Bengaluru Crime: ಬೆಂಗಳೂರಿನಲ್ಲಿ ಹೆಣ್ಣಿನ ವಿಷಯಕ್ಕೆ ಮತ್ತೊಂದು ಹತ್ಯೆ; ಎದೆಗೆ ಚಾಕುವಿನಿಂದ ಇರಿದು ಕೊಲೆ

Bangalore Murder News: ಕಾವಲ್​ ಭೈರಸಂದ್ರದ ಇರ್ಫಾನ್​ನ ಹೆಂಡತಿಯನ್ನು ತೌಸೀಫ್​ ಎಂಬಾತ 2ನೇ ಮದುವೆಯಾಗಿದ್ದ. ತನ್ನ ಹೆಂಡತಿಗೆ ಮರುಳು ಮಾಡಿ, ತನ್ನತ್ತ ಸೆಳೆದುಕೊಂಡಿದ್ದಕ್ಕೆ ಕೋಪಗೊಂಡಿದ್ದ ಇರ್ಫಾನ್​ ಆಗಾಗ ತೌಸೀಫ್ ಜೊತೆಗೆ ಜಗಳವಾಡುತ್ತಿದ್ದ.

news18-kannada
Updated:January 23, 2020, 11:07 AM IST
Bengaluru Crime: ಬೆಂಗಳೂರಿನಲ್ಲಿ ಹೆಣ್ಣಿನ ವಿಷಯಕ್ಕೆ ಮತ್ತೊಂದು ಹತ್ಯೆ; ಎದೆಗೆ ಚಾಕುವಿನಿಂದ ಇರಿದು ಕೊಲೆ
ಆರೋಪಿ ತೌಸೀಫ್​ ಮತ್ತು ಕೊಲೆಯಾದ ಇರ್ಫಾನ್
  • Share this:
ಬೆಂಗಳೂರು (ಜ. 23): ಕೌಟುಂಬಿಕ ಕಾರಣಕ್ಕೆ ಮಹಿಳೆಯ ಗಂಡ ಮತ್ತು ಮಾಜಿ ಗಂಡನ ನಡುವೆ ಸದಾ ಜಗಳ ನಡೆಯುತ್ತಿತ್ತು. ಈ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ನಾಗರಬಾವಿಯಲ್ಲಿ ಹುಡುಗಿ ವಿಚಾರಕ್ಕೆ ನಡುರಸ್ತೆಯಲ್ಲಿ ಕೊಲೆ ನಡೆದಿತ್ತು. ಬೈಕ್​ನಲ್ಲಿ ಸಾಗುತ್ತಿದ್ದ ಲೋಕೇಶ್​ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಗಳು ರಸ್ತೆ ಮಧ್ಯದಲ್ಲೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಘಟನೆ ಡಿಜೆ ಹಳ್ಳಿಯ ಕಾವಲ್​ ಭೈರಸಂದ್ರದಲ್ಲಿ ನಡೆದಿದೆ.

ಕಾವಲ್​ ಭೈರಸಂದ್ರದ ಇರ್ಫಾನ್​ನ ಹೆಂಡತಿಯನ್ನು ತೌಸೀಫ್​ ಎಂಬಾತ 2ನೇ ಮದುವೆಯಾಗಿದ್ದ. ತನ್ನ ಹೆಂಡತಿಗೆ ಮರುಳು ಮಾಡಿ, ತನ್ನತ್ತ ಸೆಳೆದುಕೊಂಡಿದ್ದಕ್ಕೆ ಕೋಪಗೊಂಡಿದ್ದ ಇರ್ಫಾನ್​ ಆಗಾಗ ತೌಸೀಫ್ ಜೊತೆಗೆ ಜಗಳವಾಡುತ್ತಿದ್ದ. ಈ ಜಗಳ ಕೆಲವೊಮ್ಮೆ ತಾರಕಕ್ಕೇರಿ, ಹೊಡೆದಾಟದವರೆಗೂ ಹೋಗುತ್ತಿತ್ತು.

ಇದನ್ನೂ ಓದಿ: ಮಂಗಳೂರು ಬಾಂಬರ್ ಆದಿತ್ಯ ರಾವ್​ ಮೇಲೆ ಮತ್ತೊಂದು ಆರೋಪ; ಇಂಡಿಗೋದಿಂದ ದೂರು ದಾಖಲು

ಇದೇ ವಿಷಯಕ್ಕೆ ಬುಧವಾರ ಮತ್ತೆ ಜಗಳ ನಡೆದಿದ್ದು, ತನ್ನ ಹೆಂಡತಿಯನ್ನು ಮದುವೆಯಾಗಿರುವ ತೌಸೀಫ್ ಜೊತೆಗೆ ಇರ್ಫಾನ್​ ಹೊಡೆದಾಟ ನಡೆಸಿದ್ದ. ಅದೇ ಕೋಪದಲ್ಲಿ ಇರ್ಫಾನ್​ನ ಎದೆಗೆ ಚಾಕುವಿನಿಂದ ಇರಿದ ತೌಸೀಫ್​ ಆತನನ್ನು ಕೊಲೆ ಮಾಡಿದ್ದಾನೆ. ಡಿಜೆ ಹಳ್ಳಿ ಪೊಲೀಸರು ಆರೋಪಿ ತೌಸೀಫ್​ನನ್ನು ಬಂಧಿಸಿದ್ದಾರೆ.
First published: January 23, 2020, 11:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading