ಬೆಂಗಳೂರಿಗರೇ ಎಚ್ಚರ!; ಮನೆ ಮುಂದೆ ನಿಲ್ಲಿಸಿದ್ದ 5 ಕಾರುಗಳಿಗೆ ನಡುರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿ

Bangalore Crime: ಬುಧವಾರ ಮಧ್ಯರಾತ್ರಿ 3 ಗಂಟೆಗೆ ಮದ್ಯಪಾನ ಮಾಡಿ, ಗಾಂಜಾ ಸೇವಿಸಿ ಬೆಂಗಳೂರಿನ ಮಂಜುನಾಥ ನಗರಕ್ಕೆ ಬಂದಿದ್ದ ಕಿಡಿಗೇಡಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಸಾಲಾಗಿ ಬೆಂಕಿ ಹಚ್ಚಿಕೊಂಡು ಹೋಗಿದ್ದ.

news18-kannada
Updated:January 30, 2020, 9:41 AM IST
ಬೆಂಗಳೂರಿಗರೇ ಎಚ್ಚರ!; ಮನೆ ಮುಂದೆ ನಿಲ್ಲಿಸಿದ್ದ 5 ಕಾರುಗಳಿಗೆ ನಡುರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿ
ಪೊಲೀಸರ ಕೈಗೆ ಸಿಕ್ಕಿಬಿದ್ದ ಕಿಡಿಗೇಡಿ
  • Share this:
ಬೆಂಗಳೂರು (ಜ. 30): ಕೆಲವು ದಿನಗಳ ಹಿಂದಷ್ಟೇ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟಿಗಳಿಗೆ ರಾತ್ರಿ ವೇಳೆ ಅಪರಿಚಿತರು ಬೆಂಕಿ ಹಚ್ಚಿದ್ದ ಪ್ರಕರಣ ಮೈಸೂರಿನಲ್ಲಿ ನಡೆದಿತ್ತು. ಅದೇರೀತಿ ಬೆಂಗಳೂರಿನಲ್ಲೂ ನಿನ್ನೆ ರಾತ್ರಿ ಘಟನೆಯೊಂದು ನಡೆದಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿದ್ದಾನೆ.

ಬೆಂಗಳೂರಿನ ರಾಜಾಜಿನಗರದ ಮಂಜುನಾಥ ನಗರದಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ 5 ಕಾರುಗಳಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗೆ ಥಳಿಸಿರುವ ಸ್ಥಳೀಯರು ಆತನನ್ನು ಬಸವೇಶ್ವರನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ನಿನ್ನೆ ರಾತ್ರಿ ಗಾಂಜಾ ಸೇವಿಸಿ ಆರೋಪಿ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಪೆಟ್ರೋಲ್​ ಬಂಕ್​ನಲ್ಲಿ ನಡುರಾತ್ರಿ ಹೊತ್ತಿ ಉರಿದ ಬಸ್​; ತಪ್ಪಿದ ಭಾರೀ ಅನಾಹುತ

ಬುಧವಾರ ಮಧ್ಯರಾತ್ರಿ 3 ಗಂಟೆಗೆ ಮದ್ಯಪಾನ ಮಾಡಿ, ಗಾಂಜಾ ಸೇವಿಸಿ ಮಂಜುನಾಥ ನಗರಕ್ಕೆ ಬಂದಿದ್ದ ಕಿಡಿಗೇಡಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಸಾಲಾಗಿ ಬೆಂಕಿ ಹಚ್ಚಿಕೊಂಡು ಹೋಗಿದ್ದ. ಒಟ್ಟು 5 ಕಾರುಗಳಿಗೆ ಬೆಂಕಿ ಹಚ್ಚಿದ್ದು, ಕಾರುಗಳ ಬಹುತೇಕ ಭಾಗ ಸುಟ್ಟುಹೋಗಿದೆ. ಬೆಂಕಿಯ ರಭಸವನ್ನು ನೋಡಿದ ಕೆಲ ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಅತ್ಯಂತ ಕೆಟ್ಟ ಟ್ರಾಫಿಕ್: ಬೆಂಗಳೂರು ವಿಶ್ವದಲ್ಲೇ ನಂ. 1; ಟಾಪ್ 10 ಪಟ್ಟಿಯಲ್ಲಿವೆ ಭಾರತದ 4 ನಗರಗಳು

ಫಾರ್ಚುನರ್, ರೆಡ್ ಬಾಕ್ಸ್, ಎರ್ಟಿಕಾ ಸೇರಿದಂತೆ ಒಟ್ಟು 5 ಕಾರುಗಳಿಗೆ ಬೆಂಕಿ ಹೊತ್ತಿಸಿದ ಬಳಿಕ ಓಡಿಹೋಗಿದ್ದ ಆರೋಪಿ ಮತ್ತೆ ನಿಧಾನವಾಗಿ ಆ ಜಾಗಕ್ಕೆ ಬಂದಿದ್ದ. ಬೆಂಕಿ ಹೊತ್ತಿ ಉರಿದ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸರ ಬಳಿಯೇ 'ಸರ್ ಏನಾಯ್ತು?' ಎಂದು ಕೇಳಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದುಕೊಂಡಿದ್ದಾರೆ. ಮನೆಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಎಸಗಿದವನ ಮುಖವನ್ನು ನೋಡಿದ್ದ ಸ್ಥಳೀಯರು ಆತನಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
First published: January 30, 2020, 9:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading