HOME » NEWS » State » BANGALORE CRIME BENGALURU SON ARRESTED FOR GIVING SUPARI TO CONTRACT KILLERS TO KILL FATHER SCT

Bangalore Crime | ಆಸ್ತಿಗಾಗಿ ಅಪ್ಪನನ್ನೇ ಕೊಲ್ಲಲು ಸುಪಾರಿ ನೀಡಿದ ಮಗ; ಕೊನೆಗೂ ಸೆರೆ ಸಿಕ್ಕ ಹಂತಕರು

Bengaluru Crime | ಬೆಂಗಳೂರಿನಲ್ಲಿ ಆಸ್ತಿಗಾಗಿ ತಂದೆ ಮಾಧವ ಅವರ ಹತ್ಯೆಗೆ 25 ಲಕ್ಷ ರೂ. ಸುಪಾರಿ ನೀಡಿದ್ದ ಮಗ ಹರಿಕೃಷ್ಣನಿಗೆ ಆತನ ಚಿಕ್ಕಪ್ಪ ಕೂಡ ಸಾಥ್ ನೀಡಿದ್ದ.

news18-kannada
Updated:February 16, 2021, 8:52 AM IST
Bangalore Crime | ಆಸ್ತಿಗಾಗಿ ಅಪ್ಪನನ್ನೇ ಕೊಲ್ಲಲು ಸುಪಾರಿ ನೀಡಿದ ಮಗ; ಕೊನೆಗೂ ಸೆರೆ ಸಿಕ್ಕ ಹಂತಕರು
ಹರಿಕೃಷ್ಣ
  • Share this:
ಬೆಂಗಳೂರು (ಫೆ. 16): ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಹಣದ ಮುಂದೆ ಸಂಬಂಧಗಳೆಲ್ಲವೂ ಮಾಸಿ ಹೋಗಿ, ಕೊಲೆಯ ಮಟ್ಟಕ್ಕೆ ಇಳಿದ ಘಟನೆಗಳೂ ಸಾಕಷ್ಟಿವೆ. ಬೆಂಗಳೂರಿನಲ್ಲಿ ಕೂಡ ಅಂಥದ್ದೇ ಘಟನೆ ನಡೆದಿದ್ದು, ಕೋಟ್ಯಂತರ ರೂ. ಆಸ್ತಿಗಾಗಿ ಮಗನೇ ಅಪ್ಪನನ್ನು ಕೊಲ್ಲಲು ಸುಪಾರಿ ನೀಡಿದ್ದ. ತಂದೆಯ ಕೊಲೆ ಮಾಡಿಸಿ ತಲೆ ಮರೆಸಿಕೊಂಡಿದ್ದ ಮಗ ಮತ್ತು ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆ, ಈ ಘಟನೆ ನಡೆದು ಬರೋಬ್ಬರಿ ಒಂದು ವರ್ಷ ಕಳೆದಿದೆ. 1 ವರ್ಷ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೂ ಅವರನ್ನು ಸೆರೆ ಹಿಡಿದಿದ್ದಾರೆ. ತಲಘಟ್ಟಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ ಬಂಧಿತ ಆರೋಪಿಗಳು.

ಮಾಧವ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಸುಪಾರಿ ಹಂತಕರು ಕೊನೆಗೂ ಬಲೆಗೆ ಬಿದ್ದಿದ್ದಾರೆ. ಆಸ್ತಿಗಾಗಿ ತಂದೆ ಮಾಧವ ಅವರ ಹತ್ಯೆಗೆ 25 ಲಕ್ಷ ರೂ. ಸುಪಾರಿ ನೀಡಿದ್ದ ಮಗ ಹರಿಕೃಷ್ಣನಿಗೆ ಆತನ ಚಿಕ್ಕಪ್ಪ ಕೂಡ ಸಾಥ್ ನೀಡಿದ್ದ. ಹರಿಕೃಷ್ಣನಿಗೆ ಸಾಥ್ ನೀಡಿದ್ದ ಆತನ ಚಿಕ್ಕಪ್ಪ ಶಿವರಾಮ್ ಪ್ರಸಾದ್​ನನ್ನು ಕೂಡ ಬಂಧಿಸಲಾಗಿದೆ.

ಪ್ರೇಯಸಿಯ ಇನ್​ಸ್ಟಾಗ್ರಾಂ ಫೋಟೋ ನೋಡಿ ಅಸೂಯೆ; ಬ್ಲೇಡ್​ನಿಂದ ಯುವತಿಯ ಕೆನ್ನೆ ಸೀಳಿದ ಪ್ರೇಮಿ

2020ರ ಫೆ. 14ರಂದು ಗುಬ್ಬಲಾಳ ರಸ್ತೆಯಲ್ಲಿ ಕೊಲೆ ನಡೆದಿತ್ತು. ಮಾಧವ್ ಹತ್ಯೆ ಮಾಡಿದ್ದ ಐವರು ಸುಫಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. 2020ರ ಜೂನ್​ನಲ್ಲಿ ಸುಪಾರಿ ಕಿಲ್ಲರ್​ಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದರು. ರಿಯಾಜ್ ಅಹಮದ್, ಶಾರುಖ್ ಖಾನ್, ಸೈಯದ್ ಸಲ್ಮಾನ್, ಆದಿಲ್‌ ಖಾನ್, ಷಹಬಾಜ್ ನಜೀರ್ ಬಂಧನಕ್ಕೊಳಗಾಗಿದ್ದರು.

Bengaluru Crime | Bangalore Son arrested for giving Supari to Contract Killers to Kill Father.
ಮಾಧವ್


ಬರೋಬ್ಬರಿ 1 ವರ್ಷದ ಬಳಿಕ ಈ ಕೊಲೆ ಪ್ರಕರಣದ ಇಬ್ಬರು ಮಾಸ್ಟರ್ ಮೈಂಡ್​ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೊಲೆಯಾದ ಮಾಧವ್ ಗಣಿ ಉದ್ಯಮಿಯಾಗಿದ್ದರು. ಕೋಟ್ಯಂತರ ಮೌಲ್ಯದ ಬಳ್ಳಾರಿ ಸ್ಟೀಲ್ ಮತ್ತು ಅಲಾಯ್ ಲಿಮಿಟೆಡ್ ಕಂಪನಿ ಮಾಲೀಕನಾಗಿದ್ದರು. ಅಪ್ಪನ ಆಸ್ತಿಯನ್ನು ಹೊಡೆಯಲು ಸಂಚು ಹಾಕಿದ ಮಗ ಹರಿಕೃಷ್ಣ ಅಪ್ಪನನ್ನು ಕೊಲ್ಲಲು ಚಿಕ್ಕಪ್ಪನ ಜೊತೆ ಸೇರಿ ಸುಪಾರಿ ನೀಡಿದ್ದ.ಗಣಿಗಾರಿಕೆ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದ ಮಾಧವನ ಬಳಿ ಇರುವ ಆಸ್ತಿ ಮಾರಾಟ ಮಾಡುವಂತೆ ಅವರ ಮಗ ಹಾಗೂ ತಮ್ಮ ಒತ್ತಾಯಿಸಿದ್ದರು. ಆದರೆ, ಆ ಸಲಹೆಯನ್ನು ತಳ್ಳಿ ಹಾಕಿದ್ದ ಮಾಧವನನ್ನು ಕೊಂದು, ಆಸ್ತಿ ತಮ್ಮದಾಗಿಸಿಕೊಳ್ಳಲು ಅವರಿಬ್ಬರೂ ಸಂಚು ರೂಪಿಸಿದ್ದರು. ಮಾಧವ್ ಹತ್ಯೆಗೆ ನಿರಂತರ ಪ್ರಯತ್ನ ನಡೆಸಿದ್ದ ಆರೋಪಿಗಳು ಕೊನೆಗೆಸುಪಾರಿ ಹಂತಕರ ನೆರವಿನಿಂದ ಮಾಧವ್ ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದರು.
Youtube Video

ಮಾಧವ ಅವರ ಕೊಲೆ ಬಳಿಕ ಎಸ್ಕೇಪ್ ಆಗಿದ್ದ ಮಗ ಹರಿಕೃಷ್ಣ ಮತ್ತು ತಮ್ಮ ಶಿವರಾಮ ಪ್ರಸಾದ್ ಕೊನೆಗೂ ಸೆರೆ ಸಿಕ್ಕಿದ್ದಾರೆ. ಕೊನೆಗೂ ಸುಪಾರಿ ಕೊಟ್ಟವರನ್ನು ಬಂಧಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
Published by: Sushma Chakre
First published: February 16, 2021, 8:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories