Bangalore Crime: ಬೆಂಗಳೂರಿನಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿ ಕಾಲಿಗೆ ಗುಂಡೇಟು

4 ವರ್ಷದ ಮಗುವನ್ನು ನಿನ್ನೆ ಅಪಹರಣ ಮಾಡಿ, ಅತ್ಯಾಚಾರ ಎಸಗಿದ್ದ ಆರೋಪಿಯ ಕಾಲಿಗೆ ಇಂದು ಶ್ರೀರಾಂಪುರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಸುನೀಲ್ ನಾಯ್ಕ್ ಗುಂಡು ಹಾರಿಸಿದ್ದಾರೆ.

news18-kannada
Updated:October 12, 2020, 8:36 AM IST
Bangalore Crime: ಬೆಂಗಳೂರಿನಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿ ಕಾಲಿಗೆ ಗುಂಡೇಟು
4 ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ಆರೋಪಿ ದಿನೇಶ್
  • Share this:
 ಬೆಂಗಳೂರು (ಅ. 12): ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳ್ಳಗ್ಗೆ ಮತ್ತೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. 4 ವರ್ಷದ ಮಗುವನ್ನು ನಿನ್ನೆ ಅಪಹರಣ ಮಾಡಿ, ಅತ್ಯಾಚಾರ ಎಸಗಿದ್ದ ಆರೋಪಿಯ ಕಾಲಿಗೆ ಇಂದು ಶ್ರೀರಾಂಪುರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಸುನೀಲ್ ನಾಯ್ಕ್ ಗುಂಡು ಹಾರಿಸಿದ್ದಾರೆ. ಆರೋಪಿ ದಿನೇಶ್ ಎಂಬಾತನ ಕಾಲಿಗೆ ಗುಂಡೇಟು ಬಿದ್ದು, ಆಸ್ಪತ್ರೆ ಸೇರಿದ್ದಾನೆ.

ವಾಟಾಳ್ ನಾಗರಾಜ್ ರಸ್ತೆಯಲ್ಲಿ ಇನ್​ಸ್ಪೆಕ್ಟರ್ ಸುನೀಲ್ ನಾಯ್ಕ್ ಅವರಿಂದ ದಿನೇಶ್​ಗೆ ಗುಂಡೇಟು ತಗುಲಿದೆ. ದಿನೇಶ್ ಎಂಬಾತ ನಿನ್ನೆ ನಾಲ್ಕು ವರ್ಷದ ಹೆಣ್ಣು ಮಗುವನ್ನು ಅಪಹರಣ ಮಾಡಿದ್ದ. ಮಜೆಸ್ಟಿಕ್​ನಿಂದ ನಿನ್ನೆ ಮಧ್ಯಾಹ್ನ ನಾಲ್ಕು ವರ್ಷದ ಮಗುವನ್ನು ಅಪಹರಣ ಮಾಡಿದ್ದ ದಿನೇಶ್ ನಂತರ ಮಗುವಿನ ಮೇಲೆ ಲೈಂಗಿಕ‌ ದೌರ್ಜನ್ಯವೆಸಗಿದ್ದ. ಅತ್ಯಾಚಾರಕ್ಕೊಳಗಾಗಿದ್ದ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಅತ್ಯಾಚಾರ ನಡೆಸಿದ್ದ ಆರೋಪಿ ಬಳಿಕ ಪರಾರಿಯಾಗಿದ್ದ. ಆತನಿಗಾಗಿ ನಿನ್ನೆ ಮಧ್ಯಾಹ್ನದಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

Bengaluru Police Firing on Accused for Kidnaping and Raping a Child.
ಇನ್​ಸ್ಪೆಕ್ಟರ್​ ಸುನೀಲ್ ನಾಯ್ಕ್


ಇದನ್ನೂ ಓದಿ: ರಾಣೆಬೆನ್ನೂರು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಪ್ರಿಯಕರನ ಜೊತೆ ಸೇರಿ ಹೆಂಡತಿಯಿಂದಲೇ ಗಂಡನ ಕಗ್ಗೊಲೆ

ಚೆನ್ನೈ ಮೂಲದ ದಿನೇಶ್​ ಆರ್​.ಆರ್​. ಕಲ್ಯಾಣ ಮಂಟಪದ ಬಳಿ ಇರುವುದರ ಬಗ್ಗೆ ಇಂದು ಮಾಹಿತಿ ಲಭ್ಯವಾಗಿತ್ತು. ಆ ಮಾಹಿತಿಯನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಆತ್ಮರಕ್ಷಣೆಗೆ ಆರೋಪಿಯ ಕಾಲಿಗೆ ಇನ್​ಸ್ಪೆಕ್ಟರ್​ ಸುನೀಲ್ ನಾಯ್ಕ್ ಗುಂಡು ಹಾರಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ದಿನೇಶ್​ ಕಾಲಿಗೆ ಗುಂಡೇಟು ತಗುಲಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Published by: Sushma Chakre
First published: October 12, 2020, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading