HOME » NEWS » State » BANGALORE CRIME BENGALURU POLICE SHOOTOUT ON ROWDY IN BANGALORE TODAY MORNING SCT

Bangalore Crime: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು

ದಿನೇಶ್​ 10ಕ್ಕೂ ಹೆಚ್ಚು ದರೋಡೆ ಪ್ರಕರಣದಲ್ಲಿ ಮೋಸ್ಟ್ ವಾಂಟೆಟ್ ದರೋಡೆಕೋರನಾಗಿದ್ದ. ಇಂದು ಬೆಳಗ್ಗೆ ಆರೋಪಿ ದಿನೇಶ್ ಸಂಪಿಗೆಹಳ್ಳಿ ಬಳಿ ಇರುವ ಮಾಹಿತಿ ಪಡೆದು ತೆರಳಿದ್ದ ಪೊಲೀಸರ ಮೇಲೆ ಆತ ಹಲ್ಲೆಗೆ ಯತ್ನಿಸಿದ್ದ.

news18-kannada
Updated:November 26, 2020, 11:10 AM IST
Bangalore Crime: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು
ಶೂಟೌಟ್ ನಡೆದ ಜಾಗವನ್ನು ಪರಿಶೀಲಿಸುತ್ತಿರುವ ಪೊಲೀಸರು
  • Share this:
ಬೆಂಗಳೂರು (ನ. 26): ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಮತ್ತೆ ಪೊಲೀಸ್ ಗುಂಡಿನ ಸದ್ದು ಕೇಳಿಸಿದೆ. ಡಕಾಯಿತಿ ಮಾಡುತ್ತಿದ್ದವನ ಬಲಗಾಲಿಗೆ ಬಾಗಲೂರು ಪೊಲೀಸ್ ಇನ್​ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೂರ್ಯ ಕಾಂಕ್ರೀಟ್ ಬಳಿ ಇಂದು ಮುಂಜಾನೆ 5 ಗಂಟೆಗೆ ಈ ಘಟನೆ ನಡೆದಿದೆ. ಡಕಾಯಿತಿ ಮಾಡುತ್ತಿದ್ದ ಆರೋಪಿ ದಿನೇಶ್​ ಅಲಿಯಾಸ್ ದಿನಾ ಎಂಬಾತನನ್ನು ಬಂಧಿಸಲು ಹೋದಾಗ ಆತ ಪೊಲಿಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗೆ ಇನ್​ಸ್ಪೆಕ್ಟರ್​ ಶೂಟೌಟ್ ನಡೆಸಿದ್ದಾರೆ.

ಗಾಯಾಳು ಆರೋಪಿ ದಿನೇಶ್​ಗೆ ಯಲಹಂಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿನೇಶ್​ ಬೆಂಗಳೂರು ಈಶಾನ್ಯ ವಿಭಾಗದ ಮೋಸ್ಟ್ ವಾಂಟೆಟ್ ದರೋಡೆಕೋರನಾಗಿದ್ದ. 10ಕ್ಕೂ ಹೆಚ್ಚು ದರೋಡೆ ಪ್ರಕರಣದಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದ. ಇಂದು ಬೆಳಗ್ಗೆ ಆರೋಪಿ ದಿನೇಶ್ ಸಂಪಿಗೆಹಳ್ಳಿ ಬಳಿ ಇರುವ ಮಾಹಿತಿ ಪಡೆದು ತೆರಳಿದ್ದ ಪೊಲೀಸರ ಮೇಲೆ ಆತ ಹಲ್ಲೆಗೆ ಯತ್ನಿಸಿದ್ದ. ಆತನನ್ನು ಬಂಧಿಸಲು ಬಾಗಲೂರು ಇನ್​ಸ್ಪೆಕ್ಟರ್ ಪ್ರಶಾಂತ್, ಮಹಿಳಾ ಪಿಎಸ್​ಐ ವಿದ್ಯಾ ಸ್ಥಳಕ್ಕೆ ತೆರಳಿದ್ದರು.

Bengaluru Police Shootout on rowdy in Bangalore Today Morning

ಬಂಧನದ ವೇಳೆ ಮಹಿಳಾ ಪಿಎಸ್​ಐ ಹಾಗೂ ಕಾನ್ಸ್‌ಟೇಬಲ್ ಮೇಲೆ ದಿನೇಶ್ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಬಾಗಲೂರು ಇನ್ಸ್‌ಪೆಕ್ಟರ್ ಪ್ರಶಾಂತ್ ಆರೋಪಿ ದಿನೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ಬಾಗಲೂರು‌ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Weather: ನಿವಾರ್ ಚಂಡಮಾರುತದ ಎಫೆಕ್ಟ್​; ಕರ್ನಾಟಕದ 7 ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಣೆ

Bengaluru Police Shootout on rowdy in Bangalore Today Morning

ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ದಿನೇಶ್ ಹಾಗೂ ಗಾಯಾಳು ಮಹಿಳಾ ಸಬ್ ಇನ್ಸ್‌ಪೆಕ್ಟರ್, ಕಾನ್​ಸ್ಟೇಬಲ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ದಿನೇಶ್ ಇತ್ತೀಚೆಗೆ ಯಲಹಂಕ ಠಾಣೆ ವ್ಯಾಪ್ತಿಯ ಮಾರ್ವಾಡಿಗೆ ಹಪ್ತಾ ನೀಡದಿದ್ದಕ್ಕೆ ಚಾಕು ಹಾಕಿದ್ದ. ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ಚೆನ್ನಕೇಶವ್ ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಆ ಪ್ರಕರಣದಲ್ಲಿ 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಆ ಕೊಲೆ ಪ್ರಕರಣದ ಆರೋಪಿಗಳ ಜಾಮೀನಿಗಾಗಿ ಹಣಕ್ಕೆ ದಿನೇಶ್ ಹಪ್ತಾ ಕೇಳಿದ್ದ. ಜೈಲಿನಲ್ಲಿ ಇರುವ ಆರೋಪಿಗಳ ಜಾಮೀನಿಗಾಗಿ ದಿನೇಶ್ ಹಪ್ತಾ ಕೇಳಿದ್ದ. ನವೆಂಬರ್ 24 ರಂದು ಜೇಮ್ಸ್ ಎಂಬುವರ ಬಳಿ 3 ಲಕ್ಷ ದರೋಡೆ ಮಾಡಿದ ದಿನೇಶ್ ಗ್ಯಾಂಗ್​ಗಾಗಿ ಪೊಲೀಸರು ಹುಡುಕುತ್ತಿದ್ದರು.
Published by: Sushma Chakre
First published: November 26, 2020, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading