ಬೆಂಗಳೂರು (ಅ. 14): ಎಕ್ಸ್ ರೇ ಯಂತ್ರಗಳು ಎಂದು ಹೇಳಿ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಿಗರೇಟ್ ಬಾಕ್ಸ್ಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಂಗಳೂರು ಏರ್ಪೋರ್ಟ್ನಲ್ಲಿ ಬಾಕ್ಸ್ಗಟ್ಟಲೆ ವಿದೇಶಿ ಸಿಗರೇಟ್ಗಳು ಪತ್ತೆಯಾಗಿದ್ದು, ಸಿಗರೇಟ್ ಸಾಗಾಟದ ಜಾಲದ ಬಗ್ಗೆ ಆಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಶಾರ್ಜಾದಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿ ಸುಮಾರು ಎಂಟು ಬೃಹತ್ ಗಾತ್ರದ ಬಾಕ್ಸ್ಗಳು ಆಗಮಿಸಿದ್ದವು. ಮೊದಲಿಗೆ ಅವುಗಳನ್ನು ಎಕ್ಸ್ ರೇ ಮಾಡುವ ಯಂತ್ರಗಳು ಎಂದು ಹೇಳಲಾಗಿದ್ದು, ಈ ಬಗ್ಗೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಬಾಕ್ಸ್ ಗಳ ಪರಿಶೀಲನೆ ನಡೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ಶಾರ್ಜಾದಿಂದ ಎಂಟು ಬಾಕ್ಸ್ ಗಳಲ್ಲಿ ಅಕ್ರಮವಾಗಿ ವಿದೇಶಿ ಮೂಲದ ಸಿಗರೇಟ್ ಸರಬರಾಜು ಆಗುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಜಪ್ತಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ದುಬಾರಿ ಬೆಲೆಯ ಲಕ್ಷಾಂತರ ಮೌಲ್ಯದ ಸಿಗರೇಟ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಾಗಿಸಲಾದ ಈ ಲಕ್ಷಾಂತರ ಮೌಲ್ಯದ ವಿದೇಶಿ ಸಿಗರೇಟುಗಳು ಯಾರಿಗೆ ಸೇರಬೇಕಿತ್ತು? ಎಲ್ಲಿಗೆ ರವಾನೆಯಾಗುತ್ತಿತ್ತು? ಎಂಬುದು ಇನ್ನೂ ನಿಗೂಢವಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಇದರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಶಾರ್ಜಾನಿಂದ ಬಂದ ವಿಮಾನದಲ್ಲೇ 8 ವಿದೇಶೀ ಸಿಗರೇಟ್ಗಳ ಬೃಹತ್ ಬಾಕ್ಸ್ ಗಳು ಸಿಕ್ಕಿರುವುದು ಖಚಿತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ