HOME » NEWS » State » BANGALORE CRIME BROTHERS KILLS HIS OWN SISTER IN RAMAMURTHY NAGAR KMTV SESR

Crime News: ಪ್ರೀತಿ ವಿಚಾರಕ್ಕೆ ತಂಗಿಯ ಉಸಿರುಗಟ್ಟಿಸಿ ಕೊಲೆಗೈದ ಅಣ್ಣ; ಆರೋಪಿ ಸುಳಿವು ನೀಡಿದ ಬರ್ಮುಡಾ ಚಡ್ಡಿ

ಸಿಸಿಟಿವಿಯಲ್ಲಿ ಆ ವ್ಯಕ್ತಿ ಬರ್ಮುಡಾ ಚಡ್ಡಿ ಧರಿಸಿದ್ದು, ಅದೇ ತೆರನಾದ ಚಡ್ಡಿ ಕೊಲೆಯಾದ ಯುವತಿ ಮನೆಯಲ್ಲಿ ಕಾಣಿಸಿತ್ತು. ಕೂಡಲೇ ಪೊಲೀಸರು ಯುವತಿ ಅಣ್ಣ ರವಿಕಿರಣ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ

news18-kannada
Updated:April 6, 2021, 10:15 PM IST
Crime News: ಪ್ರೀತಿ ವಿಚಾರಕ್ಕೆ ತಂಗಿಯ ಉಸಿರುಗಟ್ಟಿಸಿ ಕೊಲೆಗೈದ ಅಣ್ಣ; ಆರೋಪಿ ಸುಳಿವು ನೀಡಿದ ಬರ್ಮುಡಾ ಚಡ್ಡಿ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಏ. 6): ಅವರಿಬ್ಬರು ಒಂದೇ ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ-ತಂಗಿ. ಆದರೆ, ಇತ್ತೀಚೆಗೆ ತನ್ನ ನಲ್ಮೆಯ ಸಹೋದರಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದನ್ನ ಗಮನಿಸಿದ ಅಣ್ಣ, ಆಕೆಯ ಜೊತೆ ಜಗಳಕ್ಕೆ ಇಳಿದಿದ್ದ. ಮಾತು ವಿಕೋಪಕ್ಕೆ ತೆರಳಿ ಕಡೆಗೆ ಅಣ್ಣನೇ ಪ್ರೀತಿಯ ತಂಗಿ ಕೊಲೆ ಮಾಡಿ, ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದ. ಆದರೆ, ಕೊಲೆ ಆರೋಪಿಯ ಸುಳಿವು ಕೊಟ್ಟಿದ್ದು, ತಾನೇ ಸಾಕಿದ ಮುದ್ದಿನ ನಾಯಿ, ಆತನ ಬರ್ಮುಡಾ ಚಡ್ಡಿ. ಭಾನುವಾರ ಅಂದರೆ ಏ . 4ರ ಮಧ್ಯರಾತ್ರಿ ರಾಮಮೂರ್ತಿನಗರ ವ್ಯಾಪ್ತಿಯ ಹೊರಮಾವು ರೈಲು ಹಳಿ ಬಳಿ ಯುವತಿಯೊರ್ವಳ ಶವ ಪತ್ತೆಯಾಗಿತ್ತು. ಸ್ಥಳೀಯ ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರೈಲು ಹಳಿ ಬಳಿಯಿದ್ದ ಶವ  ಗಮನಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯನ್ನು ಮೊದಲೇ ಕೊಲೆ ಮಾಡಿ ಯಾರೋ ಶವ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಂಡಿದ್ದರು. ಬಳಿಕ ಯುವತಿ ಶವ ಹೆಣ್ಣೂರು ಠಾಣಾ ವ್ಯಾಪ್ತಿಯ ನಿವಾಸಿ ಮಂಗಳ ಎಂಬುದು ಪತ್ತೆಯಾಗಿದೆ. ಬಳಿಕ ಆಕೆಯ ಮನೆಯವರನ್ನ ಪತ್ತೆ ಹಚ್ಚಿ ವಿಷಯ ಮುಟ್ಟಿಸಿದ್ದಾರೆ ಪೊಲೀಸರು

ಕೊಲೆ ಬಗ್ಗೆ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ವೇಳೆ ರೈಲು ಹಳಿ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿಗಳನ್ಮ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಓರ್ವ ವ್ಯಕ್ತಿ ಯುವತಿಯ ಶವವನ್ನ ಹೊತ್ತುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರು ಆ ವ್ಯಕ್ತಿ ಯಾರು ಎನ್ನುವುದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಜೊತೆಗೆ ಯುವತಿ ಮನೆಯವರನ್ನ ವಿಚಾರಣೆ ನಡೆಸಿ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಒಂದು ಸಣ್ಣ ಸುಳಿವು ಸಿಕ್ಕಿತ್ತು. ಅದೇನಪ್ಪ ಅಂದ್ರೆ ಸಿಸಿಟಿವಿಯಲ್ಲಿ ಆ ವ್ಯಕ್ತಿ ಬರ್ಮುಡಾ ಚಡ್ಡಿ ಧರಿಸಿದ್ದು, ಅದೇ ತೆರನಾದ ಚಡ್ಡಿ ಕೊಲೆಯಾದ ಯುವತಿ ಮನೆಯಲ್ಲಿ ಕಾಣಿಸಿತ್ತು. ಕೂಡಲೇ ಪೊಲೀಸರು ಯುವತಿ ಅಣ್ಣ ರವಿಕಿರಣ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ರವಿಕಿರಣ್ ಗುರುವಾರ ರಾತ್ರಿ ತಾನು ಆ ಸಮಯದಲ್ಲಿ ತನ್ನ ನಾಯಿಗೆ ಹಾಲು ತರಲು ಹೊರಗಡೆ ಹೋಗಿದ್ದೆ. ಮನೆಯಲ್ಲಿ ಇರಲಿಲ್ಲ ಎಂದು ಕಥೆ ಕಟ್ಟಿದ್ದಾನೆ. ಪೊಲೀಸರು ತಮ್ಮ ಬಳಿಯಿದ್ದ ಸಿಸಿಟಿವಿ ವಿಡಿಯೋ ಮತ್ತೆ ಪರಿಶೀಲಿಸಿದಾಗ ನಾಯಿ ಆತನ ಜೊತೆಯಲ್ಲಿ ಹೋಗುತ್ತಿರುವುದು ಕಂಡು ಬಂದಿದೆ. ಬಳಿಕ ಪೊಲೀಸರು ರವಿಕಿರಣ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ.

ಆರೋಪಿ ರವಿಕಿರಣ್ ಕೊಲೆಯಾದ ಮಂಗಳಗೆ ಅಣ್ಣನಾಗಿದ್ದು, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳ ಸಹ ಪೋಟೋ ಫ್ರೇಮ್​ ಹಾಕುವ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಳಂತೆ.  ಇತ್ತೀಚೆಗೆ ಮಂಗಳ ಕ್ಯಾಬ್ ಚಾಲಕನನ್ನ ಪ್ರೀತಿಸುತ್ತಿದ್ದು ಈ ವಿಚಾರ ಅಣ್ಣನಿಗೆ ಗೊತ್ತಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಬಗ್ಗೆ ಇಬ್ಬರ ನಡುವೆ ಗಲಾಟೆಯಾಗಿತಂತೆ. ಕ್ಯಾಬ್ ಚಾಲಕನೊಂದಿಗೆ ಮಂಗಳ ಮದುವೆಗೆ ನಿರಾಕರಿಸಿದ್ದ. ಈ ವಾಗ್ವಾದದಿಂದ ಬೇಸತ್ತ ರವಿಕಿರಣ್ ಭಾನುವಾರ ರಾತ್ರಿ ತಂಗಿಯನ್ನ ವೇಲ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ರಾತ್ರಿ ಎರಡು ಗಂಟೆ ಸುಮಾರಿಗೆ ಶವವನ್ನ ಬೆನ್ನ ಮೇಲೆ ಹೊತ್ತುಕೊಂಡು ಸುಮಾರು 300  ಮೀಟರ್ ನಡೆದುಕೊಂಡು ರೈಲು ಹಳಿಗೆ ತೆರಳಿ ಅಲ್ಲಿ ಶವ ಹಾಕಿದ್ದ ಎಂದು ರೈೈಲ್ವೆ ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ರೈಲು ಹಳಿ ಪಕ್ಕದ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಅಲ್ಲಿಂದ ಬರೋದರಲ್ಲಿ ಶವವನ್ನ ಮತ್ತೊಂದು ಕಡೆಗೆ ಬದಲಾಯಿಸಿದ್ದನಂತೆ. ಅರ್ಧ ರಾತ್ರಿವರೆಗೂ ರವಿಕಿರಣ್ ರೈಲು ಹಳಿ ಸುತ್ತಮುತ್ತ ಓಡಾಡ್ಕೊಂಡು ಕಾಲ ಕಳೆದಿದ್ದನಂತೆ.  ರೈಲು ಬರೋದು ತಡವಾಗಿದ್ದರಿಂದ ಪೊಲೀಸರು ದೌಡಾಯಿಸಿ ಶವವನ್ನ ಹಳಿಯಿಂದ ಹೊರ ತೆಗೆದಿದ್ದಾರೆ. ತಂಗಿಯನ್ನ ಕೊಲೆ ಮಾಡಿ ಮರೆ ಮಾಚಲು ಯತ್ನಿಸಿದ ಪಾಪಿ ಅಣ್ಣನನ್ನ ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ತೀರ ಕಡು ಬಡತನದಲ್ಲಿ ಇದ್ದ ರವಿಕಿರಣ್ ಮತ್ತು ಮಂಗಳ ತಂದೆಯನ್ನು ಕಳೆದುಕೊಂಡಿದ್ದಾರೆ. ತಾಯಿ ಅನಾರೋಗ್ಯ ಪೀಡಿತರಾಗಿದ್ದು, ಹಾಸಿಗೆ ಹಿಡಿದಿದ್ದಾರೆ.  ಪ್ರೀತಿ ವಿಚಾರಕ್ಕೆ ಇದ್ದ ತಂಗಿಯನ್ನು ಕೊಂದ ಅಣ್ಣ ಈಗ ಜೈಲು ಸೇರಿದ್ದು ದುರ್ದೈವವೇ ಸರಿ.
Published by: Seema R
First published: April 6, 2021, 10:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories