HOME » NEWS » State » BANGALORE CRIME BENGALURU WOMAN MURDERS HUSBAND WITH HELP OF SUPARI KILLER KMTV SCT

Bangalore Crime: ಬೆಂಗಳೂರಿನಲ್ಲಿ ಸುಪಾರಿ ಕೊಟ್ಟು ಗಂಡನನ್ನು ಕೊಂದ ಹೆಂಡತಿ; ಹೃದಯಾಘಾತವೆಂದು ಕತೆ ಕಟ್ಟಿ ಸಿಕ್ಕಿಬಿದ್ದಳು!

Bengaluru Crime: ಸರ್ವರಿ ಬೇಗಂಳ ಗಂಡ ಮೊಹಮ್ಮದ್ ಹಂಜಲ್ ಗೆ ಪತ್ನಿಯ ಮೇಲೆ ಸದಾ ಸಣ್ಣ ಅನುಮಾನ ಕಾಡುತ್ತಿತ್ತು. ಇದರಿಂದ ಬೇಸತ್ತ ಸರ್ವರಿ ಬೇಗಂ ಮತ್ತು ಮಗ ಶಪೀಉರ್ ರೆಹಮಾನ್ ತನ್ನ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದರು.

news18-kannada
Updated:March 5, 2021, 10:59 AM IST
Bangalore Crime: ಬೆಂಗಳೂರಿನಲ್ಲಿ ಸುಪಾರಿ ಕೊಟ್ಟು ಗಂಡನನ್ನು ಕೊಂದ ಹೆಂಡತಿ; ಹೃದಯಾಘಾತವೆಂದು ಕತೆ ಕಟ್ಟಿ ಸಿಕ್ಕಿಬಿದ್ದಳು!
Bengaluru Crime: ಸರ್ವರಿ ಬೇಗಂಳ ಗಂಡ ಮೊಹಮ್ಮದ್ ಹಂಜಲ್ ಗೆ ಪತ್ನಿಯ ಮೇಲೆ ಸದಾ ಸಣ್ಣ ಅನುಮಾನ ಕಾಡುತ್ತಿತ್ತು. ಇದರಿಂದ ಬೇಸತ್ತ ಸರ್ವರಿ ಬೇಗಂ ಮತ್ತು ಮಗ ಶಪೀಉರ್ ರೆಹಮಾನ್ ತನ್ನ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದರು.
  • Share this:
ಬೆಂಗಳೂರು (ಮಾ. 5): ಅವರದು 30 ವರ್ಷಗಳ ದಾಂಪತ್ಯ ಜೀವನ.  ಇಷ್ಟು ವರ್ಷ ಜೊತೆಯಲ್ಲಿ ಜೀವನ ಮಾಡಿದರೂ ಗಂಡನಿಗೆ ಹೆಂಡತಿ ಮೇಲೆ ಸಣ್ಣ ಅನುಮಾನ. ಗಂಡನ ವರ್ತನೆಯಿಂದ ಪತ್ನಿ ತನ್ನ ಮಗನ ಜೊತೆಗೂಡಿ ಗಂಡನ ಕೊಲೆಗೆ ಸುಪಾರಿ ಕೊಟ್ಟು ಸಿಕ್ಕಿ ಬಿದ್ದಿದ್ದಾಳೆ. ಹೌದು, ಅದು ತುಂಬು ಕುಟುಂಬ, ನಾಲ್ವರು ಮಕ್ಕಳು. ತಂದೆ -ತಾಯಿ ಒಂದೇ ಮನೆಯಲ್ಲಿ ವಾಸವಾಗಿದ್ದವರು. ಆದರೆ, ಆ ಮನೆಯಲ್ಲಿ ಅನುಮಾನ ಎಂಬ ಭೂತ ಮನೆಯವರನ್ನು ಸದಾ ಕಾಡುತ್ತಿತ್ತು. ಇದರಿಂದ ಮನೆ ಜನರ ನೆಮ್ಮದಿ ಹಾಳಾಗಿದ್ದು, ಇದಕ್ಕೆಲ್ಲ ತನ್ನ ಪತಿಯೇ ಕಾರಣ ಎಂದು ಪತ್ನಿ ಸುಪಾರಿ ಕೊಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಆ ಮಹಿಳೆಯ ಹೆಸರು ಸರ್ವರಿ ಬೇಗಂ. ಆಕೆ ಮೂವತ್ತು ವರ್ಷಗಳ ಹಿಂದೆ ಮೊಹಮ್ಮದ್ ಹಂಜಲ್ ಎಂಬಾತನನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದಳು. ಆ ದಂಪತಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು ನಗರದ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು. ಆದರೆ, ಸರ್ವರಿ ಬೇಗಂಳ ಗಂಡ ಮೊಹಮ್ಮದ್ ಹಂಜಲ್ ಗೆ ಪತ್ನಿಯ ಮೇಲೆ ಸದಾ ಸಣ್ಣ ಅನುಮಾನ ಕಾಡುತ್ತಿತ್ತು. ಇದರಿಂದ ಮನೆಯಲ್ಲಿ ಆಗಾಗ ಜಗಳ ಕೂಡ ಆಗುತ್ತಿತ್ತು. ಮನೆಯ ನಿರ್ವಹಣೆ ಕೂಡ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಮನೆ ಮಂದಿ ಬೇಸರಗೊಂಡಿದ್ದರು.

ಮನೆಯಲ್ಲಿ ಪ್ರತಿದಿನ ಕಿರುಕುಳ ಗಲಾಟೆ ಸರ್ವೇಸಾಮಾನ್ಯವಾಗಿದ್ದು ಇದರಿಂದ ಬೇಸತ್ತ ಸರ್ವರಿ ಬೇಗಂ ಮತ್ತು ಮಗ ಶಪೀಉರ್ ರೆಹಮಾನ್ ತನ್ನ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ತನ್ನ ಸ್ನೇಹಿತ ಸೈಯದ್ ಅವೇಜ್​ನನ್ನು ಕರೆಸಿದ ಶಪೀಉರ್ ರೆಹಮಾನ್ ಅವನಿಗೆ ನಾಲ್ಕೂವರೆ ಲಕ್ಷ ಸುಪಾರಿ ಕೊಟ್ಟು ತನ್ನ ತಂದೆ ಕೊಲೆಗೆ ಸೂಚನೆ ನೀಡಿದ್ದ. ಮೂವರು ಆರೋಪಿಗಳು ಫೆಬ್ರವರಿ 10ರಂದು ಹೆಗ್ಗನಹಳ್ಳಿಯ ಮೊಹಮ್ಮದ್ ಹಂಜಲ್ ಮನೆಗೆ ಹೋಗಿದ್ದರು. ಅಂದು ರಾತ್ರಿ ಊಟದ ಸಮಯದಲ್ಲಿ ಬದನೆಕಾಯಿ ಗೊಜ್ಜು ಮಾಡಿಸಿ ಅದರಲ್ಲಿ ಆರು ನಿದ್ದೆಯ ಮಾತ್ರೆಗಳನ್ನ ಹಾಕಿದ್ದರು. ಊಟದ ಬಳಿಕ ಮೊಹಮ್ಮದ್ ಹಂಜಲ್ ಗಾಢ ನಿದ್ದೆಗೆ ಜಾರಿದ್ದು ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಆರೋಪಿಗಳು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬಲಿ!

ಮೊಹಮ್ಮದ್ ಹಂಜಲ್ ಸಾವನ್ನಪ್ಪಿದ ಬಳಿಕ ಆರೋಪಿಗಳು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿ ಸ್ಥಳೀಯರನ್ನ ನಂಬಿಸಿದ್ದಾರೆ. ಮರುದಿನ ಪಕ್ಕದ ತಿಗಳರಪಾಳ್ಯದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ, ಕೆಲವು ದಿನಗಳ ಬಳಿಕ ಮೊಹಮ್ಮದ್ ಹಂಜಲ್ ಸಾವಿನ ಬಗ್ಗೆ ಅನಾಮಿಕ ಮೂಕರ್ಜಿಯೊಂದು ಪೊಲೀಸ್ ಠಾಣೆಗೆ ತಲುಪಿದೆ. ಪೊಲೀಸರು ಮೂಕರ್ಜಿ ಹಿಡಿದು ಘಟನೆ ನಡೆದ ಹೆಗ್ಗನಹಳ್ಳಯಲ್ಲಿ ವಿಚಾರಣೆ ನಡೆಸಿದ್ದಾರೆ. ಬಳಿಕ ಮೃತನ ಪತ್ನಿ ಸರ್ವರಿ ಬೇಗಂ ಮತ್ತು ಮಗ ಶಪೀಉರ್ ರೆಹಮಾನ್ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಪೊಲೀಸರು ಹಂಜಲ್ ಪತ್ನಿ ಸರ್ವರಿ ಬೇಗಂ ಮಗ ಶಪೀಉರ್ ರೆಹಮಾನ್ ಸೇರಿ ಐವರನ್ನ ಬಂಧಿಸಿದ್ದಾರೆ .

ಮೃತ ಮೊಹಮ್ಮದ್ ಹಂಜಲ್ ಬಿಹಾರ ಮೂಲದವನಾಗಿದ್ದು 25 ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲಸಿದ್ದನಂತೆ. ನಗರದಲ್ಲಿ ಚಪ್ಪಲಿ ತಯಾರು ಮಾಡುವ ಪೀಸ್ ವರ್ಕರ್ ಅಗಿ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ದನಂತೆ. ಅದರೆ ಸಂಸಾರ ನಿರ್ವಹಣೆಗೆ ಸರಿಯಾಗಿ ಸಹಾಯ ಮಾಡ್ತಿಲ್ಲ ಅಂತ ಪತ್ನಿ ಮತ್ತು ಮಗನಿಗೆ ಹಂಜಲ್ ಮೇಲೆ ಕೋಪವಿತ್ತು ಎನ್ನಲಾಗಿದೆ. ಹಾಗೂ ಮನೆಯಲ್ಲಿ ಬೆಳೆದು ನಿಂತ ಮಕ್ಕಳಿದ್ದರು ಅವರ ಯೋಗಕ್ಷೇಮ ಮದುವೆಗಳ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಸದ್ಯ ಈ ಬಗ್ಗೆ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Published by: Sushma Chakre
First published: March 5, 2021, 10:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories