ಗೆಳೆಯನನ್ನು ಡ್ರಾಪ್ ಮಾಡಲು ಹೋದವನ ಮರ್ಡರ್; ದಾರಿ ಮಧ್ಯೆ ಕತ್ತು ಕೊಯ್ದು ಬರ್ಬರ ಹತ್ಯೆ

Crime News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಹೊರವಲಯದಲ್ಲಿ ಜೊತೆಯಲ್ಲಿದ್ದವನನ್ನು ಪಕ್ಕದ ಊರಿಗೆ ಡ್ರಾಪ್ ಮಾಡಲು ಬೈಕ್​ನಲ್ಲಿ ಹೊರಟಿದ್ದವನನ್ನು ಮೃಗದಂತೆ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

news18-kannada
Updated:October 20, 2020, 12:03 PM IST
ಗೆಳೆಯನನ್ನು ಡ್ರಾಪ್ ಮಾಡಲು ಹೋದವನ ಮರ್ಡರ್; ದಾರಿ ಮಧ್ಯೆ ಕತ್ತು ಕೊಯ್ದು ಬರ್ಬರ ಹತ್ಯೆ
ಸಾಂದರ್ಭಿಕ ಚಿತ್ರ
  • Share this:
ದೇವನಹಳ್ಳಿ (ಅ. 20):  ಕಳೆದ ರಾತ್ರಿ ಜೊತೆಯಲ್ಲಿದ್ದವನನ್ನು ಪಕ್ಕದ ಊರಿಗೆ ಡ್ರಾಪ್ ಮಾಡಲು ಬೈಕ್​ನಲ್ಲಿ ಹೊರಟಿದ್ದವನು ರಸ್ತೆ ಮುಖಾಂತರ ಹೋದರೆ ದೂರವಾಗುತ್ತದೆ ಎಂದು ಕಾಲು ದಾರಿಯಲ್ಲಿ ಪ್ರಯಾಣ ಬೆಳೆಸಿದ್ದ. ಆದರೆ, ಅದೇ ಕಾಲು ದಾರಿ ಅವನ ಜೀವಕ್ಕೆ ಮುಳುವಾಗಿ ಪರಿಣಮಿಸಿದ್ದು, ಕಾಲುದಾರಿಯಲ್ಲಿ ಹೋದವನು ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ನರಹಂತಕನ ರೀತಿಯಲ್ಲಿ ಓರ್ವ ಮನುಷ್ಯನನ್ನು ಮೃಗದಂತೆ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ನಡೆದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಹೊರವಲಯದಲ್ಲಿ. ಇಲ್ಲಿ ಈ ರೀತಿ ಮಧ್ಯರಾತ್ರಿ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಯಾಗಿ ಹೋದವನು ದೊಡ್ಡಪ್ಪನಹಳ್ಳಿ ನಿವಾಸಿ 33 ವರ್ಷದ ರಾಜು.

ಲಾರಿ ಡ್ರೈವರ್ ಕೆಲಸ ಮಾಡಿಕೊಂಡು ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡಿದ್ದ ರಾಜು ಕಳೆದ ರಾತ್ರಿ ಜೊತೆಯಲ್ಲಿದ್ದವನನ್ನು ಕೆಂಪತಿಮ್ಮನಹಳ್ಳಿಯಲ್ಲಿ ಬಿಟ್ಟು ಬರೋಣ ಅಂತ ಬೈಕ್​ನಲ್ಲಿ ಬಂದಿದ್ದ. ಈ ವೇಳೆ ರಸ್ತೆಯಲ್ಲಿ ಹೋದರೆ ದೂರವಾಗುತ್ತದೆ ಎಂದು ಕಾಲು ದಾರಿಯಲ್ಲಿ ಇಬ್ಬರು ಸ್ನೇಹಿತರು ಬಂದಿದ್ದು, ರಸ್ತೆ ಮಧ್ಯೆ ಕೆಂಪರಾಜು ಮತ್ತು ಆತನ ಸಹಚರರು ಎಣ್ಣೆ ಮತ್ತು ಗಾಂಜಾ ಹೊಡೆಯುತ್ತಾ ಅಡ್ಡ ಕುಳಿತಿದ್ದರಂತೆ. ಹೀಗಾಗಿ, ರಸ್ತೆ ಮಧ್ಯೆ ಕಿಕ್​ನಲ್ಲಿದ್ದವರನ್ನು ರಾಜು ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಕಿರಾತಕರು ರಸ್ತೆಯ ಮಧ್ಯೆ ಅಟ್ಟಾಡಿಸಿ ರಾಜುವಿನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: Amazon Prime: ಅಮೇಜಾನ್ ಪ್ರೈಂ ಸದಸ್ಯತ್ವ ಪಡೆಯುವುದು ಹೇಗೆ?; ಇಲ್ಲಿದೆ ಮಾಹಿತಿ

ಕೆಂಪತಿಮ್ಮನಹಳ್ಳಿಯ ಸಾಕಷ್ಟು ಜನ ಪುಡಿ ರೌಡಿಗಳು ರಾತ್ರಿಯಾದರೆ ಇದೇ ರೀತಿ ಕಿಕ್ ನಲ್ಲಿ ಗಾಂಜಾ ಮತ್ತು ಎಣ್ಣೆ ಹೊಡೆಯುತ್ತಾ ರಸ್ತೆ ಮಧ್ಯೆ ಹೋಗಿ ಬರುವವರ ಬಳಿ ದರೋಡೆ ಮಾಡ್ತಾರಂತೆ. ಅದೇ ರೀತಿ ಕಳೆದ ರಾತ್ರಿ ದರೋಡೆ ಮಾಡಲು ಮುಂದಾಗಿದ್ದ ವೇಳೆ ಪ್ರಶ್ನಿಸಿದ್ದಕ್ಕೆ ಈ ರೀತಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಅಂತ ಸ್ಥಳಿಯರು ಆರೋಪಿಸಿದ್ದಾರೆ. ಇನ್ನು, ಮೃತ ರಾಜುಗೆ ಕಳೆದ ಒಂದು ವರ್ಷದಿಂದ ಹಿಂದಷ್ಟೆ ಮದುವೆಯಾಗಿದ್ದು, ಒಂದು 9 ತಿಂಗಳ ಮಗು ಇದೆ. ಆದರೆ, ಇದೀಗ ಮದುವೆಯಾದ 1 ವರ್ಷಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳಿಗೆ ಹೋಗುವ ಪಡ್ಡೆ ಹುಡುಗರಿದ್ದು, ಪ್ರತಿ ಬಾರಿ ಇದೇ ರೀತಿಯ ಘಟನೆಗಳು ನಡೆಯುತ್ತಿವೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಊರಿನಲ್ಲಿ ಹವಾ ಮೆಂಟೇನ್ ಮಾಡಬೇಕು ಎಂದು ಕಿಕ್​ನಲ್ಲಿದ್ದ ಖದೀಮರನ್ನು ಪ್ರಶ್ನಿಸಿದ್ದಕ್ಕೆ ಮೃಗಗಳ ರೀತಿ ಮೇಲೆ ಎರಗಿ ಕೊಲೆ ಮಾಡಿರುವುದು ನಿಜಕ್ಕೂ ದುರಂತ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವಿಶ್ವನಾಥಪುರ ಪೊಲೀಸರು ಆರೋಪಿ ಕೆಂಪರಾಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸಂಪೂರ್ಣ ತನಿಖೆಯ ನಂತರ ಕೊಲೆಯ ಹಿಂದಿನ ಸತ್ಯ ಸಂಗತಿ ಬೆಳಕಿಗೆ ಬರಲಿದೆ.
Published by: Sushma Chakre
First published: October 20, 2020, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading