ಗಂಡನ ಬರ್ತಡೇ​ ಪಾರ್ಟಿಯಲ್ಲಿ ಹೆಂಡತಿಗೆ ಕಾದಿತ್ತು ಶಾಕ್; ಕೈ, ಬಾಯಿ ಕಟ್ಟಿ ಅತ್ಯಾಚಾರ ನಡೆಸಿದ ಬೆಂಗಳೂರು ಯುವಕನ ಬಂಧನ

Bengaluru Crime News: ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮಹಿಳೆ ತನ್ನ ಗಂಡನ ಹುಟ್ಟುಹಬ್ಬದ ಪಾರ್ಟಿಗೆ ಆತನ ಗೆಳೆಯರನ್ನು ಆಹ್ವಾನಿಸಿದ್ದಳು. ಆಕೆಯ ಆಹ್ವಾನದ ಮೇರೆಗೆ ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆ ಬಂದ ನೀಲಬ್ ನಯನ್ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

news18-kannada
Updated:November 27, 2019, 5:49 PM IST
ಗಂಡನ ಬರ್ತಡೇ​ ಪಾರ್ಟಿಯಲ್ಲಿ ಹೆಂಡತಿಗೆ ಕಾದಿತ್ತು ಶಾಕ್; ಕೈ, ಬಾಯಿ ಕಟ್ಟಿ ಅತ್ಯಾಚಾರ ನಡೆಸಿದ ಬೆಂಗಳೂರು ಯುವಕನ ಬಂಧನ
ನೀಲಬ್ ನಯನ್
  • Share this:
ಬೆಂಗಳೂರು (ನ. 27): ತನ್ನ ಗಂಡನ ಹುಟ್ಟುಹಬ್ಬಕ್ಕೆ ಸರ್​ಪ್ರೈಸ್​ ಕೊಡಬೇಕೆಂದು ಆತನ ಗೆಳೆಯರನ್ನು ಆಹ್ವಾನಿಸಿದ್ದ ಹೆಂಡತಿ ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್​ನಲ್ಲಿ ರಾತ್ರಿ ಪಾರ್ಟಿ ಆಯೋಜಿಸಿದ್ದಳು. ಆದರೆ, ಆ ರಾತ್ರಿ ಆಕೆಯ ಪಾಲಿಗೆ ಕರಾಳ ರಾತ್ರಿಯಾಗಲಿದೆ ಎಂಬ ಊಹೆಯೂ ಆಕೆಗೆ ಇರಲಿಲ್ಲ.

ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮಹಿಳೆ ತನ್ನ ಗಂಡನ ಹುಟ್ಟುಹಬ್ಬದ ಪಾರ್ಟಿಗೆ ಆತನ ಗೆಳೆಯರನ್ನು ಆಹ್ವಾನಿಸಿದ್ದಳು. ಆಕೆಯ ಆಹ್ವಾನದ ಮೇರೆಗೆ ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆ ಬಂದ ನೀಲಬ್ ನಯನ್ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ ನಿವಾಸಿಯಾಗಿರುವ ನೀಲಬ್ ನಯನ್ ತನ್ನ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದಿದ್ದ.

ಕ್ರೀಡಾ ಕಾಂಪ್ಲೆಕ್ಸ್​ಲ್ಲಿ ವಿವಿಧ ಆಟಗಳನ್ನು ಆಡಿ ಎಲ್ಲರೂ ಸುಸ್ತಾಗಿದ್ದರು. ನಂತರ ಕೇಕ್ ಕತ್ತರಿಸಿ ನಾಲ್ವರು ಗೆಳೆಯರು ಕುಡಿದು ಪಾರ್ಟಿ ಮಾಡಿದ್ದರು. ಅಷ್ಟರಲ್ಲಿ ಬಾತ್​ರೂಂಗೆ ಹೋಗಲೆಂದು ಒಳಗೆ ಬಂದ ನೀಲಬ್ ಅಲ್ಲೇ ಪಕ್ಕದ ರೂಮಿನಲ್ಲಿ ಮಲಗಿದ್ದ ಸ್ನೇಹಿತ ಹೆಂಡತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಅನೈತಿಕ ಸಂಬಂಧದ ಶಂಕೆಯಿಂದ ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ಹೆಂಡತಿಯ ಕತ್ತು ಸೀಳಿ ನೇಣಿಗೆ ಶರಣಾದ ಗಂಡ

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ತ ಮಹಿಳೆ, ಪಾರ್ಟಿಯಲ್ಲಿ ಬಹಳ ಸುಸ್ತಾಗಿದ್ದರಿಂದ ನಾನು ರೂಮಿನಲ್ಲಿ ಮಲಗಿಕೊಂಡಿದ್ದೆ. ನನ್ನ ಗಂಡ ತನ್ನ ಗೆಳೆಯರೊಂದಿಗೆ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದರು. ರೂಮಿನಲ್ಲಿ ಸರಿಯಾಗಿ ಬೆಳಕಿರಲಿಲ್ಲ. ನಿದ್ರೆಗಣ್ಣಿನಲ್ಲಿದ್ದ ನನಗೆ ಯಾರೋ ಬಟ್ಟೆ ತೆಗೆದು ಮೈಮೇಲೆ ಬೀಳತೊಡಗಿದ್ದು ಅನುಭವಕ್ಕೆ ಬಂದಿತು. ತಕ್ಷಣ ನಾನು ಕಿರುಚಿಕೊಂಡೆ. ಆದರೆ, ಆತ ನನ್ನ ಬಾಯಿ ಮುಚ್ಚಿ, ಕೈಕಟ್ಟಿ ಅತ್ಯಾಚಾರ ನಡೆಸಿದ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ನಂತರ ಹೇಗೋ ಕೈ ಬಿಡಿಸಿಕೊಂಡು ಮಹಿಳೆ ತನ್ನ ಗಂಡನಿಗೆ ವಿಷಯ ತಿಳಿಸುವಷ್ಟರಲ್ಲಿ ನೀಲಬ್ ಪರಾರಿಯಾಗಿದ್ದ. ಮಹಿಳೆ ದೂರು ನೀಡಿದ ನಂತರ ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
First published: November 27, 2019, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading