HOME » NEWS » State » BANGALORE CRIME BENGALURU NELAMANGALA ROBBERS LOOTS DOG FOOD IN HIGHWAY VEHICLE CRIME NEWS SCT ANLM

Bangalore Crime: ನೆಲಮಂಗಲದ ಬಳಿ ಹೆದ್ದಾರಿಯಲ್ಲಿ ನಾಯಿಯ ಆಹಾರ ಕದ್ದವರು ಅರೆಸ್ಟ್; ಕಳ್ಳರ ಸುಳಿವು ನೀಡಿತು ಮೊಬೈಲ್

Bengaluru Crime News: ನಗದು, ಮೊಬೈಲ್ ಸೇರಿದಂತೆ ಶ್ವಾನದ ಆಹಾರ ಕದ್ದು ಚಾಲಕ ನಂದೀಶ್ ಸ್ಥಳದಿಂದ ತಪ್ಪಿಸಿಕೊಂಡಿದ್ದ. ಘಟನೆ ನಡೆದ ಕೆಲವೇ ಸಮಯದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

news18-kannada
Updated:April 30, 2021, 8:17 AM IST
Bangalore Crime: ನೆಲಮಂಗಲದ ಬಳಿ ಹೆದ್ದಾರಿಯಲ್ಲಿ ನಾಯಿಯ ಆಹಾರ ಕದ್ದವರು ಅರೆಸ್ಟ್; ಕಳ್ಳರ ಸುಳಿವು ನೀಡಿತು ಮೊಬೈಲ್
ಕಳ್ಳರಿಂದ ವಶಪಡಿಸಿಕೊಂಡ ನಾಯಿಯ ಆಹಾರ
  • Share this:
ನೆಲಮಂಗಲ (ಏ. 30): ಸರಕು ಸಾಗಣೆ ಮಾಡುತ್ತಿದ್ದ ವಾಹನದ ಚಾಲಕನಿಗೆ ಚಾಕು ತೋರಿಸಿ ಶ್ವಾನದ ಆಹಾರ ಸೇರಿದಂತೆ 10 ಸಾವಿರ ನಗದು ಕದ್ದು ಪರಾರಿಯಾಗಿದ್ದ 5 ಮಂದಿಯ ಆರೋಪಿಗಳ ಪೈಕಿ 3 ಮಂದಿಯನ್ನು ಘಟನೆ ನಡೆದ ಕೆಲವೇ ಸಮಯದಲ್ಲಿ ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಅಲೂರು ಗ್ರಾಮದ ಜಯಂತ್ (23), ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ನಿವಾಸಿ ಗಿರೀಶ್ (18), ಬೆಂಗಳೂರಿನ ನಂದಿನಿ ಲೇಔಟ್ ಬಳಿಯ ಸಾಕಮ್ಮ ಬಡಾವಣೆ ನಿವಾಸಿ ಗುರು (22) ಬಂಧಿತ ಆರೋಪಿಗಳು.

ಏಪ್ರಿಲ್ 28ರ ಬುಧವಾರ ರಾತ್ರಿ ತಾಲೂಕಿನ ಹ್ಯಾಡಾಳ್ ಗ್ರಾಮದ ಖಾಸಗಿ ಗೋದಾಮಿನೊಂದರಲ್ಲಿ ಶ್ವಾನಕ್ಕೆ ಬಳಸುವ ಆಹಾರವನ್ನು ತೆಗೆದುಕೊಂಡು ಶಿವಮೊಗ್ಗಕ್ಕೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ಧಾರಿ 48ರ ಬೆಂಗಳೂರು ತುಮಕೂರು ಮಾರ್ಗದ ಟಿ. ಬೇಗೂರು ಗ್ರಾಮದ ಬಳಿ ಸಮಾರು 8 ಗಂಟೆ ವೇಳೆಯಲ್ಲಿ ಸರಕು-ಸಾಗಣೆ ಮಾಡುತ್ತಿದ್ದ ಟಾಟಾ ಏಸ್ ವಾಹನ ಟೈರ್ ಪಂಚರ್ ಆಗಿದ್ದು ಚಾಲಕ ನಂದೀಶ್ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಟೈರ್ ಬದಲಿಸುತ್ತಿದ್ದ. ರಾತ್ರಿ ಸುಮಾರು 8:30ರ ವೇಳೆಯಲ್ಲಿ ನೆಲಮಂಗಲ ಕಡೆಯಿಂದ 2 ದ್ವಿಚಕ್ರದಲ್ಲಿ ಬಂದ 5 ಮಂದಿ ದುಷ್ಕರ್ಮಿಗಳು ಚಾಲಕ ನಂದೀಶ್‌ಗೆ ಚಾಕು ತೋರಿಸಿ ಹೆದರಿಸಿ ಹಲ್ಲೆ ಮಾಡಿ ಆತನ ಬಳಿ ಇದ್ದ 10 ಸಾವಿರ ರೂ. ನಗದು, ಶ್ವಾನದ ಆಹಾರ ಸೇರಿದಂತೆ ಮೊಬೈಲ್ ಕದ್ದು ಕೊಲೆ ಮಾಡಲು ಯತ್ನಿಸಿದ್ದರಂತೆ.

ಇದನ್ನೂ ಓದಿ: ಅಬ್ಬಾ ಮಹಾತಾಯಿ.. ಭಾರೀ ತೂಕದ ‘ಗಜಲಕ್ಷ್ಮಿ’ಗೆ ಜನ್ಮ ನೀಡಿ ಸೈ ಎನಿಸಿಕೊಂಡ ಗಟ್ಟಿಗಿತ್ತಿ..!

ಚಾಲಕ ನಂದೀಶ್ ಸ್ಥಳದಿಂದ ತಪ್ಪಿಸಿಕೊಂಡಿದ್ದ. ಬುಧವಾರ ರಾತ್ರಿ 10 ಗಂಟೆ ವೇಳೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ಹೆಚ್.ಟಿ. ವಸಂತ್ ಹಾಗೂ ವೃತ್ತ ನಿರೀಕ್ಷಕ ಎಂ.ಆರ್. ಹರೀಶ್ ನೇತೃತ್ವದ  ಪೊಲೀಸರ ತಂಡ ಬುಧವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ.

ಸುಳಿವು ನೀಡಿದ ಮೊಬೈಲ್: ಚಾಲಕ ನಂದೀಶ್ ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಮೊಬೈಲ್ ನೆಟ್ವರ್ಕ್ ಸಹಾಯದಿಂದ ಇಬ್ಬರು ಆರೋಪಿಗಳನ್ನ ಬೆಂಗಳೂರಿನ ಚಕ್ಕಸಂದ್ರ ಬಳಿ ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆ ವೇಳೆಯಲ್ಲಿ ಬಂದಿಸಿದ್ದು ಮತ್ತೋರ್ವನನ್ನ ನಂದಿನಿ ಬಡಾವಣೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಬಂಧಿಸಲಾಗದೆ.

17ಕ್ಕೂ ಹೆಚ್ಚು ಠಾಣೆಗಳಲ್ಲಿ ಪ್ರಕರಣ: ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಗುರು ಎಂಬಾತನ ಮೇಲೆ ಸುಮಾರು ನಾಲ್ಕೈದು ಪ್ರಕರಣಗಳು ದಾಖಲಾಗಿದ್ದು ಈತ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಜಯಂತ್ ಎಂಬಾತ ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಸುಮಾರು 17 ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
Youtube Video

ಪೊಲೀಸರ ಭೇಟಿ: ನಗದು, ಮೊಬೈಲ್ ಸೇರಿದಂತೆ ಶ್ವಾನದ ಆಹಾರ ಕದ್ದು ಪರಾರಿಯಾಗಿದ್ದ ಸ್ಥಳಕ್ಕೆ ಡಿವೈಎಸ್ಪಿ ಜಗದೀಶ್, ವೃತ್ತ ನಿರೀಕ್ಷಕ ಎಂ.ಆರ್. ಹರೀಶ್ , ಎಸ್ಐ ಹೆಚ್.ಟಿ. ವಸಂತ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಂಧಿತರಿಂದ ಸುಮಾರು 20 ಸಾವಿರ ಮೌಲ್ಯದ ಶ್ವಾನದ ಆಹಾರ, 10 ಸಾವಿರ ನಗದು, 2 ಮೊಬೈಲ್ ಸೇರಿದಂತೆ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಇಬ್ಬರು ಕಳ್ಳರನ್ನು ಬಂಧಿಸಲು ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ಹೆಚ್.ಟಿ. ವಸಂತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.
Published by: Sushma Chakre
First published: April 30, 2021, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories