HOME » NEWS » State » BANGALORE CRIME CCB POLICE ARREST HOUSE THIEF AND SEIZED 1 KG GOLD AT BANGALORE MTV LG

ಬೆಂಗಳೂರಿನಲ್ಲಿ ಕುಖ್ಯಾತ ಮನೆ ಕಳ್ಳನ ಬಂಧನ; 1 ಕೆ.ಜಿಗೂ ಹೆಚ್ಚು ಚಿನ್ನ ಜಪ್ತಿ ಮಾಡಿದ ಸಿಸಿಬಿ ಪೊಲೀಸರು 

ಫೆ.7 ರಂದು‌ ನಗರಕ್ಕೆ ಬಂದಿದ್ದ ಈ ಖುರ್ಷಿದ್ ಯಶವಂತಪುರ ಬಳಿ ಕಳ್ಳತನಕ್ಕೆ ಸ್ಕೆಚ್ ಹಾಕ್ತಾ ಇದ್ದ. ಬೀಗ ಹಾಕಿರುವ ಮನೆಗಳನ್ನು ಗುರ್ತಿಸಿ ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ಎಂಟ್ರಿ ಕೊಡ್ತಿದ್ದ. ಇನ್ನು ಮನೆಯಲ್ಲಿರೋ ಚಿನ್ನಾಭರಣ, ಹಣ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಎಸ್ಕೇಪ್ ಆಗ್ತಿದ್ದ.

news18-kannada
Updated:February 25, 2021, 3:17 PM IST
ಬೆಂಗಳೂರಿನಲ್ಲಿ ಕುಖ್ಯಾತ ಮನೆ ಕಳ್ಳನ ಬಂಧನ; 1 ಕೆ.ಜಿಗೂ ಹೆಚ್ಚು ಚಿನ್ನ ಜಪ್ತಿ ಮಾಡಿದ ಸಿಸಿಬಿ ಪೊಲೀಸರು 
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಫೆ.25): ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಮನೆಕಳವು ಪ್ರಕರಣಗಳು ಜಾಸ್ತಿ ಆಗುತ್ತಿವೆ. ಇದ್ರಿಂದ ಮನೆಕಳ್ಳರ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು ಓರ್ವ ಖರ್ತನಾಕ್ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಅಂಡ್ ಟೀಂನಿಂದ ಖುರ್ಷಿದ್ ಎಂಬಾತನನ್ನು ಬಂಧನ ಮಾಡಿದ್ದು, ಆತನಿಂದ ಸುಮಾರು 1  ಕೆ.ಜಿ. 280 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೀವನ್ ಭೀಮಾನಗರ, ಹನುಮಂತ ನಗರ, ಮೈಕೋ ಲೇ ಔಟ್, ನಂದಿನಿ ಲೇ ಔಟ್, ಜ್ಞಾನಭಾರತಿ, ಕೆಂಗೇರಿ ಸೇರಿದಂತೆ ಸುಮಾರು 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಖುರ್ಷಿದ್ ಬಂದು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ.

ಇನ್ನು ಉತ್ತರಪ್ರದೇಶ ಮೂಲದ ಗಾಜಿಯಾಬಾದ್ ನ ನಿವಾಸಿಯಾಗಿರುವ ಈತ ಚಿಕ್ಕ ವಯಸ್ಸಿನಿಂದಲೂ ಮನೆ ಕಳ್ಳತನ ಮಾಡೋದು ಶುರು ಮಾಡಿಕೊಂಡಿದ್ದ. ಉತ್ತರಪ್ರದೇಶದ ಗಾಜಿಯಾಬಾದ್ ಪೊಲೀಸರಿಂದಲೂ ಬಂಧನ ಆಗಿ ಜೈಲಿಗೂ ಹೋಗಿ ಬಂದಿದ್ದ. ಆದ್ರೆ ಉತ್ತರಪ್ರದೇಶದಲ್ಲಿ ಪೊಲೀಸರು ಕಣ್ಣಿಟ್ಟಿದ್ದಾರೆ ಅಂತೇಳಿ, ಕರ್ನಾಟಕಕ್ಕೆ ಬಂದು ಕಳ್ಳತನ ಮಾಡಲು ಶುರು ಮಾಡಿದ್ದ. ಅದ್ರಂತೆ ರಾಜ್ಯದಲ್ಲಿ ಸುಮಾರು 45 ಕಡೆಗಳಲ್ಲಿ ಕಳ್ಳತನ‌ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆರೋಪಿಯನ್ನು ಮತ್ತಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡ್ತಾ ಇದ್ದಾರೆ.

Google Search: ನೀವು ಗೂಗಲ್​​ನಲ್ಲಿ ಈ 8 ವಿಷಯಗಳ ಬಗ್ಗೆ ಸರ್ಚ್​ ಮಾಡುವಾಗ ಎಚ್ಚರದಿಂದಿರಿ..!

ಇನ್ನು ಫೆ.7 ರಂದು‌ ನಗರಕ್ಕೆ ಬಂದಿದ್ದ ಈ ಖುರ್ಷಿದ್ ಯಶವಂತಪುರ ಬಳಿ ಕಳ್ಳತನಕ್ಕೆ ಸ್ಕೆಚ್ ಹಾಕ್ತಾ ಇದ್ದ. ಬೀಗ ಹಾಕಿರುವ ಮನೆಗಳನ್ನು ಗುರ್ತಿಸಿ ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ಎಂಟ್ರಿ ಕೊಡ್ತಿದ್ದ. ಇನ್ನು ಮನೆಯಲ್ಲಿರೋ ಚಿನ್ನಾಭರಣ, ಹಣ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಎಸ್ಕೇಪ್ ಆಗ್ತಿದ್ದ. ಒಂದು ವೇಳೆ ಕಳ್ಳತನ ಮಾಡಿ‌ ಪರಾರಿಯಾಗುವಾಗ ಯಾರಾದ್ರೂ ನೋಡಿದ್ರೆ ತನ್ನ ಬಳಿ ಇದ್ದ ಗನ್ ಮೂಲಕ ಅವರನ್ನು ಬೆದರಿಸಿ ಅವರಿಂದಲೂ ಹಣ ಸುಲಿಗೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ. ಈತನ ಮೇಲೆ ನಗರ ಪೊಲೀಸರು ಕಣ್ಣಿಟ್ಟಿದ್ದರೂ, ಈತ ಮಾತ್ರ ಸುಮಾರು ವರ್ಷಗಳಿಂದ ಪೊಲೀಸರಿಗೆ ಸಿಗದೆ ನಾಪತ್ತೆಯಾಗಿದ್ದ.

ಆದ್ರೆ ಪ್ರಕರಣವನ್ನು ಬಹಳ ಗಂಭೀರವಾಗಿ ತಗೊಂಡಿದ್ದ ಸಿಸಿಬಿ ಪೊಲೀಸರು ಯಶವಂತಪುರಕ್ಕೆ ಕಳ್ಳತನ ಮಾಡಲು ಬಂದಿರುವ ಮಾಹಿತಿ ಆಧರಿಸಿ ಬಂಧನ ಮಾಡಿದ್ದಾರೆ. ಇನ್ನು ಆರೋಪಿಯನ್ನು ವಿಚಾರಣೆ ಮಾಡಿದಾಗ ಸುಮಾರು 15-20 ಕಡೆಗಳಲ್ಲಿ ಕಳ್ಳತನ ಮಾಡಿರೋದಾಗಿ ಹೇಳಿದ್ದು, ಕದ್ದ ಮಾಲನ್ನು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಇಟ್ಟಿರುವುದಾಗಿ ಹೇಳಿದ್ದ,  ಕೂಡಲೇ ಇನ್ಸ್ಪೆಕ್ಟರ್ ಹಜರೇಶ್ ಮತ್ತು ಟೀಂ ಅಲ್ಲಿನ ಸ್ಥಳೀಯ ಪೊಲೀಸರ ಸಹಾಯದಿಂದ ಸುಮಾರು 1 ಕೆಜಿ 280 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ತಂದಿದ್ದಾರೆ.

ಇನ್ನು ಪೊಲೀಸರ ಈ ಕಾರ್ಯಕ್ಕೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತನಿಖಾ ತಂಡಕ್ಕೆ ಸೂಕ್ತ ಬಹುಮಾನ ಸಹ ಸಿಸಿಬಿ ಮುಖ್ಯಸ್ಥರು ನೀಡಿದ್ದಾರೆ.
Published by: Latha CG
First published: February 25, 2021, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories