HOME » NEWS » State » BANGALORE CRIME BENGALURU POLICE FIRING ON ROWDY FOR ATTEMPT TO ATTACK IN TODAY MORNING SCT

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ಹಲ್ಲೆಗೆ ಯತ್ನಿಸಿದ ರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟು

Bangalore Crime: ಡಕಾಯಿತಿ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ಇಂದು ಮುಂಜಾನೆ ತೆರಳಿದ್ದರು. ತಿಪ್ಪೇನಹಳ್ಳಿಯ ಬಳಿ ಹೆಡ್ ಕಾನ್​ಸ್ಟೇಬಲ್ ರಂಗಸ್ವಾಮಿ ಮೇಲೆ ಆರೋಪಿ ಪ್ರವೀಣ್ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ. ಆಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

news18-kannada
Updated:January 19, 2021, 8:10 AM IST
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ಹಲ್ಲೆಗೆ ಯತ್ನಿಸಿದ ರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟು
ಗುಂಡೇಟಿನಿಂದ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಪ್ರವೀಣ್
  • Share this:
ಬೆಂಗಳೂರು (ಜ. 19): ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ರೌಡಿಶೀಟರ್ ಜೊತೆ ಗುರುತಿಸಿಕೊಂಡಿದ್ದ ಆರೋಪಿಯೊಬ್ಬನ ಮೇಲೆ ಕೊಲೆ ಪ್ರಯತ್ನದ ಆರೋಪವಿತ್ತು. ಆತನನ್ನು ಬಂಧಿಸಲು ಹೋದಾಗ ಇಂದು ಮುಂಜಾನೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ.  ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಕೊಲೆಗೆ ಸಂಚು ರೂಪಿಸಿದ ಪ್ರಕರಣದ ಆರೋಪಿ 22 ವರ್ಷದ ಪ್ರವೀಣ್ ಕಾಲಿಗೆ ಪೀಣ್ಯ ಪೊಲೀಸ್ ಠಾಣೆ ಸಬ್​ ಇನ್​ಸ್ಪೆಕ್ಟರ್ ಮಾಯಣ್ಣ ಬಿರಾಣೆ ಗುಂಡು ಹಾರಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಿಪ್ಪೇನಹಳ್ಳಿ ಬಳಿ ಈ ಘಟನೆ ನಡೆದಿದೆ. ಡಕಾಯಿತಿ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಇಂದು ಮುಂಜಾನೆ ತೆರಳಿದ್ದರು. ತಿಪ್ಪೇನಹಳ್ಳಿಯ ಬಳಿ ಆರೋಪಿಯಿದ್ದು, ಆತನನ್ನು ಬಂಧಿಸಲು ತೆರಳಿದಾಗ ಹೆಡ್ ಕಾನ್​ಸ್ಟೇಬಲ್ ರಂಗಸ್ವಾಮಿ ಮೇಲೆ ಆರೋಪಿ ಪ್ರವೀಣ್ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ.

ಈ ವೇಳೆ ಆತ್ಮರಕ್ಷಣೆಗೆ ಆರೋಪಿ ಪ್ರವೀಣ್ ಕಾಲಿಗೆ ಗುಂಡು ಹಾರಿಸಿದ ಸಬ್​ ಇನ್​ಸ್ಪೆಕ್ಟರ್ ಆತನನ್ನು ಬಂಧಿಸಿದ್ದಾರೆ. ರಾಜಗೋಪಾಲನಗರ, ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ವಿರುದ್ಧ ಹಲ್ಲೆ, ಡಕಾಯಿತಿ ಕೇಸ್​ಗಳು ದಾಖಲಾಗಿವೆ. ರೌಡಿಶೀಟರ್ ಅನಿಲ್ ಜೊತೆ ಗುರುತಿಸಿಕೊಂಡಿದ್ದ ಆರೋಪಿ ಪ್ರವೀಣ್ ಇದೀಗ ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಗೋ ಹತ್ಯೆ ಮಾಡಿದ್ರೆ 3-6 ವರ್ಷ ಜೈಲು ಶಿಕ್ಷೆ; 50 ಸಾವಿರದಿಂದ 5 ಲಕ್ಷದವರೆಗೆ ದಂಡ; ಸಚಿವ ಪ್ರಭು ಚೌಹಾಣ್

ಅನಿಲ್ ಹಾಗೂ ಮತ್ತೋರ್ವ ರೌಡಿಶೀಟರ್ ಆಂಧ್ರಹಳ್ಳಿ‌ ಅಭಿ ನಡುವೆ ವೈಮನಸ್ಸಿತ್ತು. ಹೀಗಾಗಿ, ಅಭಿ ಹತ್ಯೆಗೆ ಸಂಚು ರೂಪಿಸಿದ್ದ ಅನಿಲ್​ನ ಗ್ಯಾಂಗ್​ ಮೇಲೆ ಜನವರಿ 16ರಂದು ತಿಪ್ಪೇನಹಳ್ಳಿ‌ ಬಳಿ ಪೀಣ್ಯ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಮಾರಕಾಸ್ತ್ರಗಳು ಹಾಗೂ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈ ಘಟನೆಯಲ್ಲಿ 6 ಜನ ಆರೋಪಿಗಳು ಪರಾರಿಯಾಗಿದ್ದರು.

ಬಳಿಕ, ಜನವರಿ 17ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇಂದು ಬೆಳಿಗ್ಗೆ ಆರೋಪಿ ಪ್ರವೀಣನ ಬಂಧನಕ್ಕೆ ತೆರಳಿದ್ದ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.
Published by: Sushma Chakre
First published: January 19, 2021, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories