ಬೆಂಗಳೂರಿನಲ್ಲಿ 5 ಸಾವಿರ ಬೆಲೆಯ ಬ್ರೀಡ್ ನಾಯಿ ಕಳುವು; ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಳುವಾದ ನಾಯಿ ಮಿಶ್ರತಳಿಯದ್ದಾಗಿದ್ದು, ಅದಕ್ಕೆ ಲಿಯೋ ಎಂದು ಹೆಸರಿಡಲಾಗಿತ್ತು. ಸುಮಾರು 5 ಸಾವಿರ ಬೆಲೆ ಬಾಳುವ ನಾಯಿಮರಿ ಎಂದು ತಿಳಿದು ಬಂದಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಾಯಿ ಕಳ್ಳನ ವಿರುದ್ಧ ದೂರು ದಾಖಲಾಗಿದೆ.

ಕಳುವಾದ ನಾಯಿ

ಕಳುವಾದ ನಾಯಿ

 • Share this:
  ಬೆಂಗಳೂರು(ಜು.28): ಕೊರೋನಾ ಲಾಕ್​ಡೌನ್ ಆದಾಗಿನಿಂದ ಕೆಲ ವರ್ಗದ ಜನರು ಬದುಕು ದೂಡಲು ತುಂಬಾ ಕಷ್ಟಪಡುತ್ತಿದ್ದಾರೆ. ಇನ್ನೂ ಕೆಲವರು ಕೈಯಲ್ಲಿ ಕೆಲಸವಿಲ್ಲದೇ, ಹಣ ಸಿಗದೆ ಪರದಾಡುತ್ತಿದ್ದು, ಕೊನೆಗೆ ದುಡ್ಡಿಗಾಗಿ ಕಳ್ಳತನದ ಹಾದಿಯನ್ನೂ ಹಿಡಿಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಮನೆಗಳ್ಳತನ, ಸರಗಳ್ಳತನ ಮಾತ್ರವಲ್ಲದೇ ಈಗ ನಾಯಿಗಳ ಕಳ್ಳತನವೂ ಸಹ ಆಗುತ್ತಿದೆ. ಅದುವೇ ಹೆಚ್ಚಾಗಿ ಬ್ರೀಡ್ ನಾಯಿಗಳನ್ನೇ ಕದಿಯುತ್ತಿದ್ದಾರೆ.

  ಯಾಕೆಂದರೆ, ಲಾಕ್​ಡೌನ್​ ನಂತರ ಬ್ರೀಡ್​ ನಾಯಿಗಳ ಬೆಲೆ ಗಗನಕ್ಕೇರಿದೆ. ಮೊದಲಿಗಿಂತ ಎರಡು-ಮೂರು ಪಟ್ಟು ಹೆಚ್ಚು ಬೆಲೆಗೆ ನಾಯಿ ಮರಿಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ನಾಯಿ ಮರಿಗಳನ್ನು ಕಳ್ಳತನ ಮಾಡಿ ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಿರುವ ಘಟನೆಗಳು ಆಗಾಗ್ಗೆ ಕೇಳಿ ಬರುತ್ತಿವೆ.

  ಇಂತಹದ್ದೇ ಒಂದು ಘಟನೆ ಇಂದು ಸಿಲಿಕಾನ್ ಸಿಟಿ ಬೆಂಗಳೂರಿಬ ಬಸವನಗುಡಿಯಲ್ಲಿ ನಡೆದಿದೆ. ನಾಯಿ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಬಸವನಗುಡಿಯ ಎನ್ಆರ್ ಕಾಲೋನಿಯಲ್ಲಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ನಾಯಿ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ.

  ದೇಶದ ಆರ್ಥಿಕತೆ ಕುಸಿತ: ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪರಿಶೀಲನಾ ಸಭೆ

  ಮೋನಿಕಾ‌ ಎಂಬಾಕೆಯ ನಾಯಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಮಹಿಳೆ ಮನೆಕೆಲಸದಲ್ಲಿ ನಿರತರಾಗಿದ್ದಾಗ ಸಮಯ ನೋಡಿಕೊಂಡು ಆ ಖತರ್ನಾಕ್  ಕಳ್ಳ ನಾಯಿ ಕದ್ದೊಯ್ದಿದ್ದಾನೆ.

  ಕಳುವಾದ ನಾಯಿ ಮಿಶ್ರತಳಿಯದ್ದಾಗಿದ್ದು, ಅದಕ್ಕೆ ಲಿಯೋ ಎಂದು ಹೆಸರಿಡಲಾಗಿತ್ತು. ಸುಮಾರು 5 ಸಾವಿರ ಬೆಲೆ ಬಾಳುವ ನಾಯಿಮರಿ ಎಂದು ತಿಳಿದು ಬಂದಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಾಯಿ ಕಳ್ಳನ ವಿರುದ್ಧ ದೂರು ದಾಖಲಾಗಿದೆ.

  ಲಾಕ್​ಡೌನ್​ ಬಳಿಕ ನಗರದಲ್ಲಿ ಕಳ್ಳತನ ಪ್ರಕರಣಗಳು ಸಹ ಹೆಚ್ಚಾಗಿವೆ ಎನ್ನಲಾಗಿದೆ. ಈ ಬ್ರೀಡ್ ನಾಯಿಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಕಳ್ಳರು ಈ ನಾಯಿಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದಾರೆ.
  Published by:Latha CG
  First published: