ಗಂಡ-ಹೆಂಡತಿ ಜಗಳಕ್ಕೆ ಪಕ್ಕದ ಮನೆಯವಳು ಬಲಿ; ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ!

ಜೆಜೆ ನಗರದ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಲಲಿತಮ್ಮ (58) ಮೃತ ಮಹಿಳೆ. ಗುರುವಾರ ರಾತ್ರಿ ಮಂಜುನಾಥ್ ಮತ್ತು ಸುನಂದ ದಂಪತಿ  ಜಗಳವಾಡುತ್ತಿದ್ದರು. ಈ ಜಗಳದಲ್ಲಿ ಲಲಿತಮ್ಮ ಅಸುನೀಗಿದ್ದಾರೆ.

Rajesh Duggumane | news18-kannada
Updated:September 13, 2019, 3:21 PM IST
ಗಂಡ-ಹೆಂಡತಿ ಜಗಳಕ್ಕೆ ಪಕ್ಕದ ಮನೆಯವಳು ಬಲಿ; ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಸೆ.13): ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆಯನ್ನು ಬಹುತೇಕರು ಕೇಳಿರುತ್ತೀರಿ. ಬೆಂಗಳೂರಿನಲ್ಲೂ ಹಿಗೇಯೇ ಆಗಿದೆ. ಪತಿ-ಪತ್ನಿ ಜಗಳದಲ್ಲಿ ಪಕ್ಕದ ಮನೆಯ ಮಧ್ಯ ವಯಸ್ಸಿನ ಮಹಿಳೆ ಮೃತಪಟ್ಟಿದ್ದಾಳೆ. ಈ ವಿಚಿತ್ರ ಪ್ರಕರಣ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಜೆಜೆ ನಗರದ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಲಲಿತಮ್ಮ (58) ಮೃತ ಮಹಿಳೆ. ಗುರುವಾರ ರಾತ್ರಿ ಮಂಜುನಾಥ್ ಮತ್ತು ಸುನಂದ ದಂಪತಿ  ಜಗಳವಾಡುತ್ತಿದ್ದರು. ಈ ವೇಳೆ ಪಕ್ಕದ ಮನೆಯ ಲಲಿತಮ್ಮ ಜಗಳ ನೋಡುತ್ತ ನಿಂತಿದ್ದರು.

ಈ ವೇಳೆ ಪತ್ನಿ ಸುನಂದಗೆ ಹೊಡೆಯಲು ಮಂಜುನಾಥ್ ಕಲ್ಲು ಬೀಸಿದ್ದ. ಕಲ್ಲು ಸುನಂದಗೆ ಬೀಳುವ ಬದಲು ಲಲಿತಮ್ಮಗೆ ಬಿದ್ದು ತೀವ್ರ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಲಲಿತಮ್ಮ‌ ಸಾವನ್ನಪ್ಪಿದ್ದಾರೆ.

ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೊಬೈಲ್​ಗಾಗಿ ನಡುರಸ್ತೆಯಲ್ಲೇ ನಡೆಯಿತು ಯುವಕನ ಮರ್ಡರ್!

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...