ಬೆಂಗಳೂರಿನಲ್ಲಿ ಸೆಕ್ಯುರಿಟಿಗೆ ಮಾರಕಾಸ್ತ್ರಗಳಿಂದ ಹೆದರಿಸಿ ದರೋಡೆ ಮಾಡಿದ್ದ ಐವರ ಬಂಧನ

Bangalore Crime: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿ ಬಳಿ ಇರುವ ಕಾರ್ಖಾನೆಯ ಸೆಕ್ಯುರಿಟಿಗೆ ಹೆದರಿಸಿ, ದರೋಡೆ ಮಾಡಿದ್ದ ಐವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ, 4 ಲಕ್ಷ ರೂ. ಬೆಲೆ ಬಾಳುವ ಕಾಪರ್ ವೈರ್, ಎರಡು ಆಟೋ, ಮಾರಕಾಸ್ತ್ರ ಜಪ್ತಿ ಮಾಡಿದ್ದಾರೆ.

ಐವರು ದರೋಡೆಕೋರರ ಜೊತೆ ಪೊಲೀಸರು

ಐವರು ದರೋಡೆಕೋರರ ಜೊತೆ ಪೊಲೀಸರು

  • Share this:
ಬೆಂಗಳೂರು (ನ. 5): ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯ ಕಾರ್ಖಾನೆಯೊಂದರಲ್ಲಿ ಸೆಕ್ಯುರಿಟಿಗೆ ಬೆದರಿಸಿ, ದರೋಡೆ ಮಾಡಿದ್ದ 5 ಜನ ದರೋಡೆಕೋರರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ ಬಂಧಿತರಿಂದ 4 ಲಕ್ಷ ರೂ. ಬೆಲೆ ಬಾಳುವ ಕಾಪರ್ ವೈರ್, ಎರಡು ಆಟೋ, ಮಾರಕಾಸ್ತ್ರ ಜಪ್ತಿ ಮಾಡಿದ್ದಾರೆ. ದೊಡ್ಡ ಗೊಲ್ಲರಹಟ್ಟಿ ನಿವಾಸಿಗಳಾದ ಕೃಷ್ಣ (26), ನಾಗೇಶ (25) ವಿಜಯನಗರದ ಸಂತೋಷ (23), ಕಿರಣ (19) ಪಾದರಾಯನ ಪುರ ಮೂಲದ ಮಣಿಕಂಠ (32) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಸುಮಾರು 550 ಕೆಜಿ ತೂಕದ 25 ಬಂಡಲ್ ಕಾಪರ್ ತಂತಿ, ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಕೆಎ-05 -ಎಹೆಚ್-  6919 & ಕೆಎ-01-ಎಹೆಚ್-9702 ನಂಬರಿನ ಎರಡು ಪ್ಯಾಸೆಂಜರ್ ಆಟೋಗಳು ಹಾಗೂ ಎರಡು ಲಾಂಗ್, ಸ್ಕ್ರೂ ಡ್ರೈವರ್ ಮುಂತಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏನಿದು ಘಟನೆ?:

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿ ಬಳಿ ಇರುವ ಸನ್ ಎಲೆಕ್ಟ್ರೋ ಸ್ಟಾಟಿಕ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಮೋಟಾರ್ ವೈಂಡಿಂಗ್ ಪ್ಯಾಕ್ಟರಿಯ ಸೆಕ್ಯೂರಿಟಿಗೆ ಅ. 25ರಂದು ರಾತ್ರಿ ಎರಡು ಪ್ಯಾಸೆಂಜರ್ ಆಟೋಗಳಲ್ಲಿ ಬಂದು ಲಾಂಗ್ ತೋರಿಸಿ, ಹೆದರಿಸಿ ಮೊಬೈಲ್ ಪೋನ್ ಮತ್ತು ಕೀ ಕಿತ್ತುಕೊಂಡು ಫ್ಯಾಕ್ಟರಿಯ ರೋಲಿಂಗ್ ಶೆಟ್ಟರ್ ಲಾಕ್ ಒಡೆದು  ಫ್ಯಾಕ್ಟರಿಯಲ್ಲಿ ದರೋಡೆ ಮಾಡಿದ್ದ ಆರೋಪಿಗಳು ಕಾಪರ್ ತಂತಿ ಬಂಡಲ್ ಮತ್ತು ಸ್ಟೇಟರ್ ಸೆಟ್ ಕಾಯಿಲ್‌ಗಳನ್ನು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ: Bangalore: ವೀಕೆಂಡ್​ನಲ್ಲಿ ಬೆಂಗಳೂರಿನ ಚರ್ಚ್​ ಸ್ಟ್ರೀಟ್​ನಲ್ಲಿ ವಾಹನ ಸಂಚಾರ ಬಂದ್

ಫ್ಯಾಕ್ಟರಿ ಮಾಲೀಕ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ಪತ್ತೆ ಬಗ್ಗೆ ತನಿಖಾ ತಂಡ ರಚನೆ ಮಾಡಲಾಗಿತ್ತು. ಬೆಂಗಳೂರು ನಗರ ಕೊಟ್ಟಿಗೆಪಾಳ್ಯದ ಬಳಿ ಎರಡು ಆಟೋಗಳಲ್ಲಿ ಮೈಸೂರು ಕಡೆಗೆ ಹೋಗುತ್ತಿದ್ದ 5 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಆರೋಪಿಗಳು ಕೃತ್ಯವೆಸಗಲು ಬಳಸುತ್ತಿದ್ದ ಎರಡು ಬಜಾಜ್ ಪ್ಯಾಸೆಂಜರ್ ಆಟೋಗಳು ಮತ್ತು ಎರಡು ಲಾಂಗುಗಳು, ಒಂದು ಸ್ಕ್ರೂ ಡ್ರೈವರ್ ಹಾಗೂ ಆರೋಪಿಗಳ ದರೋಡೆ ಮಾಡಿ ಮಾರಾಟ ಮಾಡಿದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎ 1 ಆರೋಪಿ ಕೃಷ್ಣ ಕಳೆದ ಕೆಲ ದಿನಗಳ ಹಿಂದೆ ಎಲೆಕ್ಟ್ರೋ ಸ್ಟಾಟಿಕ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಫ್ಯಾಕ್ಟರಿಯಲ್ಲಿ ಸಣ್ಣ ಕಳ್ಳತನ ಮಾಡಿದ್ದ, ಕೃತ್ಯ ಕಂಪನಿ ಮಾಲೀಕರ ಗಮನಕ್ಕೆ ಬಂದಿದ್ದು, ಮಾಲೀಕರು ಕ್ಷಮಿಸಿ ಠಾಣೆಗೆ ದೂರು ನೀಡದೆ ಕೆಲಸದಿಂದ ವಜಾ ಮಾಡಿದ್ದರು. ಮಾಲೀಕರು ಕೆಲಸದಿಂದ ತೆಗೆದರು ಎನ್ನುವ ದ್ವೇಷದ ಕಾರಣದಿಂದ ಇನ್ನುಳಿದ ನಾಲ್ಕು ಜನ ಆರೋಪಿಗಳೊಂದಿಗೆ ಸಂಚು ರೂಪಿಸಿ ಆತ ದರೋಡೆ ಮಾಡಿದ್ದ ಎನ್ನಲಾಗಿದೆ.
Published by:Sushma Chakre
First published: