HOME » NEWS » State » BANGALORE CRIME NEWS A MAN KILLED HIS SISTER HUSBAND LATE NIGHT AT BANGALORE LG

Bangalore Crime News: ಅಕ್ಕನೊಂದಿಗೆ ಜಗಳ ಮಾಡಿದ ಭಾವನನ್ನು ಕೊಲೆ ಮಾಡಿದ ಬಾಮೈದ

ಕೂಲಿನಗರದಿಂದ ತನ್ನ ಇಬ್ಬರು ಗೆಳೆಯರ ಜೊತೆ ಅಕ್ಕನ ಮನೆ ಬಳಿಗೆ ಖಾದರ್ ಬಂದಿದ್ದ. ಈ ವೇಳೆ ಭಾವನ ಜೊತೆ ಖಾದರ್ ಮಾತಿಗೆ ನಿಂತಿದ್ದಾನೆ. ಮಾತಿಗೆ ಮಾತು ಬೆಳೆದು ಭಾವನ ಮೇಲೆ ಖಾದರ್​ ಹಲ್ಲೆ ಮಾಡಿದ್ದಾನೆ. ಬಳಿಕ ಭಾವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

news18-kannada
Updated:February 15, 2021, 8:39 AM IST
Bangalore Crime News: ಅಕ್ಕನೊಂದಿಗೆ ಜಗಳ ಮಾಡಿದ ಭಾವನನ್ನು ಕೊಲೆ ಮಾಡಿದ ಬಾಮೈದ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಫೆ.15): ಅಕ್ಕನ ಜೊತೆ ಜಗಳ ತೆಗೆದ ಭಾವನನ್ನು ಬಾಮೈದ ಹತ್ಯೆಗೈದಿರುವ ಘಟನೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ. ನಂದಿನಿ ಲೇಔಟ್​​​ ಕಂಠೀರವನಗರ ನಿವಾಸಿ ಅಜೀಮ್​ ಉಲ್ಲಾ ಕೊಲೆಯಾದ ವ್ಯಕ್ತಿ. ಖಾದರ್ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿ ಟ್ರಾನ್ಸ್​​​ಪೋರ್ಟ್​​​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕೆಲವು ವರ್ಷಗಳ ಹಿಂದೆ ಖಾದರ್ ಸಹೋದರಿಯನ್ನ ಅಜೀಮ್​ ಉಲ್ಲಾ ಮದುವೆಯಾಗಿದ್ದ. ಬಳಿಕ ಪತ್ನಿ ಜೊತೆ ನಂದಿನಿ ಲೇಔಟ್ ನಲ್ಲಿ ವಾಸವಿದ್ದ. ಅಜೀಮ್​ ಉಲ್ಲಾ ಮದುವೆ ಬಳಿಕ ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ. ನಿನ್ನೆ ಕೂಡ ಗಂಡ-ಹೆಂಡತಿ ನಡುವೆ ಮನೆಯಲ್ಲಿ ಜಗಳವಾಗಿದೆ. ಸಂಜೆ 5 ಗಂಟೆಗೆ ಶುರುವಾದ ಜಗಳ ತಡರಾತ್ರಿವರೆಗೂ ನಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LPG Price Hike - ಇವತ್ತಿನಿಂದ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಏರಿಕೆ; ಇಲ್ಲಿದೆ ಹೊಸ ದರ

ಈ ವೇಳೆ ಅಕ್ಕ- ಭಾವ ಜಗಳದ ವಿಚಾರ ತಮ್ಮ ಖಾದರ್​​​ಗೆ ತಿಳಿದಿದೆ. ಆಗ ತಾನು ವಾಸವಿದ್ದ ಕೂಲಿನಗರದಿಂದ ತನ್ನ ಇಬ್ಬರು ಗೆಳೆಯರ ಜೊತೆ ಅಕ್ಕನ ಮನೆ ಬಳಿಗೆ ಖಾದರ್ ಬಂದಿದ್ದ. ಈ ವೇಳೆ ಭಾವನ ಜೊತೆ ಖಾದರ್ ಮಾತಿಗೆ ನಿಂತಿದ್ದಾನೆ. ಮಾತಿಗೆ ಮಾತು ಬೆಳೆದು ಭಾವನ ಮೇಲೆ ಖಾದರ್​ ಹಲ್ಲೆ ಮಾಡಿದ್ದಾನೆ. ಬಳಿಕ ಭಾವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Youtube Video

ತಡರಾತ್ರಿ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಖಾದರ್​ ತನ್ನ ಭಾವನನ್ನು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನಂದಿನಿ ಲೇಔಟ್​ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.
Published by: Latha CG
First published: February 15, 2021, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories