Bangalore Crime: ಬೆಂಗಳೂರಿನಲ್ಲಿ ಮಧ್ಯರಾತ್ರಿ ಎಲ್ಲರೆದುರೇ ಕ್ಯಾಬ್ ಚಾಲಕನ ಬರ್ಬರ ಹತ್ಯೆ

ಶನಿವಾರ ರಾತ್ರಿ ಸ್ನೇಹಿತನೊಬ್ಬನ ಜೊತೆ ಮದ್ಯ ಸೇವಿಸಲು ಸದಾನಂದ ಬಾರ್​ಗೆ ತೆರಳಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ನಂತರ ಹತ್ಯೆಯಲ್ಲಿ ಗಲಾಟೆ ಕೊನೆಯಾಗಿದೆ.

news18-kannada
Updated:December 15, 2019, 8:39 AM IST
Bangalore Crime: ಬೆಂಗಳೂರಿನಲ್ಲಿ ಮಧ್ಯರಾತ್ರಿ ಎಲ್ಲರೆದುರೇ ಕ್ಯಾಬ್ ಚಾಲಕನ ಬರ್ಬರ ಹತ್ಯೆ
ಕೊಲೆಯಾದ ವ್ಯಕ್ತಿ
  • Share this:
ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ ಕ್ಯಾಬ್​ ಚಾಲಕನನ್ನು ಕೊಲೆ ಮಾಡಲಾಗಿದೆ. ಹಳೆಯ ದ್ವೇಷಕ್ಕೆ ಈ ಹತ್ಯೆ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಸದಾನಂದ ಕೊಲೆಯಾದ ಯುವಕ. ಈತ ಬೆಂಗಳೂರಿನ ಕಮಲಾ ನಗರ ನಿವಾಸಿ. ಸದಾನಂದ ಕೆಲ ವರ್ಷಗಳ ಹಿಂದೆ ಹಲ್ಲೆ , ದೊಂಬಿ ಸೇರಿದಂತೆ ಇತರೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳೆದ 6 ತಿಂಗಳಿನಿಂದ ಸದಾಶಿವ ಕ್ಯಾಬ್ ಓಡಿಸಿಕೊಂಡಿದ್ದ. ಮತ್ತೆ ದೊಂಬಿ, ಗಲಾಟೆ ವಿಚಾರಕ್ಕೆ ಕೈ ಹಾಕಿರಲಿಲ್ಲ.

ಶನಿವಾರ ರಾತ್ರಿ ಸ್ನೇಹಿತನೊಬ್ಬನ ಜೊತೆ ಮದ್ಯ ಸೇವಿಸಲು ಸದಾನಂದ ಬಾರ್​ಗೆ ತೆರಳಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ನಂತರ ಹತ್ಯೆಯಲ್ಲಿ ಗಲಾಟೆ ಕೊನೆಯಾಗಿದೆ. ರಸ್ತೆ ಮೇಲೆಯೇ ಈ ಕೊಲೆ ನಡೆದಿದೆ.  ವೈಯಕ್ತಿಕ ವಿಚಾರಕ್ಕೆ ಜಗಳ ನಡೆದು ಸ್ನೇಹಿತನೇ ಕೊಲೆ ಮಾಡಿರಬೇಕೆಂಬ ಸಂದೇಹ ಇದೆ.

ಮಂಜುನಾಥ ನಗರದ ಬಾಲಾಜಿ ಬಾರ್ ಬಳಿ ಘಟನೆ ನಡೆದಿದೆ. ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಬಾರ್​​ ಹೊರ ಭಾಗದ ಸಿಸಿಟಿವಿ ದೃಶ್ಯಾವಳಿ ಕಲೆಹಾಕಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಲೆಯನ್ನು ನೋಡಿದವರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ನಾನು ಅಲ್ಲಿ ಹೋಗುವಾಗ ಕೊಲೆ ನಡೆದಿತ್ತು. ಜನರು ಸೇರಿದ್ದರು. ಆತನ ಕತ್ತನ್ನು ಕುಯ್ಯಲಾಗಿತ್ತು," ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
First published:December 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ