news18-kannada Updated:February 24, 2021, 9:49 AM IST
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ರೌಡಿ ಗ್ಯಾಂಗ್
ಬೆಂಗಳೂರು (ಫೆ. 24): ಪೊಲೀಸರು ಸ್ವಲ್ಪ ಯಾಮಾರಿದ್ದರೂ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಗ್ಯಾಂಗ್ ವಾರ್ ನಡೆಯುತ್ತಿತ್ತು. ಎರಡು ಗುಂಪುಗಳ ನಡುವೆ ನಡೆಯಬೇಕಿದ್ದ ಗ್ಯಾಂಗ್ ವಾರ್ ಅನ್ನು ಸಿಸಿಬಿ ಪೊಲೀಸರು ತಡೆದಿದ್ದಾರೆ. ಕಳೆದ ರಾತ್ರಿ ಮಾರತ್ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು 18 ಮಚ್ಚು ಹಾಗೂ ಲಾಂಗುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾರತ್ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿಯಿಂದ ತನಿಖೆ ಮುಂದುವರೆದಿದೆ.
ರೋಹಿತ್ ಹಾಗೂ ಕಾಡುಬೀಸಲಹಳ್ಳಿ ಸೋಮು ಗ್ಯಾಂಗ್ ನಡುವೆ ನಡೆಯಬೇಕಿದ್ದ ಗ್ಯಾಂಗ್ ವಾರ್ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ವಿಶೇಷ ತಂಡ ರಚನೆ ಮಾಡಿ 11 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಮೇಲೆ ಈಗಾಗಲೇ ದರೋಡೆ, ಡಕಾಯತಿ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಸ್ಥಳೀಯ ರೌಡಿಸಂಗೆ ಮಂಗಳೂರು ರೌಡಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಕಾಡುಬಿಸನಹಳ್ಳಿ ಸೋಮ ಮತ್ತು ಕಾಡುಬಿಸನಹಳ್ಳಿ ರೋಹಿತ್ ನಡುವೆ ಹಳೇ ದ್ವೇಷವಿತ್ತು. ಹೀಗಾಗಿ, ಕಾಡುಬಿಸನಹಳ್ಳಿ ಸೋಮ ಗ್ಯಾಂಗ್ ವಾರ್ಗೆ ಟಾರ್ಗೆಟ್ ಆಗಿದ್ದ.

ಸಿಸಿಬಿ ಪೊಲೀಸರು ವಶಕ್ಕೆ ಪಡೆದ ಮಚ್ಚುಗಳು
ಇದನ್ನೂ ಓದಿ: Bengaluru Coronavirus: ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಕೇಸ್; ಬೆಳ್ಳಂದೂರಿನ ಅಪಾರ್ಟ್ಮೆಂಟ್ ಸೀಲ್ಡೌನ್
ಇದಕ್ಕೆಲ್ಲ ಮಾಸ್ಟರ್ ಪ್ಲಾನ್ ಮಾಡಿದ್ದು ರೌಡಿ ಕಾಡುಬಿಸನಹಳ್ಳಿ ರೋಹಿತ್. ಆನೇಕಲ್ ರೌಡಿಶೀಟರ್ ಹರೀಶ್, ಸರ್ಜಾಪುರ ರೌಡಿ ಶೀಟರ್ ವೆಂಕಟೇಶ್, ಮಂಗಳೂರು ರೌಡಿಶೀಟರ್ ಕಿರಣ್ ಗೌಡ, ಮಂಗಳೂರು ಉಲ್ಲಾಳ ರೌಡಿ ವಿಶ್ವನಾಥ ಭಂಡಾರಿ ಸೇರಿ 11 ಜನರ ನಟೋರಿಯಸ್ ಗ್ಯಾಂಗ್ ಅರೆಸ್ಟ್ ಆಗಿದೆ.
ರೋಹಿತ್ ಮಂಗಳೂರು ಮೂಲದ ಇಬ್ಬರು ರೌಡಿಶೀಟರ್ಗಳನ್ನು ಕರೆಸಿದ್ದ. ಕಿರಣ್ ಗೌಡ ಮತ್ತು ವಿಶ್ವನಾಥ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಕಳೆದ 20 ದಿನಗಳ ಹಿಂದೆ ಕರೆಸಿಕೊಂಡು ಕರಿಯಮ್ಮನ ಅಗ್ರಹಾರದಲ್ಲಿ ಇರಿಸಿದ್ದ. 20 ದಿನಗಳಿಂದ ಕಾಡುಬಿಸನಹಳ್ಳಿ ಸೋಮ ಮತ್ತವರ ಸಹಚರರನ್ನು ಗಮನಿಸುತ್ತಿದ್ದ.
Published by:
Sushma Chakre
First published:
February 24, 2021, 9:49 AM IST