ಮೈಸೂರು (ಫೆ. 1): ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳಿಗೂ ಗಂಡ-ಹೆಂಡತಿ ನಡುವೆ ಮನಸ್ತಾಪಗಳು ಮೂಡುತ್ತವೆ. ಮೈಸೂರಿನಲ್ಲೂ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಟಿಕ್ಟಾಕ್ ಕಾರಣಕ್ಕೆ ಹೆಂಡತಿಯ ಹೊಟ್ಟೆಗೆ ಚಾಕುವಿನಿಂದ ಇರಿದ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಆ ಮಹಿಳೆಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಗಂಡನನ್ನು ಬಿಟ್ಟು ಬೇರೊಬ್ಬನಿಂದಿಗೆ ಸಂಸಾರ ಮಾಡುತ್ತಿದ್ದ ಸವಿತಾ ಎಂಬ ಮೈಸೂರಿನ ಪಿರಿಯಾಪಟ್ಟಣದ ಮಹಿಳೆ ಗಾಯಗೊಂಡಾಕೆ.
ಟಿಕ್ಟಾಕ್ ಮಾಡಿ ಗಂಡನನ್ನು ಅಣಕಿಸುತ್ತಿದ್ದ ಸವಿತಾ
ಗಂಡನನ್ನು ಗೇಲಿ ಮಾಡುವ ವಿಡಿಯೋ ಮಾಡಿ ಬಿಡುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಗಂಡ ಶ್ರೀನಿವಾಸ್ ಅಲಿಯಾಸ್ ಆಟೋ ಸೀನ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.
![]()
ಹೆಂಡತಿಗೆ ಚಾಕುವಿನಿಂದ ಇರಿದ ಶ್ರೀನಿವಾಸ್
ಇದನ್ನೂ ಓದಿ: ಬೆಂಗಳೂರಿನ ಪೆಟ್ರೋಲ್ ಬಂಕ್ನಲ್ಲಿ ನಡುರಾತ್ರಿ ಹೊತ್ತಿ ಉರಿದ ಬಸ್; ತಪ್ಪಿದ ಭಾರೀ ಅನಾಹುತ
10 ವರ್ಷಗಳ ಹಿಂದೆ ಮದುವೆಯಾಗಿದ್ದ ಸವಿತಾ ಮತ್ತು ಶ್ರೀನಿವಾಸ್ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಗಂಡ ಮತ್ತು ಮಕ್ಕಳನ್ನು ಬಿಟ್ಟು ಸವಿತಾ ಬೇರೊಬ್ಬನೊಂದಿಗೆ ವಾಸವಾಗಿದ್ದಳು.
ಟಿಕ್ ಟಾಕ್ ಮೂಲಕ ತನ್ನನ್ನು ಅಣಕಿಸುತ್ತಿದ್ದ ಹೆಂಡತಿಯ ಮೇಲೆ ಶ್ರೀನಿವಾಸ್ ಕೋಪಗೊಂಡಿದ್ದ.
![]()
ಗಾಯಾಳು ಸವಿತಾ
ಮಕ್ಕಳ ಹುಟ್ಟುಹಬ್ಬಕ್ಕೆಂದು ಮನೆಗೆ ಬಂದಿದ್ದ ಸವಿತಾಳಿಗೆ ಚಾಕುವಿನಿಂದ ಇರಿದಿರುವ ಗಂಡ ಶ್ರೀನಿವಾಸ್ ವಿರುದ್ಧ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ ಈಗ ಪೊಲೀಸರ ವಶದಲ್ಲಿದ್ದಾನೆ. ಸವಿತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಜೈಲೊಳಗೇ ಕುಳಿತು ಟಿಕ್ಟಾಕ್; ಪ್ರೇಯಸಿಯ ಫೋಟೋ ಹಾಕಿ ವಿಡಿಯೋ ಮಾಡಿದ ರೌಡಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ