Bangalore Crime: ಬೆಂಗಳೂರಿನಲ್ಲಿ ವರದಕ್ಷಿಣೆಗಾಗಿ ಹೆಂಡತಿಯ ಹೊಟ್ಟೆ, ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಗಂಡ!

Crime News: ಬೆಂಗಳೂರಿನ ಟಿಸಿ ಪಾಳ್ಯದ ಬಳಿ ಮಾಲಾ ಮಹೇಂದ್ರ ಸಿಂಗ್ ಎಂಬ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಬೆಂಕಿಯಿಂದ ಆಕೆಯ ಹೊಟ್ಟೆ, ಗುಪ್ತಾಂಗ, ಕಾಲುಗಳು ಸುಟ್ಟುಹೋಗಿದೆ.

news18-kannada
Updated:October 10, 2020, 12:03 PM IST
Bangalore Crime: ಬೆಂಗಳೂರಿನಲ್ಲಿ ವರದಕ್ಷಿಣೆಗಾಗಿ ಹೆಂಡತಿಯ ಹೊಟ್ಟೆ, ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಗಂಡ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 10): ಮಗಳನ್ನು ಮದುವೆ ಮಾಡಿಕೊಡುವಾಗ ಅಳಿಯನಿಗೆ ಚಿನ್ನ, ಹಣವನ್ನು ನೀಡುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವರದಕ್ಷಿಣೆಗಾಗಿ ಮಹಿಳೆಯನ್ನು ಆಕೆಯ ಗಂಡನಮನೆಯವರು ಕೊಂದಿರುವ ಅದೆಷ್ಟೋ ಘಟನೆಗಳು ನಡೆದಿವೆ. ಇದೇ ಕಾರಣಕ್ಕೆ ವರದಕ್ಷಿಣೆ ಕೇಳುವುದು ಕಾನೂನು ಪ್ರಕಾರವಾಗಿ ಅಪರಾಧ ಎಂಬ ಕಾನೂನೇ ಇದೆ. ಎಷ್ಟೇ ಆಧುನಿಕ ಮನಸ್ಥಿತಿ ರೂಢಿಸಿಕೊಂಡಿದ್ದರೂ, ಸಮಾಜ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ವರದಕ್ಷಿಣೆಗಾಗಿ ಹೆಣ್ಣನ್ನು ಶೋಷಣೆ ಮಾಡುವವರು ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಒಂದು ಘಟನೆ ಇಂದಿಗೂ ವರದಕ್ಷಿಣೆ ಕಿರುಕುಳ ಜೀವಂತವಾಗಿದೆಯಾ? ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಬೆಂಗಳೂರಿನಲ್ಲಿ ಮಹಿಳೆಗೆ ವರದಕ್ಷಣಿ ಕಿರುಕುಳ ಕೊಟ್ಟು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಪತಿ ಹಾಗೂ ಕುಟುಂಬದವರು ವರದಕ್ಷಿಣೆ ಕಿರುಕುಳ ಕೊಟ್ಟಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಟಿಸಿ ಪಾಳ್ಯದ ಬಳಿ ಹತ್ತು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾಲಾ ಮಹೇಂದ್ರ ಸಿಂಗ್ ಎಂಬ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಮೂಲತಃ ಉತ್ತರ ಪ್ರದೇಶದವಳಾದ ಮಾಲಾ ಕಳೆದ ಒಂದು ವರ್ಷದ ಹಿಂದೆ ಸೂರಜ್ ಸಿಂಗ್ ಎಂಬಾತನ ಜೊತೆ ವಿವಾಹವಾಗಿದ್ದಳು. ವಿವಾಹದ ಬಳಿಕ ದಂಪತಿ ಹಾಗೂ ಸೂರಜ್​ನ ಪೋಷಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದರು.

ಇದನ್ನೂ ಓದಿ: Karnataka Weather: ಕರಾವಳಿ ಸೇರಿ ಕರ್ನಾಟಕದ ಹಲವೆಡೆ 4 ದಿನ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಮದುವೆಯಾದ ಬಳಿಕ ವರಕ್ಷಿಣೆ ಕಿರುಕುಳ ಕೊಟ್ಟು, ಮನೆಯಲ್ಲಿ ಒಂಟಿಯಾಗಿದ್ದ ಆಕೆಯ ಮೇಲೆ ಪೆಟ್ರೋಲ್ ಸುರಿದ ಆರೋಪ ಕೇಳಿಬಂದಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಿರುಕುಳ ನೀಡಲಾಗಿದ್ದು, ಬೆಂಕಿಯಿಂದ ಆಕೆಯ ಹೊಟ್ಟೆ, ಗುಪ್ತಾಂಗ, ಕಾಲುಗಳು ಸುಟ್ಟುಹೋಗಿದೆ. ಗಾಯಗಳಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಮಾಲಾ ಹೋರಾಟ ನಡೆಸುತ್ತಿದ್ದಾರೆ.

ಸೂರಜ್​ನ ತಾಯ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. 15 ಲಕ್ಷ ರೂ. ಖರ್ಚು ಮಾಡಿ ಸೂರಜ್ ಜೊತೆ ಮಾಲಾ ಪೋಷಕರು ಮದುವೆ ಮಾಡಿಕೊಟ್ಟಿದ್ದರು. ಸೈಟ್ ಕೊಡಿಸುವಂತೆ ಮಾಲಾಳ ಮನೆಯವರಿಗೆ ಒತ್ತಾಯ ಮಾಡಿದ್ದ ಸೂರಜ್ ಪೋಷಕರು ಆಕೆಗೆ ಕಿರುಕುಳ ನೀಡುತ್ತಿದ್ದರು. ಆಕೆ ಒಂಟಿಯಾಗಿದ್ದಾಗ ಆಕೆಯ ಹೊಟ್ಟೆ, ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಘಟನೆಯ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.
Published by: Sushma Chakre
First published: October 10, 2020, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading