Bengaluru: ನಂದಿಬೆಟ್ಟಕ್ಕೆ ಜಾಲಿರೈಡ್ ಕರೆದೊಯ್ದು ಹೆಂಡತಿಯ ಕೊಲೆ; ಜಿಪಿಎಸ್ ಮೂಲಕ ಬಯಲಾಯ್ತು ಗಂಡನ ಕೃತ್ಯ

ನವೆಂಬರ್ 16ರಂದು ಸ್ನೇಹಿತನ ಹೆಸರಲ್ಲಿ ತೇಜ್​ ಕಾರು ಬುಕ್ ಮಾಡಿದ್ದ. ನಂತರ ಪತ್ನಿ ಮತ್ತು ಸ್ನೇಹಿತರನ್ನು ಡಿನ್ನರ್ ಪಾರ್ಟಿಗೆ ಕರೆದೊಯ್ದಿದ್ದ. ಆಗ ಈತ ಹೆಂಡತಿಗೂ ಮದ್ಯ ಕುಡಿಸಿದ್ದ ಎನ್ನಲಾಗಿದೆ. ನಂತರ ಜಾಲಿರೈಡ್​ಗೆ ಕರೆದೊಯ್ದಿದ್ದಾನೆ.

news18-kannada
Updated:December 4, 2019, 8:29 AM IST
Bengaluru: ನಂದಿಬೆಟ್ಟಕ್ಕೆ ಜಾಲಿರೈಡ್ ಕರೆದೊಯ್ದು ಹೆಂಡತಿಯ ಕೊಲೆ; ಜಿಪಿಎಸ್ ಮೂಲಕ ಬಯಲಾಯ್ತು ಗಂಡನ ಕೃತ್ಯ
ಕೊಲೆ ಮಾಡಿದ ಆರೋಪಿ
  • Share this:
ಬೆಂಗಳೂರು (ಡಿ.4): ಕೆಲವರು ಕೊಲೆ ಮಾಡಲೇಬೇಕು ಎನ್ನುವ ನಿರ್ಧಾರಕ್ಕೆ ಬಂದರೆ ಹೇಗಾದರೂ ಕೊಲೆ ಮಾಡಿಯೇ ತೀರುತ್ತಾರೆ. ಬೆಂಗಳೂರಿನಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಹೆಂಡತಿಯನ್ನು ಹತ್ಯೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದ ಗಂಡ ಆಕೆಯನ್ನು ನಂದಿ ಬೆಟ್ಟದ ಮಾರ್ಗದಲ್ಲಿ ಜಾಲಿರೈಡ್​ ಕರೆದೊಯ್ದು ಹತ್ಯೆ ಮಾಡಿದ್ದಾನೆ. ನ.16ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತೇಜ್ ಸಿಂಗ್ ಕೊಲೆ ಮಾಡಿದ ಆರೋಪಿ. ಈತ ಪತ್ನಿ ದೀಪಲ್ ಕಂವಾರ್​ಳನ್ನು ಹತ್ಯೆ ಮಾಡಿದ್ದಾನೆ. ಇಬ್ಬರೂ ಮೂಲತಃ ರಾಜಸ್ಥಾನದವರು. ಈ ದಂಪತಿ ಹುಣಿಸೇಮಾರನಹಳ್ಳಿ ಬಳಿಯ ಜನತಾ ಕಾಲೋನಿಯಲ್ಲಿ ವಾಸವಿದ್ದರು. ದಂಪತಿ ಚಿಕ್ಕ ಚಿನ್ನದ ಮಳಿಗೆ ಹೊಂದಿದ್ದರು. ಇಬ್ಬರ ನಡುವೆ ನಿತ್ಯ ಮನಸ್ತಾಪ ನಡೆಯುತ್ತಿತ್ತು. ಇದರಿಂದ ರೋಸಿ ಹೋದ ತೇಜ್ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.

ನವೆಂಬರ್ 16ರಂದು ಸ್ನೇಹಿತನ ಹೆಸರಲ್ಲಿ ತೇಜ್​ ಕಾರು ಬುಕ್ ಮಾಡಿದ್ದ. ನಂತರ ಪತ್ನಿ ಮತ್ತು ಸ್ನೇಹಿತರನ್ನು ಡಿನ್ನರ್ ಪಾರ್ಟಿಗೆ ಕರೆದೊಯ್ದಿದ್ದ. ಆಗ ಈತ ಹೆಂಡತಿಗೂ ಮದ್ಯ ಕುಡಿಸಿದ್ದ ಎನ್ನಲಾಗಿದೆ. ಡಿನ್ನರ್ ನಂತರ ಸ್ನೇಹಿತರನ್ನು  ಮನೆಗೆ ಬಿಟ್ಟು, ಮಧ್ಯರಾತ್ರಿ ಪತ್ನಿಯನ್ನು ನಂದಿ ಬೆಟ್ಟದ ರಸ್ತೆಗೆ ಕರೆದೊಯ್ದಿದ್ದ.

ಇದನ್ನೂ ಓದಿ: ಅಪಾಯದ ಮಟ್ಟ ಮೀರಿರುವ ಬೆಂಗಳೂರು ಟ್ರಾಫಿಕ್; ಪರಿಸ್ಥಿತಿ ಹೀಗೆ ಮುಂದುವರೆದರೆ ಡೆಡ್​ ಸಿಟಿ ಆಗುವ ಭೀತಿಯಲ್ಲಿ ಮಹಾನಗರ!

ಹೆಂಡತಿಯನ್ನು ಕೊಲ್ಲಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದ ತೇಜ್​, ಕಾರು ಬಾಗಿಲು ತೆಗೆದು ಹೆಂಡತಿಯನ್ನು ಕೆಳಗೆ ತಳ್ಳಿದ್ದ, ಅಷ್ಟೇ ಅಲ್ಲ, ನಾಲ್ಕೈದು ಬಾರಿ ಆಕೆಯ ಮೇಲೆ ಕಾರು ಹತ್ತಿಸಿದ್ದ. ನಂತರ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದ.

ಕಾರಿನ ಜಿಪಿಎಸ್ ಪರಿಶೀಲಿಸಿದಾಗ ಅಪಘಾತ ಸ್ಥಳದಲ್ಲಿ ಕಾರು ಹಿಂದೆ ಮುಂದೆ ಚಲಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬಳಿಕ ತೇಜ್ ಸಿಂಗ್ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಆಗ ಕೃತ್ಯದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ.
 
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ