HOME » NEWS » State » BANGALORE CRIME BENGALURU POLICE SHOOTOUT ON ROWDYSHEETER CHADDI KIRAN TODAY MORNING SCT

Bangalore Crime: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ರೌಡಿಶೀಟರ್ ಕಿರಣ್ ಕಾಲಿಗೆ ಗುಂಡೇಟು

Bengaluru Crime News: ಲಗ್ಗೆರೆ ಬಳಿ ಆರೋಪಿ ಕಿರಣ್ ಇರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಇಂದು ಮುಂಜಾನೆ ಆರೋಪಿಯನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಕಿರಣ್ ಹಲ್ಲೆಗೆ ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

news18-kannada
Updated:March 7, 2021, 9:59 AM IST
Bangalore Crime: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ರೌಡಿಶೀಟರ್ ಕಿರಣ್ ಕಾಲಿಗೆ ಗುಂಡೇಟು
ಚಡ್ಡಿ ಕಿರಣ್
  • Share this:
ಬೆಂಗಳೂರು (ಮಾ. 7): ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಶೂಟೌಟ್ ನಡೆದಿದೆ. ರೌಡಿ ಶೀಟರ್ ಕಿರಣ್ ಅಲಿಯಾಸ್ ಚಡ್ಡಿ ಕಿರಣ್ ಕಾಲಿಗೆ ಪೊಲೀಸರು ಇಂದು ಮುಂಜಾನೆ ಗುಂಡು ಹಾರಿಸಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್ ಠಾಣೆಯ ರೌಡಿಶೀಟರ್ ಆಗಿದ್ದ ಕಿರಣ್ ವ್ಯಕ್ತಿಯೋರ್ವನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದ. ಆತನನ್ನು ಹಿಡಿಯಲು ಹೋದ ಪೊಲೀಸರು ಆತನ ಕಾಲಿಗೆ ಇಂದು ಗುಂಡು ಹಾರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಗ್ಗೆರೆ ಬಳಿ ಆರೋಪಿ ಕಿರಣ್ ಇರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಇಂದು ಮುಂಜಾನೆ ಆರೋಪಿಯನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಕಿರಣ್ ಹಲ್ಲೆಗೆ ಯತ್ನ ಮಾಡಿದ್ದ. ಆತ್ಮರಕ್ಷಣೆಗಾಗಿ  ಇನ್​ಸ್ಪೆಕ್ಟರ್​ ವೆಂಕಟೇಗೌಡ ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಕಿರಣ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ 2019ರಲ್ಲಿ ಪೊಲೀಸರ ಮೇಲೆ ಒಮ್ಮೆ ಚಡ್ಡಿ ಕಿರಣ್ ಮಚ್ಚು ಬೀಸಿದ್ದ. ಹೊಯ್ಸಳದಲ್ಲಿ ರೌಂಡ್ಸ್ ನಲ್ಲಿ ಇದ್ದ ಪೊಲೀಸರು ಚಡ್ಡಿ ಕಿರಣ್​ನನ್ನು ಲಾಕ್ ಮಾಡಿದ್ದರು. ಈ ವೇಳೆ ಹೊಯ್ಸಳ ವಾಹನ ಅಡ್ಡಗಟ್ಟಿದ್ದ ಕಿರಣ್ ಗ್ಯಾಂಗ್ ಬಳಿಕ ಹೊಯ್ಸಳ ವಾಹನವನ್ನು ಜಖಂ ಮಾಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು.

ಐದಾರು ಜನರ ಗ್ಯಾಂಗ್ ಪೊಲೀಸರ ಮೇಲೆ ಹಲ್ಲೆ ಮಾಡಿ, ಕಿರಣ್​ನನ್ನು ಬಿಡಿಸಿಕೊಂಡು ಹೋಗಿದ್ದರು. ನಡುರಸ್ತೆಯಲ್ಲಿ ಡ್ಯಾಗರ್ ಹಿಡಿದು ನಿಂತಿದ್ದ ಚಡ್ಡಿ ಕಿರಣ್ ಹಾಗೂ ಆತನ ಸಹಚರರು ಆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ಸಹ ಮಾಡಿದ್ದರು.
Published by: Sushma Chakre
First published: March 7, 2021, 9:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories