ಮಹಿಳಾ ಪೊಲೀಸ್ ಅಧಿಕಾರಿಗೂ ಕಾಮುಕನ ಕಾಟ; ಬೆಂಗಳೂರಿನ ಪಿಎಸ್​ಐಯನ್ನೇ ಮಂಚಕ್ಕೆ ಕರೆದ ಭೂಪ!

ನಿಮಗೆಷ್ಟು ಹಣ ಬೇಕೆಂದು ಕೇಳಿ, ನಾನು ಕೊಡುತ್ತೇನೆ. ಲಾಡ್ಜ್​ಗೆ ಬಂದರೆ ನಿಮ್ಮ ಹಣವನ್ನು ನೀಡುತ್ತೇನೆ ಎಂದು ವ್ಯಕ್ತಿಯೋರ್ವ ಕರೆ ಮಾಡಿದ್ದ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಪಿಎಸ್​ಐ ಅಂಜನಾದೇವಿ ದೂರು ನೀಡಿದ್ದಾರೆ.

news18-kannada
Updated:January 11, 2020, 11:35 AM IST
ಮಹಿಳಾ ಪೊಲೀಸ್ ಅಧಿಕಾರಿಗೂ ಕಾಮುಕನ ಕಾಟ; ಬೆಂಗಳೂರಿನ ಪಿಎಸ್​ಐಯನ್ನೇ ಮಂಚಕ್ಕೆ ಕರೆದ ಭೂಪ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜ. 11): ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲೂ ದಿನದಿಂದ ದಿನಕ್ಕೆ ಕಾಮುಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾಮುಕರ ದುರ್ವರ್ತನೆಗೆ ಬ್ರೇಕ್ ಹಾಕಲು ಮುಂದಾಗಿರುವ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ತಡೆಗಟ್ಟಲು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಮಹಿಳಾ ಪೊಲೀಸ್ ಅಧಿಕಾರಿಗೂ ಕಾಮುಕನ ಕಾಟ ತಪ್ಪಿಲ್ಲ ಎಂದರೆ ಆಶ್ಚರ್ಯವಾಗದಿರದು. ಇಂಥದ್ದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಸಬ್ ಇನ್​ಸ್ಪೆಕ್ಟರ್​​ ಅಂಜನಾದೇವಿಗೆ ಫೋನ್ ಮಾಡಿದ ಅಪರಿಚಿತನೊಬ್ಬ ಅವರನ್ನು ಮಂಚಕ್ಕೆ ಕರೆದಿದ್ದಾನೆ. ನಿಮಗೆಷ್ಟು ಹಣ ಬೇಕೆಂದು ಕೇಳಿ, ನಾನು ಕೊಡುತ್ತೇನೆ. ಲಾಡ್ಜ್​ಗೆ ಬಂದರೆ ನಿಮ್ಮ ಹಣವನ್ನು ನೀಡುತ್ತೇನೆ ಎಂದು ವ್ಯಕ್ತಿಯೋರ್ವ ಕರೆ ಮಾಡಿದ್ದ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಪಿಎಸ್​ಐ ಅಂಜನಾದೇವಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಲೆಯೇರಿಕೆ ಹಿನ್ನೆಲೆ ಮೆಣಸಿಗೂ ತಟ್ಟಿದ ಕಳ್ಳರ ಕಾಟ; ಗದಗದಲ್ಲಿ 5 ಕ್ವಿಂಟಾಲ್ ಒಣ ಮೆಣಸಿನಕಾಯಿ ಕಳವು

ದೂರಿನಲ್ಲಿ ಏನಿದೆ?:
ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾನು 2 ವರ್ಷಗಳಿಂದ ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜ. 7ರಂದು ರಾತ್ರಿ ನಾನು ಮನೆಯಲ್ಲಿದ್ದಾಗ ಫೋನ್ ಮಾಡಿದ್ದ ಅಪರಿಚಿತನೊಬ್ಬ 'ನೀವು ಲಾಡ್ಜ್​ಗೆ ಬಂದರೆ ನಿಮಗೆಷ್ಟು ಹಣ ಬೇಕೋ ನಾನು ಕೊಡುತ್ತೇನೆ' ಎಂದು ಹೇಳಿದ್ದ. ನಾನು ಯಾರೆಂದು ಗೊತ್ತಾ ನಿನಗೆ? ಎಂದು ನಾನು ಪ್ರಶ್ನಿಸಿದಾಗ 'ನೀವು ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಅಂಜನಾದೇವಿ ಅಂತ ನನಗೆ ಗೊತ್ತು. ಅದಕ್ಕೆ ಫೋನ್ ಮಾಡಿದೆ. ನಿಮ್ಮ ಸ್ಟೇಷನ್​ನಲ್ಲಿ ಹೋಂಗಾರ್ಡ್​ ಆಗಿರುವ ಪುಟ್ಟಮ್ಮ ನನಗೆ ನಿಮ್ಮ ನಂಬರ್ ಕೊಟ್ಟಳು' ಎಂದು ಹೇಳಿದ್ದ ಎಂದು ಅಂಜನಾದೇವಿ ದೂರು ನೀಡಿದ್ದಾರೆ.

ಅಲ್ಲದೆ, ನಾನು ಫೋನ್ ಕಟ್ ಮಾಡುತ್ತಿದ್ದಂತೆ ನನ್ನ ವಾಟ್ಸಾಪ್​ ನಂಬರ್​ಗೆ ನಮ್ಮ ಸ್ಟೇಷನ್​ನ ಹೋಂಗಾರ್ಡ್​ ಪುಟ್ಟಮ್ಮನ 26 ನಗ್ನ ಫೋಟೋಗಳನ್ನು ಕಳುಹಿಸಿದ್ದ. ಮತ್ತೆ ಫೋನ್ ಮಾಡಿ ತೀರಾ ಅಸಭ್ಯವಾಗಿ ನನ್ನ ಖಾಸಗಿ ವಿಷಯದ ಬಗ್ಗೆ ಮಾತನಾಡಿದ್ದ. ನಿಮ್ಮ ಖಾಸಗಿ ವಿಚಾರವನ್ನು ನಿಮ್ಮ ಸೀನಿಯರ್ ಆಫೀಸರ್​ಗಳ ಮುಂದೆ ಹೇಳಬಾರದು ಎಂದರೆ ನಾಳೆ ಮಧ್ಯಾಹ್ನ 12 ಗಂಟೆಯೊಳಗೆ 1 ಲಕ್ಷ ರೂ. ತೆಗೆದುಕೊಂಡು ನಾನು ಹೇಳಿದ ಲಾಡ್ಜ್​ಗೆ ಬರಬೇಕು ಎಂದು ಬ್ಲ್ಯಾಕ್​ಮೇಲ್ ಮಾಡಿದ್ದ ಎಂದು ಅಂಜನಾದೇವಿ ದೂರು ನೀಡಿದ್ದಾರೆ.

ಈ ದೂರಿನ ಆಧಾರದಲ್ಲಿ ಹೋಂಗಾರ್ಡ್​ ಪುಟ್ಟಮ್ಮ ಮತ್ತು ಫೋನ್ ಮಾಡಿದ್ದ ವ್ಯಕ್ತಿಯ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

 

 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ