ ಕ್ಯಾಬ್​ಗಳು ಎಷ್ಟರ ಮಟ್ಟಿಗೆ ಸುರಕ್ಷಿತ? ಎಂಬ ಪ್ರಶ್ನೆ ಆಗಾಗ ಉದ್ಭವವಾಗುತ್ತಲೇ ಇರುತ್ತದೆ. ಅದರಲ್ಲೂ ಮಹಿಳಾ ಪ್ರಯಾಣಿಕರಿಗೆ ಕ್ಯಾಬ್, ಆಟೋಗಳಲ್ಲಿ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಸಂಸ್ಥೆಗಳು ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದ್ದರೂ ಆಗಾಗ ಅಹಿತಕರ ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತದೆ.

ಬೆಂಗಳೂರಿನಲ್ಲಿ ಅದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ತನ್ನ ಕ್ಯಾಬ್ ಹತ್ತಿದ ಯುವತಿಗೆ ಕಿರುಕುಳ ನೀಡಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಫೆ. 1ರಂದು ಈ ಘಟನೆ ನಡೆದಿದ್ದು, ಉತ್ತರ ಭಾರತದ ಯುವತಿ ತನ್ನ ಆಫೀಸಿನಿಂದ ಮನೆಗೆ ಹೋಗುವಾಗ ಊಬರ್ ಕ್ಯಾಬ್ ಬುಕ್ ಮಾಡಿದ್ದಳು. ಆದರೆ, ಹಿಂದೂಪುರ ಮೂಲದ ರಾಮ್ ಮೋಹನ್ ಎಂಬ ಚಾಲಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ, ಅರ್ಧ ದಾರಿಯಲ್ಲೇ ಕ್ಯಾಬ್​ನಿಂದ ಇಳಿದ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಕ್ರೀಡಾ ಸಚಿವರ ಆಹ್ವಾನ ನಿರಾಕರಿಸಿದ ಕಂಬಳ ವೀರ ಶ್ರೀನಿವಾಸ್​ ಗೌಡ; ಕಾರಣವೇನು ಗೊತ್ತಾ?

ಫೆ. 1ರಂದು ಹೆಬ್ಬಾಳದ ಬಳಿ ಯುವತಿ ಆಫೀಸಿನಿಂದ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ. ಕ್ಯಾಬ್ ಹತ್ತಿದ ಆಕೆಯ ಕಾಲನ್ನು ಹಿಡಿದು, ಟಿ-ಶರ್ಟ್ ಒಳಗೆ ಕೈ ಹಾಕಲು ಯತ್ನಿಸಿದ್ದ ಕಾಮುಕ ಚಾಲಕನ ನಡವಳಿಕೆಯಿಂದ ಗಾಬರಿಯಾದ ಯುವತಿ ಆತನೊಂದಿಗೆ ಜಗಳವಾಡಿ, ಅರ್ಧ ದಾರಿಯಲ್ಲೇ ಕ್ಯಾಬ್​ನಿಂದ ಕೆಳಗೆ ಇಳಿದಿದ್ದಾಳೆ. ಕೆ.ಆರ್​. ಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 354 (ಎ) ಅಡಿ ಕೆ.ಆರ್. ಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

 
First published: