ಗಾಂಜಾ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಾಲನೆ; ಪ್ರಶ್ನಿಸಿದ ಪೊಲೀಸ್ ಕಾನ್ಸ್​​​ಟೇಬಲ್​​ಗೆ ಹಲ್ಲೆ

ಪುಂಡರ ಹಲ್ಲೆ ವೇಳೆ ಪೇದೆ ವಿದ್ಯಾಧರ್ ಕಾಲಿಗೆ ಬಲವಾದ ಗಾಯಗಳಾಗಿದ್ದು, ಸ್ಥಳೀಯರು ಅಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಘಟನೆ ವೇಳೆ ಸಾಕಷ್ಟು ಸಾರ್ವಜನಿಕರು ಸೇರಿದ್ದು, ಸ್ಥಳದಲ್ಲೇ ಪುಂಡರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಅಹಮದ್​ ಖುರೇಷಿ

ಆರೋಪಿ ಅಹಮದ್​ ಖುರೇಷಿ

  • Share this:
ಆಬೆಂಗಳೂರು(ಆ.31): ಗಾಂಜಾ ಗಮ್ಮತ್ತಿನಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಪೊಲೀಸ್ ಕಾನ್ಸ್​​ಟೇಬಲ್​ಗೆ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂವರು ಯುವಕರು ರಸ್ತೆಯಲ್ಲಿ ಜಿಗ್ ಜಾಗ್ ಡ್ರೈವ್ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತಾ ಬರುತ್ತಿದ್ದರು.  ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಮೂವರು ಪುಂಡರು ಪೊಲೀಸ್ ಕಾನ್ಸ್​​ಟೇಬಲ್​ಗೆ ಥಳಿಸಿ ದರ್ಪ ತೋರಿದ ಪರಿಣಾಮ,  ಈಗ ಖಾಕಿ ಖೆಡ್ಡಕ್ಕೆ ಬಿದ್ದಿದ್ದಾರೆ.

ವಿಜಯನಗರದ ಮಾರುತಿ ಮಂದಿರ ಬಳಿ ಮೂವರು ಪುಂಡರು  ರಾಯಲ್ ಎನ್​ಫೀಲ್ಡ್​ ಬೈಕ್​ನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದರಂತೆ. ಇದೇ ವೇಳೆ ವಿಜಯನಗರ ಮುಖ್ಯರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​ ವಿದ್ಯಾಧರ್ ಪುಂಡರನ್ನ ಪ್ರಶ್ನೆ ಮಾಡಿದ್ದಾರೆ. ಜಿಗ್ ಜಾಗ್ ಡ್ರೈವ್, ರ್ಯಾಶ್​ ಡ್ರೈವಿಂಗ್ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಅಸಾಮಿಗಳು ಏಕಾಏಕಿ ಪೊಲೀಸ್ ಕಾನ್ಸ್​​ಟೇಬಲ್​  ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಉತ್ತರ ಕನ್ನಡ ಜಿಲ್ಲೆಯ ಇಬ್ಭಾಗದ ಕೂಗು : ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಪತ್ರ ಚಳುವಳಿ

ಪುಂಡರ ಹಲ್ಲೆ ವೇಳೆ ಪೇದೆ ವಿದ್ಯಾಧರ್ ಕಾಲಿಗೆ ಬಲವಾದ ಗಾಯಗಳಾಗಿದ್ದು, ಸ್ಥಳೀಯರು ಅಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಘಟನೆ ವೇಳೆ ಸಾಕಷ್ಟು ಸಾರ್ವಜನಿಕರು ಸೇರಿದ್ದು, ಸ್ಥಳದಲ್ಲೇ ಪುಂಡರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಕಿಡಿಗೇಡಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಪುಂಡ ಯುವಕರು ಗಾಂಜಾ‌ ಸೇವಿಸಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಯುವಕರ ಜೇಬಿನಲ್ಲಿ ಗಾಂಜಾ ಪ್ಯಾಕೆಟ್​​​ಗಳು ಪತ್ತೆಯಾಗಿವೆ. ಸದ್ಯ ಘಟನೆ ಬಗ್ಗೆ ಪೇದೆ ವಿದ್ಯಾಧರ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಗೌರಿಪಾಳ್ಯದ ಅಹಮದ್​ ಖುರೇಷಿ, ಪಾದರಾಯನಪುರದ ಸೈಯದ್ ಸಾಧಿಕ್ ಮತ್ತೊರ್ವ ಅಪ್ರಾಪ್ತ ಬಾಲಕನನ್ನ ಬಂಧಿಸಿದ್ದಾರೆ.
Published by:Latha CG
First published: