Bangalore Crime: ಬೆಂಗಳೂರಿನಲ್ಲಿ ಮಧ್ಯರಾತ್ರಿ ನಡೆಯಿತು ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಮರ್ಡರ್?

ಲೋಕೇಶ್ (35) ಅಲಿಯಾಸ್ ಸ್ಮಶಾನ ಲೋಕಿ ಕೊಲೆಯಾದ ಯುವಕ. ನಾಗರಬಾವಿ ನಿವಾಸಿಯಾಗಿದ್ದ ಲೋಕೇಶ್ ನಿನ್ನೆ ತಡರಾತ್ರಿ ಚಾಮರಾಜಪೇಟೆಯ ಆಜಾದ್ ನಗರಕ್ಕೆ ತೆರಳಿದ್ದ. ಈ ವೇಳೆ ಲೋಕೇಶ್ ಬರ್ಬರವಾಗಿ ಹತ್ಯೆಯಾಗಿದ್ದಾನೆ.

news18-kannada
Updated:January 23, 2020, 8:37 AM IST
Bangalore Crime: ಬೆಂಗಳೂರಿನಲ್ಲಿ ಮಧ್ಯರಾತ್ರಿ ನಡೆಯಿತು ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಮರ್ಡರ್?
ಕೊಲೆಯಾದ ಲೋಕೇಶ್​
  • Share this:
ಬೆಂಗಳೂರು (ಜ.23): ಹುಡುಗಿ ವಿಚಾರಕ್ಕೆ, ಹಳೆಯ ದ್ವೇಷಕ್ಕೆ ಕೊಲೆಗಳು ನಡೆಯುವುದು ಬೆಂಗಳೂರಿಗೆ ಹೊಸದಲ್ಲ. ಈಗ ನಗರದಲ್ಲಿ ಮತ್ತೆ ಒಂದು ಕೊಲೆ ನಡೆದಿದೆ. ಹುಡುಗಿ ವಿಚಾರಕ್ಕೆ ಈ ಮರ್ಡರ್​ ನಡೆದಿರಬಹುದು ಎನ್ನುವ ಶಂಕೆ ಮೂಡಿದೆ.

ಲೋಕೇಶ್ (35) ಅಲಿಯಾಸ್ ಸ್ಮಶಾನ ಲೋಕಿ ಕೊಲೆಯಾದ ಯುವಕ. ನಾಗರಬಾವಿ ನಿವಾಸಿಯಾಗಿದ್ದ ಲೋಕೇಶ್ ನಿನ್ನೆ ತಡರಾತ್ರಿ ಚಾಮರಾಜಪೇಟೆಯ ಆಜಾದ್ ನಗರಕ್ಕೆ ತೆರಳಿದ್ದ. ಈ ವೇಳೆ ಲೋಕೇಶ್ ಬರ್ಬರವಾಗಿ ಹತ್ಯೆಯಾಗಿದ್ದ.

ಈತ ಬೈಕ್​ನಲ್ಲಿ ಬರುವುದನ್ನೇ ಕಾದು ಕುಳಿತಿದ್ದ ಮೂರ್ನಾಲ್ಕು ಮಂದಿ ಏಕಾಏಕಿ ಮಚ್ಚು, ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಕ್ಷಣಮಾತ್ರದಲ್ಲಿ ಲೋಕೇಶ್​ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಸದ್ಯ ಈ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ನಾನು ದೇಶದ್ರೋಹಿಯಲ್ಲ, ನನಗೆ ತಪ್ಪಿನ ಅರಿವಾಗಿದೆ; ಬಾಂಬರ್ ಆದಿತ್ಯ ರಾವ್ ತಪ್ಪೊಪ್ಪಿಗೆ

ಲೋಕೇಶ್ ಸೈಕಲ್ ರವಿ ಸಹಚರನಾಗಿದ್ದ. ಫೈನಾನ್ಸ್ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಿದ್ದ. 19 ವರ್ಷಕ್ಕೆ ಕೊಲೆ ಮಾಡಿ ಜೈಲು ಸೇರಿದ್ದ. ಹಳೇ ದ್ವೇಷ ಅಥವಾ ಹುಡುಗಿ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ. ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading