HOME » NEWS » State » BANGALORE CRIME BENGALURU MAN LOST 1 LAKH RUPEES IN MATRIMONY WEBSITE FRAUD SCT

Bangalore Crime: ಮ್ಯಾಟ್ರಿಮೊನಿ ವಂಚನೆ; ವಧುವಿಗೆ ರಿಕ್ವೆಸ್ಟ್​ ಕಳಿಸಿ 1 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ವ್ಯಕ್ತಿ

Bengaluru Crime: ಮ್ಯಾಟ್ರಿಮೊನಿ ಸೈಟ್​ನಲ್ಲಿ ವಧುವಿಗಾಗಿ ರಿಕ್ವೆಸ್ಟ್ ಕಳುಹಿಸಿದ ವ್ಯಕ್ತಿ 1 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ. ಪೊಲೀಸರ ಸೋಗಿನಲ್ಲಿ ಕರೆ ಮಾಡಿ 1 ಲಕ್ಷ ರೂ. ಹಣ ಪೀಕಿದ್ದಾರೆ.

news18-kannada
Updated:February 27, 2021, 11:57 AM IST
Bangalore Crime: ಮ್ಯಾಟ್ರಿಮೊನಿ ವಂಚನೆ; ವಧುವಿಗೆ ರಿಕ್ವೆಸ್ಟ್​ ಕಳಿಸಿ 1 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ವ್ಯಕ್ತಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಫೆ. 27): ಆನ್​ಲೈನ್​ ಬಳಕೆಗೆ ಎಷ್ಟು ಸುಲಭವೋ ಅದರಲ್ಲಿ ವಂಚನೆಗೊಳಗಾಗುವುದು ಕೂಡ ಅಷ್ಟೇ ಸುಲಭ. ಅದರಲ್ಲೂ ಮದುವೆಯಾಗುವುದಾಗಿ ಆನ್​ಲೈನ್​ನಲ್ಲಿ ನಂಬಿಸಿ ಮೋಸ ಮಾಡುವ ಯುವತಿಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ವಧುವನ್ನು ಹುಡುಕಲು ಹೋದ ಬೆಂಗಳೂರಿನ ವ್ಯಕ್ತಿಯೊಬ್ಬರು 1 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಮ್ಯಾಟ್ರಿಮೊನಿ ಸೈಟ್​ನಲ್ಲಿ ವಧುವಿಗಾಗಿ ರಿಕ್ವೆಸ್ಟ್ ಕಳುಹಿಸಿದ ವ್ಯಕ್ತಿ 1 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ. ನೀವು ರಿಕ್ವೆಸ್ಟ್ ಕಳುಹಿಸಿದ ವಧು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಬ್ಲಾಕ್​ಮೇಲ್ ಮಾಡಿ ಹಣ ವಸೂಲಿ ಮಾಡಲಾಗಿದೆ. ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಹಣ ಪೀಕಿದ ಖದೀಮರ ಮಾತಿಗೆ ಹೆದರಿ ವ್ಯಕ್ತಿಯೊಬ್ಬರು 1 ಲಕ್ಷ ರೂ. ನೀಡಿದ್ದಾರೆ.

ಬೆಂಗಳೂರಿನ ದಕ್ಷಿಣ ಭಾಗದ ಸಿಇಎನ್ ಠಾಣೆಯಲ್ಲಿ ವ್ಯಕ್ತಿ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಶ್ರೀಕೃಷ್ಣ ನಗರದ 40 ವರ್ಷದ ವ್ಯಕ್ತಿ ಕಳೆದುಕೊಂಡವರು. ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ವಧು ಹುಡುಕುತ್ತಾ ರಿಕ್ವೆಸ್ಟ್ ಕಳುಹಿಸಿದ್ದ ಇವರು ಹಲವರಿಗೆ ರಿಕ್ವೆಸ್ಟ್ ಕಳುಹಿಸಿ ಬಯೋಡೆಟಾ ಕಳಿಸಿದ್ದರು.

ಅವರಿಗೆ ಇದೇ ಫೆಬ್ರವರಿ 17ರಂದು ಅಪರಿಚಿತರಿಂದ ಕರೆ ಬಂದಿತ್ತು. ನಾವು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕರೆ‌ ಮಾಡಿದ್ದ ಅಪರಿಚಿತರು ನೀವು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ರಿಕ್ವೆಸ್ಟ್ ಕಳಿಸಿದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನೀವು ನಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಪ್ರಕರಣ ಮುಚ್ಚಿಹಾಕುತ್ತೇವೆ ಎಂದು ಹೇಳಿದ್ದರು.

ಅದರಿಂದ ಹೆದರಿದ ವ್ಯಕ್ತಿ ಅಪರಿಚಿತರು ಸೂಚಿಸಿದ ಅಕೌಂಟ್​ಗೆ 1 ಲಕ್ಷ ರೂ. ಹಣ ಹಾಕಿದ್ದರು. ಹಂತ-ಹಂತವಾಗಿ 1 ಲಕ್ಷ ಹಣವನ್ನು ಅಕೌಂಟ್​ಗೆ ಜಮೆ ಮಾಡಿದ್ದರು. ಕೊನೆಗೆ ದೂರುದಾರನ ಸಂಪರ್ಕಕ್ಕೆ ಸಿಗದ ಅಪರಿಚಿತರ ವರ್ತನೆಯಿಂದ ಆ ವ್ಯಕ್ತಿಗೆ ಅನುಮಾನ ಉಂಟಾಗಿತ್ತು. ಬಳಿಕ ಅಪರಿಚಿತರಿಂದ ಮೋಸ ಹೋದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by: Sushma Chakre
First published: February 27, 2021, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories