ಬೆಂಗಳೂರಿನಲ್ಲಿ ಗುಂಡಿನ ಸದ್ದು; ಇಬ್ಬರು ರೌಡಿಶೀಟರ್​​ಗಳ ಮೇಲೆ ಪೊಲೀಸ್​ ಫೈರಿಂಗ್

ಪೊಲೀಸರು ಇಬ್ಬರು ಆರೋಪಿಗಳನ್ನು ಹಿಡಿಯಲು ಹೋದಾಗ ಅವರು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸಿಸಿಬಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್​ ಮಾಡಿದ್ದಾರೆ. 

news18-kannada
Updated:January 13, 2020, 8:10 AM IST
ಬೆಂಗಳೂರಿನಲ್ಲಿ ಗುಂಡಿನ ಸದ್ದು; ಇಬ್ಬರು ರೌಡಿಶೀಟರ್​​ಗಳ ಮೇಲೆ ಪೊಲೀಸ್​ ಫೈರಿಂಗ್
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜ.13): ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಇಬ್ಬರು ರೌಡಿಶೀಟರ್​​ಗಳ ಮೇಲೆ ಫೈರಿಂಗ್​ ನಡೆಸಿದ್ದಾರೆ. 

ಹಂದಿ ಮಹೇಶ್​ ಮತ್ತು ಸತೀಶ್ ಪೊಲೀಸರ ಗುಂಡೇಟು ತಿಂದವರು. ಬಿಟಿಎಂ ಲೇಔಟ್​​​ನ ರಂಕಾ ಕಾಲೋನಿ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಆರೋಪಿಗಳಿಬ್ಬರ ಮೇಲೂ ಸಾಕಷ್ಟು ಪ್ರಕರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಇಬ್ಬರು ಆರೋಪಿಗಳನ್ನು ಹಿಡಿಯಲು ಹೋದಾಗ ಅವರು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸಿಸಿಬಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್​ ಮಾಡಿದ್ದಾರೆ. ಸಿಸಿಬಿ ಇನ್ಸ್ ಪೆಕ್ಟರ್​​​​​ಗಳಾದ ಕೇಶವ ಮೂರ್ತಿ ಮತ್ತು ಪುನೀತ್ ಕುಮಾರ್ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ.

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಇಂದು ಕನಕಪುರ ಚಲೋ

ಆರೋಪಿ ಸತೀಶ್ ಮೇಲೆ 5 ಪ್ರಕರಣಗಳಿದ್ದು, ಅವುಗಳಲ್ಲಿ 3 ಕೊಲೆ ಪ್ರಕರಣಗಳಾಗಿವೆ. ಆರೋಪಿ ಹಂದಿ ಮಹೇಶ್ ಮೇಲೆ 2 ಕೊಲೆ, ಹಲ್ಲೆ ಸೇರಿದಂತೆ 6 ಪ್ರಕರಣಗಳು ದಾಖಲಾಗಿದ್ದವು. ಇಬ್ಬರನ್ನು ಸೆರೆ ಹಿಡಿಯಲು ಹೋದಾಗ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮೈಕೋ ಲೇಔಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪೊಲೀಸ್​ ಕಾನ್ಸ್​ಟೇಬಲ್​ ಹನುಮೇಶ್​ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಎಎ ವಿರುದ್ಧ ಆಂದೋಲನ; ಮಾಯಾವತಿ, ಮಮತಾ ಭಿನ್ನಸ್ವರದ ಮಧ್ಯೆ ವಿಪಕ್ಷಗಳಿಂದ ಇಂದು ಸಭೆ
Published by: Latha CG
First published: January 13, 2020, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading