ವಿಚಾರಣೆ ಹೆಸರಲ್ಲಿ ಬೆಂಗಳೂರಿನ ಪೊಲೀಸರಿಂದ ಮಹಿಳೆ ಮೇಲೆ ನಡೆಯಿತು ಮಾರಣಾಂತಿಕ ಹಲ್ಲೆ

ಕ್ರೈಮ್ ಸ್ಟಾಫ್ ಅರ್ಜುನ್ ಕಾಂಬ್ಳೆ, ಶ್ರೀನಿವಾಸ್, ಮಹಿಳಾ ಪೊಲೀಸ್ ಪೇದೆಗಳಾದ ಹರ್ಷಿತಾ ಮತ್ತು ರಕ್ಷಿತಾ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ ಎಂದು ಜಭೀನ್ ತಾಜ್ ಆರೋಪಿಸಿದ್ದಾರೆ.

Rajesh Duggumane | news18-kannada
Updated:November 10, 2019, 6:08 PM IST
ವಿಚಾರಣೆ ಹೆಸರಲ್ಲಿ ಬೆಂಗಳೂರಿನ ಪೊಲೀಸರಿಂದ ಮಹಿಳೆ ಮೇಲೆ ನಡೆಯಿತು ಮಾರಣಾಂತಿಕ ಹಲ್ಲೆ
ಹಲ್ಲೆಗೊಳಗಾದ ಮಹಿಳೆ
  • Share this:
ಬೆಂಗಳೂರು (ನ.10): ವಿಚಾರಣೆ ಹೆಸರಲ್ಲಿ‌ ಬೆಂಗಳೂರಿನ ಪೊಲೀಸರು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಳ್ಳತನ‌ ನಡೆಸಿದ್ದು ಮಗನಾದರೂ, ಶಿಕ್ಷೆ ಅನುಭವಿಸಿದ್ದು ಕಳ್ಳನ ತಾಯಿ ಎನ್ನುವುದು ಬೇಸರದ ಸಂಗತಿ.

ಇರ್ಫಾನ್ ಎಂಬಾತ ಕಳ್ಳತನ ನಡೆಸಿದ್ದ. ಕಳ್ಳತನದ ರಿಕವರಿ ವಿಚಾರವಾಗಿ ಆತನ ತಾಯಿ ಜಭೀನ್ ತಾಜ್ ಅವರನ್ನು (56) ಪೊಲೀಸರು ಕೆ.ಪಿ.ಅಗ್ರಹಾರ ಠಾಣೆಗೆ ಕರೆತಂದಿದ್ದರು. ಈ ವೇಳೆ ಸಬ್ ಇನ್ಸ್​​​ಪೆಕ್ಟರ್, ಕ್ರೈಂ ಸ್ಟಾಫ್ ಮತ್ತು ಮಹಿಳಾ ಪೊಲೀಸರಿಂದ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ,

ಕ್ರೈಮ್ ಸ್ಟಾಫ್ ಅರ್ಜುನ್ ಕಾಂಬ್ಳೆ, ಶ್ರೀನಿವಾಸ್, ಮಹಿಳಾ ಪೊಲೀಸ್ ಪೇದೆಗಳಾದ ಹರ್ಷಿತಾ ಮತ್ತು ರಕ್ಷಿತಾ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ ಎಂದು ಜಭೀನ್ ತಾಜ್ ಆರೋಪಿಸಿದ್ದಾರೆ. “ಯಾವುದೆ ಪ್ರಕರಣ ದಾಖಲಿಸದೆ ಹತ್ತಾರು ದಿನಗಳ ಕಾಲ ಹಲ್ಲೆ ನಡೆಸಿದ್ದಾರೆ. ನಡೆಯಲಾಗದ ರೀತಿ ಹಲ್ಲೆ ಮಾಡಿದ್ದಾರೆ,”ಎನ್ನುವುದು ಅವರ ಆರೋಪ. ಈ ಬಗ್ಗೆ ನ್ಯಾಯ ಒದಗಿಸುವಂತೆ ಪೊಲೀಸರ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ಅವರು ದೂರು ನೀಡಿದ್ದಾರೆ.

First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ