HOME » NEWS » State » BANGALORE CRIME CID OFFICERS ARREST ACCUSED WHO HAVE DUPLICATE NOTES AT BANGALORE MTV LG

ನಕಲಿ ನೋಟು ಜಾಲ ಭೇದಿಸಿದ ಸಿಐಡಿ; ಎಲೆಕ್ಟ್ರಾನಿಕ್ ಸಿಟಿ ಬಳಿ ಆರೋಪಿಗಳ ಬಂಧನ; ನಕಲಿ ನೋಟು ಜಪ್ತಿ

ಈ ನಕಲಿ ನೋಟುಗಳನ್ನು ಅಸಲಿ ಎಂದು ಅಮಾಯಕ ಜನರಿಗೆ ನಂಬಿಸಿ ಚಲಾವಣೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಸಂಗತಿ ಮೇಲ್ನೋಟಕ್ಕೆ ಕಂಡು ಬಂದಿದೆ. ಬಂಧಿತ ಆರೋಪಿಗಳನ್ನು ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಸುಪರ್ದಿಗೆ ನೀಡಿರುವ ಸಿಐಡಿ ಅಧಿಕಾರಿಗಳು ಸದ್ಯದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಖೋಟಾ ನೋಟಿನ ಜಾಲವನ್ನು ಭೇದಿಸಲು ಮುಂದಾಗಿದ್ದಾರೆ.

news18-kannada
Updated:March 1, 2021, 1:02 PM IST
ನಕಲಿ ನೋಟು ಜಾಲ ಭೇದಿಸಿದ ಸಿಐಡಿ; ಎಲೆಕ್ಟ್ರಾನಿಕ್ ಸಿಟಿ ಬಳಿ ಆರೋಪಿಗಳ ಬಂಧನ; ನಕಲಿ ನೋಟು ಜಪ್ತಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.01): ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಕಾರಿನಲ್ಲಿ ಖೋಟಾನೋಟು ಸಾಗಿಸುತ್ತಿದ್ದ ನಾಲ್ವರು ಸಿಐಡಿ ಬಲೆಗೆ ಬಿದ್ದಿದ್ದಾರೆ. ಚಾಮರಾಜನಗರದ ನಿವಾಸಿಗಳಾದ ಶಿವ (38), ನಾಗೇಂದ್ರ(36), ಪ್ರಕಾಶ್(24), ಲಕ್ಷ್ಮಣ್ (33) ಬಂಧಿತರು. ಆರೋಪಿಗಳು ಫೆ.27ರಂದು ಶಿಫ್ಡ್ ಡಿಸೈಯರ್ ಕಾರಿನ ಡಿಕ್ಕಿಯಲ್ಲಿ ಖೋಟಾ ನೋಟು ಸಾಗಿಸುತ್ತಿರುವ ಬಗ್ಗೆ ಸಿಐಡಿ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಸುಳಿವಿನ ಆಧಾರದ ಮೇಲೆ ಸಿಐಡಿ ಇನ್‌ಸ್ಪೆಕ್ಟರ್ ಧನಂಜಯ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತ್ತು.

ಎಲೆಕ್ಟ್ರಾನಿಕ್‌ ಸಿಟಿ ದೊಡ್ಡತೋಗೂರು ಗ್ರಾಮದ ಸೆಲೆಬ್ರೆಟಿ ಲೇಔಟ್ ರಸ್ತೆಯಲ್ಲಿ ಪೊಲೀಸರು ಆರೋಪಿಗಳ ಕಾರನ್ನು ಅಡ್ಡಗಟ್ಟಿದ್ದರು. ಕಾರಿನೊಳಗಿದ್ದ ಆರೋಪಿಗಳಾದ ಶಿವ, ನಾಗೇಂದ್ರ, ಪ್ರಕಾಶ್ ಹಾಗೂ ಲಕ್ಷ್ಮಣ್‌ನ್ನು ಖೋಟಾನೋಟು ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿಗಳು ಏನೂ ತಿಳಿಯದಂತೆ ನಟಿಸಿದ್ದರು. ನಂತರ ಸಿಐಡಿ ತಂಡ ಆರೋಪಿಗಳ ಕಾರಿನ ಡಿಕ್ಕಿಯನ್ನು ತಪಾಸಣೆ ನಡೆಸಿದಾಗ ಎರಡು ಮೂಟೆಗಳು ಕಂಡು ಬಂದಿದ್ದವು. ಅನುಮಾನದ ಮೇರೆಗೆ ಮೂಟೆಗಳನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಕಂತೆ-ಕಂತೆ ನೋಟುಗಳು ಕಂಡು ಬಂದಿವೆ.

ಬೆಂಗಳೂರಿನಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಇವುಗಳನ್ನು ಎಣಿಕೆ ಮಾಡಿದಾಗ 2 ಸಾವಿರ ರೂ. ಮುಖಬೆಲೆಯ 6.80 ಲಕ್ಷ ರೂ. ಮೌಲ್ಯದ 340 ನಕಲಿ ನೋಟುಗಳ ಕಟ್ಟುಗಳಿದ್ದವು. ಇವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಪ್ರತಿ ಕಟ್ಟಿನ ಮೇಲ್ಬಾಗದಲ್ಲಿ ನೋಟಿನ ಮೇಲ್ಮುಖದ ನೋಟು ಹಾಗೂ ಕೆಳಭಾಗದಲ್ಲಿ ನೋಟಿನ ಕೆಳಭಾಗದ ಚಿತ್ರವಿರುವ ನಕಲಿ ನೋಟುಗಳಾಗಿವೆ ಎಂಬ ವಿಚಾರ ತಿಳಿದು ಬಂದಿತ್ತು. ಒಳಭಾಗದಲ್ಲಿ ನೋಟಿಗೆ ಸಮಾನಾಗಿರುವ ಬಿಳಿಯ ಹಾಳೆಗಳಿದ್ದವು. ಜತೆಗೆ ಕಾರಿನಲ್ಲಿ ಹಳೆಯ ತಾಮ್ರದ ನಾಣ್ಯಗಳು ಪತ್ತೆಯಾಗಿವೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿವೆ.

ಚಲಾವಣೆಗೆ ನಡೆಸುವ ಉದ್ದೇಶ ?

ಈ ನಕಲಿ ನೋಟುಗಳನ್ನು ಅಸಲಿ ಎಂದು ಅಮಾಯಕ ಜನರಿಗೆ ನಂಬಿಸಿ ಚಲಾವಣೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಸಂಗತಿ ಮೇಲ್ನೋಟಕ್ಕೆ ಕಂಡು ಬಂದಿದೆ. ಬಂಧಿತ ಆರೋಪಿಗಳನ್ನು ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಸುಪರ್ದಿಗೆ ನೀಡಿರುವ ಸಿಐಡಿ ಅಧಿಕಾರಿಗಳು ಸದ್ಯದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಖೋಟಾ ನೋಟಿನ ಜಾಲವನ್ನು ಭೇದಿಸಲು ಮುಂದಾಗಿದ್ದಾರೆ.

ಬಂಧಿತ ನಾಲ್ವರೂ ಚಾಮರಾಜನಗರ ಕೊಳ್ಳೆಗಾಲದ ಸಿಂಗನೆಲ್ಲೂರು ಗ್ರಾಮದವರಾಗಿದ್ದಾರೆ. ಈ ನೋಟುಗಳನ್ನು ಎಲ್ಲಿಂದಿ ತಂದಿದ್ದರು? ಎಲ್ಲಿಗೆ ಸಾಗಾಟ ಮಾಡಲು ಮುಂದಾಗಿದ್ದರು ? ಈ ಜಾಲದ ಹಿಂದೆ ಯಾರ ಕೈವಾಡವಿದೆ ಎಂದು ಕುರಿತು ಸಿಐಡಿ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
Youtube Video

ಆರೋಪಿಗಳ ಪೈಕಿ ಶಿವ ಪ್ರಕರಣದ ರೂವಾರಿಯಾಗಿದ್ದು, ಈ ಹಿಂದೆಯೂ 2 ಸಾವಿರ ರೂ. ಮುಖ ಬೆಲೆಯ ನಕಲಿ ನೋಟುಗಳನ್ನು ಚಾಮರಾಜನಗರದಲ್ಲಿ ಸಾಗಾಟ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದ. ನಂತರ ಜೈಲಿನಿಂದ ಹೊರ ಬಂದು ಇದೀಗ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾನೆ. ಶಿವ ಎಂಟರ್ ಪ್ರೈಸಸ್ ಹೆಸರಿನ ಸಂಸ್ಥೆ ಸ್ಥಾಪಿಸಿರುವ ಆರೋಪಿ ಶಿವ ಇದರ ಹೆಸರಿನಲ್ಲಿ ವಾಹನವೊಂದನ್ನು ಖರೀದಿಸಿ, ವಾಹನದಲ್ಲಿ ಯಾರಿಗೂ ತಿಳಿಯದಂತೆ ನಕಲಿ ನೋಟುಗಳನ್ನು ಸಾಗಿಸುತ್ತಿದ್ದ. ಈ ಪ್ರಕರಣದಲ್ಲಿ ಹೊರ ರಾಜ್ಯದಿಂದ ನೋಟುಗಳನ್ನು ರಾಜ್ಯಕ್ಕೆ ತಂದಿರುವ ಶಂಕೆ ವ್ಯಕ್ತವಾಗಿತ್ತು.
Published by: Latha CG
First published: March 1, 2021, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories