Bangalore Crime: ಬೆಂಗಳೂರು; ಗೃಹ ಪ್ರವೇಶಕ್ಕೆ ಬೆಳ್ಳಿ ನಾಣ್ಯ ಕೊಡುವ ನೆಪದಲ್ಲಿ ಬಂದು ಚಿನ್ನದ ಸರದೊಂದಿಗೆ ಎಸ್ಕೇಪ್!

ರಾಜಾಜಿನಗರದ ಸೀತಾಪತಿ ದಂಪತಿಯ ಮನೆಗೆ ತೆರಳಿದ್ದ ಆರೋಪಿ ಅಕ್ಷಯ್​, ನಮ್ಮ ಮನೆ ಗೃಹ ಪ್ರವೇಶವಿದೆ ಅಂತ ಒಂದು ಬೆಳ್ಳಿ ನಾಣ್ಯ ಕೊಟ್ಟಿದ್ದ. ನೀವು ಗೃಹ ಪ್ರವೇಶಕ್ಕೆ ಬಂದಾಗ, ಚಿನ್ನದ ಡಾಲರ್ ಕೊಡುತ್ತೇವೆ ಎಂದಿದ್ದ.

news18-kannada
Updated:October 18, 2020, 10:16 AM IST
Bangalore Crime: ಬೆಂಗಳೂರು; ಗೃಹ ಪ್ರವೇಶಕ್ಕೆ ಬೆಳ್ಳಿ ನಾಣ್ಯ ಕೊಡುವ ನೆಪದಲ್ಲಿ ಬಂದು ಚಿನ್ನದ ಸರದೊಂದಿಗೆ ಎಸ್ಕೇಪ್!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 18): ಕೊರೋನಾ ಭೀತಿಯ ನಡುವೆಯೂ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ನಾನಾ ನೆಪಗಳಿಂದ ಯಾಮಾರಿಸಿ, ಹಣ ದೋಚುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಗೃಹ ಪ್ರವೇಶಕ್ಕೆ ಬೆಳ್ಳಿ ನಾಣ್ಯ ಕೊಡುವ ನೆಪದಲ್ಲಿ ದಂಪತಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿಮ್ಮ ಎದುರು ಮನೆಯ ನಿವಾಸಿ ನಾನು ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಮನೆ ಗೃಹ ಪ್ರವೇಶಕ್ಕೆ ಆಮಂತ್ರಣ ನೀಡಿದ್ದ. ಈ ವೇಳೆ ಮನೆ ಗೃಹ ಪ್ರವೇಶ ಎಂದು ಬೆಳ್ಳಿ ನಾಣ್ಯ ಕೊಟ್ಟಿದ್ದ. ಕಾರ್ಯಕ್ರಮಕ್ಕೆ ಬಂದರೆ ಚಿನ್ನದ ನಾಣ್ಯ ಕೊಡುತ್ತೇವೆ ಎಂದು ಹೇಳಿ ವಂಚನೆ ಮಾಡಿದ್ದ. ಬೆಂಗಳೂರಿನ ರಾಜಾಜಿನಗರದಲ್ಲಿ ಘಟನೆ ನಡೆದಿದೆ.

ರಾಜಾಜಿನಗರದ ಸೀತಾಪತಿ ದಂಪತಿಯ ಮನೆಗೆ ತೆರಳಿದ್ದ ಆರೋಪಿ ಅಕ್ಷಯ್​, ನಾನು ನಿಮ್ಮ ಎದುಗಡೆ ಮನೆ ನಿವಾಸಿ. ನಮ್ಮ ಮನೆ ಗೃಹ ಪ್ರವೇಶವಿದೆ. ನೀವೂ ಬನ್ನಿ ಅಂತ ದಂಪತಿ ಕೈಗೆ ಒಂದು ಬೆಳ್ಳಿ ಡಾಲರ್ ಮಾದರಿಯ ನಾಣ್ಯ ಕೊಟ್ಟಿದ್ದ. ಬಳಿಕ ನೀವು ಗೃಹ ಪ್ರವೇಶಕ್ಕೆ ಬಂದಾಗ, ನಿಮ್ಮ ಚಿನ್ನದ ಸರಕ್ಕೆ ಚಿನ್ನದ ಡಾಲರ್ ಕೊಡುತ್ತೇವೆ ಎಂದಿದ್ದ. ಹೀಗಂತ ಸೀತಾಪತಿಯ ಹೆಂಡತಿಯ ಬಳಿ ಇರುವ 24 ಗ್ರಾಂ ಚಿನ್ನಾಭರಣ ಪಡೆದಿದ್ದ. ನಂತರ ಚಿನ್ನದ ಡಾಲರ್ ಕೊಡುತ್ತೇನೆಂದು ಕರೆದೊಯ್ಯುತ್ತಿದ್ದ.

ಅದೇ ಸಮಯಕ್ಕೆ ಗ್ಯಾಸ್ ಸಿಲಿಂಡರ್ ವ್ಯಕ್ತಿ ಬಂದಾಗ, ಆತನಿಗೆ ಹಣ ಕೊಡಲು ಬೀರುವಿನ ಕೀಗಾಗಿ ವೃದ್ದ ಹುಡುಕಾಟ ನಡೆಸಿದ್ದರು. ಕೀ ಸಿಗದ ಕಾರಣ, ಗ್ಯಾಸ್ ಸಿಲಿಂಡರ್ ವ್ಯಕ್ತಿಗೆ ನಾಳೆ ಬಾ ಎಂದು ವೃದ್ಧ ಸೀತಾಪತಿ ಹೇಳಿ ಕಳುಹಿಸಿದ್ದರು. ಅಷ್ಟರಲ್ಲಾಗಲೇ ವೃದ್ಧ ಸೀತಾಪತಿಯ ಪತ್ನಿಯ ಚಿನ್ನದ ಸರ ಕದ್ದು ಅಕ್ಷಯ್ ಎಸ್ಕೇಪ್ ಆಗಿದ್ದ. ಬಳಿಕ ಸುಬ್ರಹ್ಮಣ್ಯ ನಗರ ಪೊಲೀಸರಿಂದ ಆರೋಪಿ ಅಕ್ಷಯ್​ಗಾಗಿ ಶೋಧ ನಡೆಸಲಾಗಿದೆ.

ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಆರೋಪಿ ಅಕ್ಷಯ್ ಡಿಯೋ ಬೈಕ್ ಪತ್ತೆ ಹಚ್ಚಲಾಗಿದೆ. ಡಿಯೋ ಬೈಕ್ ನಂಬರ್ KA-02 HV-4778 ನಂಬರ್ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಬೈಕ್ ನಂಬರ್ ಆಧಾರದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಅಕ್ಷಯ್​ನಿಂದ 22 ಗ್ರಾಂ ಚಿನ್ನದ ಸರ ಹಾಗೂ ಬೈಕ್ ಜಪ್ತಿ ಮಾಡಲಾಗಿದ್ದು, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published by: Sushma Chakre
First published: October 18, 2020, 10:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading