ನಿರ್ಗಮಿತ ಪೊಲೀಸ್ ಕಮೀಷನರ್ ಭಾಸ್ಕರ್​ ರಾವ್ ಹೆಸರಲ್ಲಿ ಉದ್ಯಮಿಗೆ ವಂಚನೆ; ಸಿಸಿಬಿ ಪೊಲೀಸರಿಂದ ಆರೋಪಿಯ ಬಂಧನ

ಕೆಲ ದಿನಗಳ ಬಳಿಕ ಕಂಪನಿಯ ವ್ಯವಹಾರ ತಿಳಿದುಕೊಂಡ  ಶ್ರೀನಿವಾಸ್ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ನಿಮಗೆ ಸಾಲ ಕೊಟ್ಟವರು ಕಮೀಷನರ್ ಕಚೇರಿಗೆ ಬಂದು ದೂರು ಕೊಡಲು ಮುಂದಾಗಿದ್ದಾರೆ. ಎರಡು ಲಕ್ಷ ಕೊಟ್ಟರೆ ಪ್ರಕರಣವನ್ನ ಮುಚ್ಚಿ ಹಾಕುತ್ತೇನೆ ಎಂದು ನಂಬಿಸಿದ್ದಾನೆ.

news18-kannada
Updated:August 1, 2020, 4:11 PM IST
ನಿರ್ಗಮಿತ ಪೊಲೀಸ್ ಕಮೀಷನರ್ ಭಾಸ್ಕರ್​ ರಾವ್ ಹೆಸರಲ್ಲಿ ಉದ್ಯಮಿಗೆ ವಂಚನೆ; ಸಿಸಿಬಿ ಪೊಲೀಸರಿಂದ ಆರೋಪಿಯ ಬಂಧನ
ಬಂಧಿತ ಆರೋಪಿ
  • Share this:
ಬೆಂಗಳೂರು(ಆ.01): ಬೆಂಗಳೂರಿನ ನಿರ್ಗಮಿತ  ಪೊಲೀಸ್ ಕಮೀಷನರ್ ಭಾಸ್ಕರ್​ರಾವ್​ ಹೆಸರಿನಲ್ಲಿ ಉದ್ಯಮಿಗೆ ವಂಚಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ನನಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಪರಿಚಯವಿದ್ದು, ನಿಮ್ಮ ವಿರುದ್ಧ ಯಾವುದೇ ದೂರು ಬರದಂತೆ ನೋಡಿಕೊಳ್ಳುತ್ತೇನೆ ಎಂದು ಉದ್ಯಮಿಯೊಬ್ಬರಿಗೆ ಮೋಸ ಮಾಡಲು ಮುಂದಾಗಿದ್ದ ಶ್ರೀನಿವಾಸ್ ಎಂಬಾತ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ ಆರೋಪಿ ಶ್ರೀನಿವಾಸ್ ಅಲಿಯಾಸ್ ಕಿರಣ್ ಮನೋಹರ್ ಎಂಬುವರಿಗೆ ಸಾಲದ ವಿಚಾರದಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದ ಎಂದು ತಿಳಿದು ಬಂದಿದೆ. ಉದ್ಯಮಿ ಮನೋಹರ್ ಅದ್ವಿಕ್ ಪವರ್ ಟೆಕ್ ಎನ್ನುವ ಕಂಪನಿ ನಡೆಸುತ್ತಿದ್ದು, ಕಂಪನಿ ವಿಚಾರಕ್ಕೆ ಮನೋಹರ್ ಕೆಲ ವ್ಯಕ್ತಿಗಳ ಬಳಿ ಸಾಲ‌ ಮಾಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇದೇ ವೇಳೆ ಸ್ನೇಹಿತರ ಮೂಲಕ ಮನೋಹರ್​ ಗೆ ಶ್ರೀನಿವಾಸ್  ಪರಿಚಯವಾಗಿದ್ದ. ತಾನು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಬಳಿ ಸೆಕ್ರೆಟರಿ ಆಗಿದ್ದು ನಿಮಗೆ ಸಹಾಯ ಮಾಡುತ್ತೇನೆ ಎಂದು ನಂಬಿಸಿದ್ದ ಎನ್ನಲಾಗಿದೆ.

ಸರ್ಕಾರ ಕೊರೋನಾ ರೋಗಿಗಳ ಹೆಸರಲ್ಲಿ ಹಣ ಲೂಟಿ ಆರೋಪ; ನ್ಯಾಯಾಂಗ ತನಿಖೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ

ಕೆಲ ದಿನಗಳ ಬಳಿಕ ಕಂಪನಿಯ ವ್ಯವಹಾರ ತಿಳಿದುಕೊಂಡ  ಶ್ರೀನಿವಾಸ್ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ನಿಮಗೆ ಸಾಲ ಕೊಟ್ಟವರು ಕಮೀಷನರ್ ಕಚೇರಿಗೆ ಬಂದು ದೂರು ಕೊಡಲು ಮುಂದಾಗಿದ್ದಾರೆ. ಎರಡು ಲಕ್ಷ ಕೊಟ್ಟರೆ ಪ್ರಕರಣವನ್ನ ಮುಚ್ಚಿ ಹಾಕುತ್ತೇನೆ ಎಂದು ನಂಬಿಸಿದ್ದಾನೆ. ಈ ವೇಳೆ ಅನುಮಾನ ಬಂದು ಕಮೀಷನರ್ ಕಚೇರಿಯಲ್ಲಿ ವಿಚಾರಿಸಿದಾಗ ಶ್ರೀನಿವಾಸನ ಲೀಲೆಗಳು ಬೆಳಕಿಗೆ ಬಂದಿವೆ. ಕೂಡಲೇ ಶ್ರೀನಿವಾಸ್ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮನೋಹರ್ ದೂರು ದಾಖಲಿಸಿದ್ದಾರೆ.

ಪ್ರಕರಣ ಸಿಸಿಬಿಗೆ ವರ್ಗಾಯಿಸಿದ ಕಮೀಷನರ್

ಕಮೀಷನರ್ ಹೆಸರಲ್ಲಿ ವಂಚನೆ ಮಾಡುತ್ತಿರುವುದು ಗೊತ್ತಾದ ಹಿನ್ನಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿದ್ದರು. ಸಿಸಿಬಿ ತನಿಖೆ ವೇಳೆ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬಂದಿವೆ. ಆರೋಪಿ ಶ್ರೀನಿವಾಸ್  ಮೊಬೈಲ್ ಫೋನ್ ನಲ್ಲಿ ಹಲವು ಯುವತಿಯರ ಅರೆ ಬೆತ್ತಲೆ ಚಿತ್ರಗಳು ಮತ್ತು ಯುವತಿಯರ ಜೊತೆ ಅನುಚಿತವಾಗಿ ಚಾಟ್ ಮಾಡಿರುವುದು ಗೊತ್ತಾಗಿದೆ.
ಇನ್ನು, ಪೊಲೀಸರ ವಿಚಾರಣೆ ವೇಳೆ ತಾನು ಕೆಜಿಎಫ್ ಹಾಗೂ ಶ್ರೀಮನ್ನಾರಾಯಣ ಸಿನಿಮಾದಲ್ಲಿ ನಟಿಸಿದ್ದೆ ಎಂದಿದ್ದು, ತಮಗೆ ನಟರು ಮತ್ತು ರಾಜಕಾರಣಿಗಳ ಪರಿಚಯವಿದೆ ಎಂದು ಬಾಯ್ಬಿಟ್ಟಿದ್ದಾನೆ‌. ಬ್ರ್ಯಾಂಡ್ ಅಂಬಾಸಿಡರ್ ಹಾಗೂ ಮಾಡೆಲಿಂಗ್ ಮಾಡ್ತೀನಿ ಅಂತ ಯುವತಿಯರಿಗೆ ಅಮಿಷವೊಡ್ಡಿ ಮೋಸ ಮಾಡಿದ್ದ ಎಂಬುದು ಸಹಬೆಳಕಿಗೆ ಬಂದಿದೆ. ಶ್ರೀನಿವಾಸನ ಮತ್ತಷ್ಟು ಕರ್ಮಕಾಂಡಗಳು ಸಿಸಿಬಿ ತನಿಖೆ ವೇಳೆ  ಬಯಲಿಗೆ ಬಂದಿವೆ.
Published by: Latha CG
First published: August 1, 2020, 4:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading