news18-kannada Updated:January 19, 2021, 6:20 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು(ಜ.19): ಆವತ್ತು ಮಟಮಟ ಮಧ್ಯಾಹ್ನದ ಸಮಯ. ಬೆಂಗಳೂರಿಗೆ ಹೊಂದಿಕೊಂಡೇ ಇರುವ ಆವಲಹಳ್ಳಿ ಪೊಲೀಸರಿಗೆ ಫೋನ್ ಕರೆಯೊಂದು ಹೋಗಿತ್ತು. ಕರೆ ಸ್ವೀಕರಿಸಿ ಸ್ಪಾಟ್ ಗೆ ಹೋಗಿದ್ದ ಪೊಲೀಸರೇ ಒಂದು ಕ್ಷಣ ಬೆಚ್ಚಿಬಿದ್ದಿದ್ರು. ಯಾಕಂದ್ರೆ, ಕೆರೆಯಂಚಲ್ಲೇ ಯುವಕನೊಬ್ಬನ ಶವ ಕಂಡಿತ್ತು. ಅದು ಬರೀ ಶವವಾಗಿರಲಿಲ್ಲ, ರುಂಡ ಮುಂಡ ಬೇರ್ಪಟ್ಟ, ಕೈ ಕಾಲುಗಳೇ ಇಲ್ಲದೆ ಭೀಬತ್ಸವಾಗಿ ಕೊಲೆಯಾಗಿದ್ದ ಅಪರಿಚಿತ ಯುವಕನೊಬ್ಬನ ಶವ. ಆದ್ರೆ, ಆ ಭೀಕರ ಕೊಲೆ ಹಿಂದೆ ಇದ್ದಿದ್ದು ಒಂದು ಭಯಾನಕ ಕಥೆ.
ಹೌದು, ಬೆಂಗಳೂರಿನ ಕೆ.ಆರ್ ಪುರಂಗೆ ಹೊಂದಿಕೊಂಡಿರೋ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಲೆಮಲ್ಲಪ್ಪನ ಚೆಟ್ಟಿ ಕೆರೆ,ಇದೇ ತಿಂಗಳ 12 ನೇ ತಾರೀಖು ಒಂದು ಭಯಾನಕ ಘಟನೆಗೆ ಮೂಕ ಸಾಕ್ಷಿಯಾಗಿತ್ತು.
ಯಾಕೆಂದರೆ ಕೆರೆ ಅಂಚಿನಲ್ಲೇ ನೀಲಿ ಬಣ್ಣದ ಟೀ ಶರ್ಟ್ ಇದ್ದ ಯುವಕನೊಬ್ಬನ ಶವ ಪತ್ತೆಯಾಗಿತ್ತು. ಮಾಹಿತಿ ಆಧರಿಸಿ ಸ್ಪಾಟ್ ಗೆ ಹೋಗಿದ್ದ ಆವಲಹಳ್ಳಿ ಪೊಲೀಸರು ಆ ಶವವನ್ನು ಕಂಡು ಒಂದು ಕ್ಷಣ ದಂಗಾಗಿ ಹೋಗಿದ್ದರು. ಯಾಕಂದ್ರೆ, ಅದು ರುಂಡ ಮುಂಡ ಕೈ ಕಾಲುಗಳು ಕತ್ತರಿಸಲ್ಪಟ್ಟಿದ್ದ ಶವ. ಈ ನಡುವೆ ಆವಲಹಳ್ಳಿ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ಮೃತ ದೇಹದ ಗುರುತು ಪತ್ತೆ ಹಚ್ಚಲು ಮುಂದಾಗಿದ್ರು..ಇದೇ ಸಮಯಕ್ಕೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿರೋದು ಗೊತ್ತಾಗಿತ್ತು. ಅಂದಹಾಗೆ ಆವಲಹಳ್ಳಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು , ಮಲ್ಲೇಶ್ವರಂ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಆಗಿದ್ದು ಒಬ್ಬನೇ ಆಗಿದ್ದ. ಹೆಸರು ಕೌಶಾಲ್ ಪ್ರಸಾದ್. ಈ ಕೌಶಾಲ್ ಪ್ರಸಾದ್ ನನ್ನು ಇಷ್ಟು ಬರ್ಬರವಾಗಿ ಕೊಲೆ ಮಾಡಿಸಿದ್ದು ಬೇರೆ ಯಾರೂ ಅಲ್ಲ, ಇವನಿಗೆ ಜನ್ಮಕೊಟ್ಟ ತಂದೆ ಕೇಶವ್ ಪ್ರಸಾದ್. ಒಡಹುಟ್ಟಿದ ತಮ್ಮ ಕೌಸ್ತುಭ್ ಮತ್ತವನ ಗೆಳೆಯರು.
Evening Digest: ಕೋವ್ಯಾಕ್ಸಿನ್ ಅಡ್ಡಪರಿಣಾಮ, ಆಸ್ಟ್ರೇಲಿಯಾ ವಿರುದ್ಧ ಭಾರತದ ಐತಿಹಾಸಿಕ ಗೆಲುವು; ಇಂದಿನ ಟಾಪ್ 10 ಸುದ್ದಿಗಳು
ಆದರೆ ಮಗ ಕೌಶಲ್ , ಯಾರೋ ಹುಡುಗಿಯನ್ನ ಲವ್ ಮಾಡ್ತಿದ್ದ. ಹುಡುಗಿ ಕಡೆಯವರೇ ಏನೋ ಮಾಡಿರ್ಬೇಕು. ಗೆಳೆಯರ ಜೊತೆ ಮನೆಯಿಂದ ಹೋದವನು ಈಗ ಕೊಲೆಯಾಗಿದ್ದಾನೆ ಅಂತ ಕಣ್ಣೀರಾಕಿದ್ದ. ಒಂದೊಂದು ಸಲ ಒಂದೊಂದು ಅನುಮಾನ ಪಡ್ತಾ ಪೊಲೀಸ್ರ ತನಿಖೆ ದಿಕ್ಕು ತಪ್ಪಿಸಲು ಪ್ಲಾನ್ ಹಾಕಿದ್ದ. ಆದ್ರೆ, ಪೊಲೀಸ್ರಿಗೆ ಯಾಕೋ ಅನುಮಾನ ಬಂದು ತಮ್ಮದೇ ಸ್ಟೈಲಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಅಸಲಿ ಕೃತ್ಯ ಬಾಯಿಬಿಟ್ಟಿದ್ದಾರೆ.
ದೊಡ್ಡ ಮಗನಾದ ಕೌಶಲ್ ಕಂಠಪೂರ್ತಿ ಕುಡಿದು ಮನೆಯಲ್ಲಿ ಸಿಕ್ಕಾಪಟ್ಟೆ ಗಲಾಟೆ ಮಾಡ್ತಿದ್ದನಂತೆ. ತಂದೆ-ತಮ್ಮನ ಮೇಲೂ ಪದೇ ಪದೇ ಹಲ್ಲೆ ಮಾಡಿ ಕೆಟ್ಟದಾಗಿ ಬೈಯ್ತಿದ್ದನಂತೆ. ಅವನ ಕಾಟ ತಾಳೋಕೆ ಆಗದೆ ಕಿರಿ ಮಗ ಕೌಸ್ತುಭ್ ನ ಸ್ನೇಹಿತರಿಗೆ 3 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದ. ಎಣ್ಣೆಯಲ್ಲಿ ನಿದ್ರೆ ಮಾತ್ರೆ ಹಾಕಿದ ಈ ಕಿರಾತಕರು ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಕೊಂದಿದ್ದರು.
ಸಾಕ್ಷಿ ಸಿಗಬಾರದು ಅಂತ ಮರ ಕಟ್ ಮಾಡೋ ಮಿಷಿನ್ ತಂದು ಅಂದರಿಂದಲೇ ರುಂಡ ಮುಂಡ ಕೈ ಕಾಲುಗಳನ್ನು ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿ ಕಾರಲ್ಲಿ ಆವಲಹಳ್ಳಿಯ ಎಲೆಮಲ್ಲಪ್ಪ ಚೆಟ್ಟಿ ಕೆರೆ ಅಂಚಲ್ಲೇ ಎಸೆದೋಗಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಹೆತ್ತ ತಂದೆ, ಒಡಹುಟ್ಟಿದ ತಮ್ಮನೇ ರಾಕ್ಷಸರಂತೆ ಇಷ್ಟು ಕ್ರೂರವಾಗಿ ಕೊಲೆ ಮಾಡಿ ಇದೀಗ ಜೈಲಲ್ಲಿ ಕಂಬಿ ಎಣಿಸ್ತಿರೋದು ವಿಪರ್ಯಾಸ.
Published by:
Latha CG
First published:
January 19, 2021, 6:20 PM IST