ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಫ್ಲೈ ಓವರ್​ನಲ್ಲಿ ಸಂಚರಿಸುವವರೇ ಎಚ್ಚರ!; ಇಲ್ಲಿ ರಾತ್ರಿ ಏನೆಲ್ಲ ನಡೆಯುತ್ತೆ ಗೊತ್ತಾ?

ಹಗಲಿಡೀ ಲಕ್ಷಾಂತರ ಜನರು ಸಂಚರಿಸುವ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ರಾತ್ರಿಯಾಗುತ್ತಿದ್ದಂತೆ ಪ್ರೇಮಿಗಳ ಅಡ್ಡವಾಗುತ್ತಿದೆ. ಮಧ್ಯರಾತ್ರಿ 3 ಗಂಟೆಯವರೆಗೂ ಕುಡಿದು, ಪಟಾಕಿ ಸಿಡಿಸಿ ಮಜಾ ಮಾಡಿದರೂ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್​ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯವರು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.

news18-kannada
Updated:November 11, 2019, 11:55 AM IST
ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಫ್ಲೈ ಓವರ್​ನಲ್ಲಿ ಸಂಚರಿಸುವವರೇ ಎಚ್ಚರ!; ಇಲ್ಲಿ ರಾತ್ರಿ  ಏನೆಲ್ಲ ನಡೆಯುತ್ತೆ ಗೊತ್ತಾ?
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್
  • Share this:
ಆನೇಕಲ್ (ನ. 11): ಬೆಂಗಳೂರಿನಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಜೀವನ ಶೈಲಿ. ಇಲ್ಲಿ ಸಂಪ್ರದಾಯವನ್ನು ಪಾಲಿಸುವವರೂ ಇದ್ದಾರೆ, ಆಧುನಿಕ ಜೀವನಶೈಲಿಯಲ್ಲಿ ಮುಳುಗಿದವರೂ ಇದ್ದಾರೆ. ಪ್ರತಿಯೊಬ್ಬರಿಗೂ ಅವರಿಗೆ ಇಷ್ಟ ಬಂದಂತೆ ಬದುಕಲು ಹಕ್ಕಿದೆ. ಆದರೆ, ಅದರಿಂದ ಬೇರೆಯವರಿಗೆ ತೊಂದರೆ ಆಗಬಾರದು ಅಷ್ಟೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಸಲುವಾಗಿ ಅಂಡರ್​ಪಾಸ್, ಫ್ಲೈಓವರ್​, ಸ್ಕೈವಾಕ್​ಗಳನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಮೆಟ್ರೋ ಕೂಡ ಟ್ರಾಫಿಕ್ ಸಮಸ್ಯೆಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಜನರ ಉಪಯೋಗಕ್ಕಾಗಿ ನಿರ್ಮಿಸಿರುವ ಈ ಸೌಲಭ್ಯಗಳನ್ನು ಬಹಳಷ್ಟು ಜನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ರಾತ್ರಿ ವೇಳೆ ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚೇನೂ ವಾಹನ ದಟ್ಟಣೆ ಇರುವುದಿಲ್ಲ. ಅದರಲ್ಲೂ ಫ್ಲೈಓವರ್ ಹಾಗೂ ಅಂಡರ್​ಪಾಸ್​ನಲ್ಲಿ ವಾಹನಗಳು ಸಂಚರಿಸುವುದು ಸ್ವಲ್ಪ ಕಡಿಮೆಯೇ. ಇದನ್ನೇ ಬಂಡವಾಳವಾಗಿಸಿಕೊಂಡು ಫ್ಲೈಓವರ್​ಗಳನ್ನು ಡಿಸ್ಕೋಥೆಕ್​ ಆಗಿ ಪರಿವರ್ತಿಸಿಕೊಂಡಿರುವ ಯುವಕ-ಯುವತಿಯರು ರಾತ್ರಿ ಸಂಚರಿಸುವವರಿಗೆ ದೊಡ್ಡ ತಲೆನೋವಾಗಿದ್ದಾರೆ.

ಬೆಂಗಳೂರಿನ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ರಾತ್ರಿಯಾಗುತ್ತಿದ್ದಂತೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಕಾರು, ಬೈಕ್ ನಿಲ್ಲಿಸಿಕೊಂಡು ರಾಜಾರೋಷವಾಗಿ ಎಣ್ಣೆ ಪಾರ್ಟಿ ಮಾಡುವ ಯುವಕ-ಯುವತಿಯರು ರಸ್ತೆ ಮಧ್ಯೆಯೇ ಪಟಾಕಿ ಸಿಡಿಸಿ ಗಲಾಟೆಯೆಬ್ಬಿಸುತ್ತಾರೆ. ಪಾರ್ಟಿ ಮಾಡಲು ಅತ್ಯಂತ ಸೂಕ್ತ ಹಾಗೂ ಪ್ರೈವಸಿ ಇರುವ ಸ್ಥಳ ಎಂದು ಫ್ಲೈಓವರ್ ಕಡೆ ಹೊರಡುವ ಯುವಕ-ಯುವತಿಯರು ರಾತ್ರಿ ಫ್ಲೈಓವರ್​ ಮೇಲೆ ಸಂಚರಿಸುವವರಿಗೂ ತೊಂದರೆ ಕೊಡುತ್ತಿದ್ದಾರೆ. ರಸ್ತೆ ಮಧ್ಯದಲ್ಲೇ ಪಾರ್ಟಿ ಮಾಡುವ ಯುವಕ-ಯುವತಿಯರು ಫ್ಲೈಓವರ್​ನಲ್ಲಿ ವಾಹನ ನಿಲ್ಲಿಸಲು ಮಾಡಿರುವ ಸ್ಥಳವನ್ನೇ ಪಾರ್ಟಿ ಮಾಡುವ ಜಾಗವಾಗಿ ಮಾರ್ಪಡಿಸಿಕೊಂಡಿದ್ದಾರೆ.

ಅನರ್ಹ ಶಾಸಕರ ಸ್ಥಿತಿ ಇನ್ನೂ ಅತಂತ್ರ; ಉಪಚುನಾವಣೆ ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ?

ಹಗಲಿಡೀ ಲಕ್ಷಾಂತರ ಜನರು ಸಂಚರಿಸುವ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ರಾತ್ರಿಯಾಗುತ್ತಿದ್ದಂತೆ ಪ್ರೇಮಿಗಳ ಅಡ್ಡವಾಗುತ್ತಿದೆ. ಮಧ್ಯರಾತ್ರಿ 3 ಗಂಟೆಯವರೆಗೂ ಕುಡಿದು, ಪಟಾಕಿ ಸಿಡಿಸಿ ಮಜಾ ಮಾಡಿದರೂ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್​ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯವರು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಈ ಫ್ಲೈಓವರ್ ಅನ್ನು ಬೆಂಗಳೂರು ಎಲಿವೇಟೆಡ್ ಟೋಲ್ ಪ್ರೈವೇಟ್ ಲಿಮಿಟೆಡ್ ನಿರ್ವಹಣೆ ಮಾಡುತ್ತಿದೆ. ಹಣ ಪಡೆದು ಟಿಕೆಟ್ ನೀಡಿ ಕಳುಹಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಂಡಿರುವ ಈ ಸಂಸ್ಥೆಯವರು ಪುಂಡು-ಪೋಕರಿಗಳ ಹಾವಳಿಗೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಇದರಿಂದ ರಾತ್ರಿ ಹೊತ್ತು ಇಲ್ಲಿನ ಫ್ಲೈಓವರ್​ನಲ್ಲಿ ಸಂಚರಿಸಲು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ.

(ವರದಿ: ಆದೂರು ಚಂದ್ರು) 

First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ