HOME » NEWS » State » BANGALORE CRIME BENGALURU POLICE FIRING AT BANGALORE PUTTENAHALLI DOUBLE MURDER ACCUSED SCT

Bangalore Crime: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು; ಪುಟ್ಟೇನಹಳ್ಳಿ ಡಬಲ್ ಮರ್ಡರ್ ಆರೋಪಿ ಕಾಲಿಗೆ ಗುಂಡು

Bengaluru Murder: ಏಪ್ರಿಲ್ 7ರಂದು ಜೆಪಿ ನಗರದ ಮನೆಯಲ್ಲಿ ಮಮತಾ ಬಸು ಮತ್ತು ದೇವ ಬ್ರಥಾ ಅವರ ಮೇಲೆ ಹಲ್ಲೆ ನಡೆಸಿದ್ದ ಮಂಜುನಾಥ್ ಅವರಿಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಆತನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

news18-kannada
Updated:April 14, 2021, 8:02 AM IST
Bangalore Crime: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು; ಪುಟ್ಟೇನಹಳ್ಳಿ ಡಬಲ್ ಮರ್ಡರ್ ಆರೋಪಿ ಕಾಲಿಗೆ ಗುಂಡು
ಡಬಲ್ ಮರ್ಡರ್ ಆರೋಪಿ ಮಂಜುನಾಥ್
  • Share this:
ಬೆಂಗಳೂರು (ಏ. 14): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಪುಟ್ಟೇನಹಳ್ಳಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿ ಕೊಲೆ ಅರೋಪಿಯಾಗಿದ್ದು, ಮನೆಯಲ್ಲಿದ್ದ ಹಣ ಮೊಬೈಲ್, ಚಿನ್ನಾಭರಣವನ್ನು ದೋಚುವ ಸಲುವಾಗಿ ಎರಡು ಕೊಲೆ ಮಾಡಿದ್ದ. ಆತನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

ಏಪ್ರಿಲ್ 7ರಂದು ಜೆಪಿ ನಗರದ 7ನೇ ಹಂತದಲ್ಲಿನ ಮನೆಯಲ್ಲಿ ಮಮತಾ ಬಸು ಮತ್ತು ದೇವ ಬ್ರಥಾ ಅವರ ಮೇಲೆ ಹಲ್ಲೆ ನಡೆಸಿದ್ದ ಮಂಜುನಾಥ್ ಅವರಿಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಬಂಧಿತ ಆರೋಪಿ ಮಂಜುನಾಥ್ ಮೇಲೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಕೇಸ್​ಗಳಿವೆ. ಆರೋಪಿ ಮಂಜುನಾಥ್​ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಇನ್​ಸ್ಪೆಕ್ಟರ್ ಕಿಶೋರ್ ಆತನ ಮೇಲೆ ಗುಂಡು ಹಾರಿಸಿ ಬಂಧನ ಮಾಡಿದ್ದಾರೆ.

ಇದನ್ನೂ ಓದಿ: 10 ನಗರಗಳಲ್ಲಿ ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಗೊಳಿಸಿ; ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಕಟ್ಟುನಿಟ್ಟಿನ ಸೂಚನೆ

ಇದೇ ಏಪ್ರಿಲ್ 7ರ ರಾತ್ರಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಬೆಂಗಳೂರು ಬೆಚ್ಚಿಬಿದ್ದಿತ್ತು. ಜೆಪಿ ನಗರದ ಸಂತೃಪ್ತಿ ನಗರದಲ್ಲಿ ಮಮತಾ ಬಸು(75) ಹಾಗೂ ದೇವಬೃಥ(45) ಅವರನ್ನು ಹತ್ಯೆಗೈದಿದ್ದ ಆರೋಪಿ ಮಂಜುನಾಥ್ ಬಳಿಕ ತಲೆಮರೆಸಿಕೊಂಡಿದ್ದ. ಬೆಂಗಳೂರಿನಲ್ಲಿ ಕಳೆದ 20 ವರ್ಷದಿಂದ ನೆಲೆಸಿದ್ದ ಮೃತ ಮಮತಾ ಬಸು ಹಾಗೂ ಅವರ ಮಗ ದೀಪ್ ದೇವ್ ಬಸು ಬೇರೆ ಮನೆಯಲ್ಲಿ ವಾಸವಾಗಿದ್ದರು. ಮೃತ ದೇವಬೃಥ ಹಾಗೂ ಮಮತಾ ಬಸು ಅವರ ಮಗ ದೀಪ್ ದೇವ್ ಬಸು ಇಬ್ಬರೂ ಸ್ನೇಹಿತರಾಗಿದ್ದರು.

ದೀಪ್ ದೇವ್ ಬೇರೆ ಮನೆಯಲ್ಲಿ ವಾಸವಾಗಿದ್ದರಿಂದ ಸ್ನೇಹಿತನ ತಾಯಿ ಮಮತಾರ ಮನೆಯಲ್ಲಿ ವಾಸವಾಗಿದ್ದ ದೇವ್ ವಾಸವಾಗಿದ್ದರು. ಘಟನೆ ನಡೆದ ದಿನ ರಾತ್ರಿ 8.30ರವರೆಗೂ ಇದೇ ಮನೆಯಲ್ಲಿದ್ದ ದೀಪ್ ದೇವ್ ಬಸು ಊಟ ಮುಗಿಸಿ ನಂತರ ತನ್ನ ಮನೆಗೆ ತೆರಳಿದ್ದ. ಅದೇ ದಿನ ತಡರಾತ್ರಿ 1.30ರ ಆಸುಪಾಸಿನಲ್ಲಿ ಡಬಲ್ ಮರ್ಡರ್ ನಡೆದಿದೆ. ಮನೆಯ ಮೊದಲನೆ ಮಹಡಿಯಲ್ಲಿ ಮಮತಾ ಬಸುರವರ ಶವ ದೊರೆತಿತ್ತು. ಕೆಳಗೆ ದೇವ್ ಶವ ದೊರೆತಿತ್ತು. ಆರೋಪಿ ಮಂಜುನಾಥ್ ಚಾಕುವಿನಿಂದ ಇರಿದು ಇಬ್ಬರನ್ನೂ ಕೊಲೆ ಮಾಡಿದ್ದ.

ಏಪ್ರಿಲ್ 8ರ ಬೆಳಿಗ್ಗೆ ಅಂದರೆ ಮಾರನೇ ದಿನ ಮನೆ ಕೆಲಸದಾಕೆ ಬಂದಾಗ ಕೊಲೆ ಕೇಸ್ ಬೆಳಕಿಗೆ ಬಂದಿತ್ತು. ಕೊಲೆಗೈದ ಬಳಿಕ ಮನೆಯಲ್ಲಿದ್ದ ಸಿಸಿ ಟಿವಿಯ ಡಿವಿಆರ್ ಕದ್ದೊಯ್ದಿದ್ದ ಆರೋಪಿ ಮಂಜುನಾಥ್ ಕೃತ್ಯದ ಬಳಿಕ ಬೆಲೆಬಾಳುವ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ ಐಟಂಗಳನ್ನು ಹೊತ್ತೊಯ್ದಿದ್ದ. ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Published by: Sushma Chakre
First published: April 14, 2021, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories