HOME » NEWS » State » BANGALORE CRIME LABOR DIED IN BENGALURU AFTER LAND SLIDE NEAR VRISHABHAVATHI RIVER KENGERI SCT

Bangalore Crime: ಬೆಂಗಳೂರಿನ ವೃಷಭಾವತಿ ಕಾಲುವೆ ಬಳಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

Bengaluru Crime: ವಾಸ್ತು ಪ್ರಾಪರ್ಟೀಸ್ ಸಂಸ್ಥೆಯಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಚಂಚಲ್ ಇಂದು ವೃಷಭಾವತಿ ಕಾಲುವೆ ಬಳಿ ಗುಂಡಿ‌ ಅಗೆಯುತ್ತಿದ್ದ ವೇಳೆ ಮೈ ಮೇಲೆ ಮಣ್ಣು ಕುಸಿದು ಸಾವನ್ನಪ್ಪಿದ್ದಾರೆ.

news18
Updated:February 25, 2021, 11:54 AM IST
Bangalore Crime: ಬೆಂಗಳೂರಿನ ವೃಷಭಾವತಿ ಕಾಲುವೆ ಬಳಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು
ಬೆಂಗಳೂರಿನಲ್ಲಿ ಸಾವನ್ನಪ್ಪಿದ ಕಾರ್ಮಿಕ ಚಂಚಲ್
  • News18
  • Last Updated: February 25, 2021, 11:54 AM IST
  • Share this:
ಬೆಂಗಳೂರು (ಫೆ. 25): ಬೆಂಗಳೂರಿನ ವೃಷಭಾವತಿ ಕಾಲುವೆ ಕಾಮಗಾರಿಯ ಸಂದರ್ಭದಲ್ಲಿ ಮಣ್ಣು ಕುಸಿದು ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರಂತ ಘಟನೆ ಇಂದು ನಡೆದಿದೆ. ಕೆಂಗೇರಿಯ ವೃಷಭಾವತಿ ಕಾಲುವೆ ಕಾಮಗಾರಿ ವೇಳೆ ಅವಘಡ ನಡೆದಿದ್ದು, 21 ವರ್ಷದ ಚಂಚಲ್ ಬುರ್ಮಾನ್ ಎಂಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಾಸ್ತು ಪ್ರಾಪರ್ಟೀಸ್ ಸಂಸ್ಥೆಯಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಚಂಚಲ್ ಇಂದು ವೃಷಭಾವತಿ ಕಾಲುವೆ ಬಳಿ ಗುಂಡಿ‌ ಅಗೆಯುತ್ತಿದ್ದ ವೇಳೆ ಮೈ ಮೇಲೆ ಮಣ್ಣು ಕುಸಿದು ಸಾವನ್ನಪ್ಪಿದ್ದಾರೆ. ಚಂಚಲ್ ಮೇಲೆ ಮಣ್ಣಿನ ರಾಶಿ ಕುಸಿದು, ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. IPC 304(A) ಅಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃಷಭಾವತಿ ಕಾಲುವೆ ಬಳಿ ಕುಸಿದ ಮಣ್ಣು


ವಾಸ್ತು ಪ್ರಾಪರ್ಟೀಸ್​ನಿಂದ ವೃಷಭಾವತಿ ಕಾಲುವೆಗೆ ಅವರ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿತ್ತು. ಈ ಕಾಮಗಾರಿ ಸಬ್ ಕಂಟ್ರಾಕ್ಟ್ ಅನ್ನು ಗಣೇಶ್ ಎಂಬಾತ ಗುತ್ತಿಗೆ ಪಡೆದಿದ್ದ. ಗಣೇಶ್ ಪಶ್ಚಿಮ ಬಂಗಾಳದಿಂದ ಕಾರ್ಮಿಕರನ್ನು ಕರೆತಂದು ಬೆಂಗಳೂರಿನಲ್ಲಿ ಕೆಲಸ ಮಾಡಿಸುತ್ತಿದ್ದ. ಆತನ ವಿರುದ್ಧ ನಿರ್ಲಕ್ಷ್ಯತನದ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Published by: Sushma Chakre
First published: February 25, 2021, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories