HOME » NEWS » State » BANGALORE CRIME BANGALORE POLICE ARRESTED FRAUD GANG FOR CHEATING IN THE NAME OF LUCKY DRAW SCT KMTV

Bangalore Crime: ಲಾಟರಿ ಲಕ್ಕಿ ಡ್ರಾ ಮೂಲಕ ವಂಚಿಸುತ್ತಿದ್ದ ಮೂವರ ಬಂಧನ

Bengaluru Crime News: ಆರೋಪಿಗಳು ಹನುಮಂತರಾಯಪ್ಪ ಎಂಬುವವರಿಗೆ 35 ಲಕ್ಷ ಲಕ್ಕಿ ಡ್ರಾ ಬಂದಿದೆ ಎಂದು ಆನ್‌ಲೈನ್ ಮೂಲಕ ಮೆಸೇಜ್ ಮಾಡಿದ್ದಾರೆ. ಇದನ್ನ ನಂಬಿದ ಹನುಮಂತರಾಯಪ್ಪ ಆರೋಪಿಗಳ ಜೊತೆ ಆನ್‍ಲೈನ್ ಮೂಲಕ ಸಂಪರ್ಕ ಮಾಡಿ ಆರೋಪಿಗಳು ಕೇಳಿದ ಮಾಹಿತಿ ನೀಡಿದ್ದಾರೆ.

news18-kannada
Updated:March 19, 2021, 9:54 AM IST
Bangalore Crime: ಲಾಟರಿ ಲಕ್ಕಿ ಡ್ರಾ ಮೂಲಕ ವಂಚಿಸುತ್ತಿದ್ದ ಮೂವರ ಬಂಧನ
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಆರೋಪಿಗಳು
  • Share this:
ಬೆಂಗಳೂರು (ಮಾ. 19): ಆನ್‌ಲೈನ್ ಲಾಟರಿ ಲಕ್ಕಿ ಡ್ರಾ ಮೂಲಕ ಲಕ್ಷ ಲಕ್ಷ ಹಣ ಗಳಿಸಿದ್ದೀರಿ ಎಂದು ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್ ವೊಂದನ್ನು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ನಕಲಿ ಲಾಟರಿ ಮತ್ತು ಲಕ್ಕಿ ಡ್ರಾ ಮೆಸೇಜ್ ಕಳಿಸುತ್ತಿದ್ದ ಅಸಾಮಿಗಳು ಬಳಿಕ ಅವರಿಂದ ಹಣ ಪಡೆದು ಮಕ್ಮಲ್ ಟೋಪಿ ಹಾಕಿ ವಂಚಿಸುತ್ತಿದ್ದರು. ಈ ಬಗ್ಗೆ ಆಗ್ನೇಯ ವಿಭಾಗದ ಪೊಲೀಸರಿಗೆ ದೂರು ಬಂದಿದ್ದು ಪೊಲೀಸರು ವಂಚಕರ ಗ್ಯಾಂಗ್ ಪತ್ತೆ ಮಾಡಿದ್ದಾರೆ.

ನಗರದ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬೆಳಗಾವಿ ಜಿಲ್ಲೆಯ ಅಪ್ಪಾಜಿ ಗಂಗಾರಾಂ, ಮಹಾಂತೇಶ್, ಸುರೇಶ್ ಮಲ್ಲಪ್ಪ ಎಂಬುವರನ್ನ ಬಂಧಿಸಿದ್ದಾರೆ. ಆರೋಪಿಗಳು ಹನುಮಂತರಾಯಪ್ಪ ಎಂಬುವವರಿಗೆ 35 ಲಕ್ಷ ಲಕ್ಕಿ ಡ್ರಾ ಬಂದಿದೆ ಎಂದು ಆನ್‌ಲೈನ್ ಮೂಲಕ ಮೆಸೇಜ್ ಮಾಡಿದ್ದಾರೆ. ಇದನ್ನ ನಂಬಿದ ಹನುಮಂತರಾಯಪ್ಪ ಆರೋಪಿಗಳ ಜೊತೆ ಆನ್‍ಲೈನ್ ಮೂಲಕ ಸಂಪರ್ಕ ಮಾಡಿ ಆರೋಪಿಗಳು ಕೇಳಿದ ಮಾಹಿತಿ ನೀಡಿದ್ದಾರೆ.

ಈ ವೇಳೆ ಲಕ್ಕಿ ಡ್ರಾ ಹಣ ಪಡೆಯಲು ಪ್ರೊಸೆಸಿಂಗ್ ಚಾರ್ಜ್ ಎಂದು 75 ಸಾವಿರ ಹಣ ನೀಡಬೇಕು ಎಂದು ಆರೋಪಿಗಳು ತಿಳಿಸಿದ್ದಾರೆ. ಇದನ್ನ ನಂಬಿದ ದೂರುದಾರ ವಿವಿಧ ಬ್ಯಾಂಕ್ ಖಾತೆಗಳಿಗೆ 75 ಸಾವಿರ ಹಣ ಹಾಕಿದ್ದಾರೆ. ಹಣ ಹಾಕಿಸಿಕೊಂಡ ಬಳಿಕ ಅಸಾಮಿಗಳು ಲಕ್ಕಿ ಡ್ರಾ ಹಣವು ಕೊಡದೇ, ಪ್ರೊಸೆಸಿಂಗ್ ಚಾರ್ಜ್ ಅಮೌಂಟ್ ಕೊಡದೇ ಯಾಮಾರಿಸಿದ್ದಾರೆ. ಆನ್‍ಲೈನ್ ವಂಚಕರ ಮೋಸದ ಬಲೆಗೆ ಬಿದ್ದ ಹನುಮಂತರಾಯಪ್ಪ ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Bangalore Coronavirus: ದಾವಣಗೆರೆಯ ವಿದ್ಯಾರ್ಥಿನಿಯಿಂದ ಬೆಂಗಳೂರಿನ ಹಾಸ್ಟೆಲ್​ನಲ್ಲಿ ಕೊರೋನಾ ಹರಡಿದ್ದು ಹೇಗೆ?

ಆನ್‍ಲೈನ್ ವಂಚನೆ ಬಗ್ಗೆ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಣ ಹಾಕಿಸಿಕೊಂಡ ಬ್ಯಾಂಕ್ ಖಾತೆದಾರನನ್ನ ಪತ್ತೆ ಹಚ್ಚಿದ್ದಾರೆ. ಆ ಮೂಲಕ ಮೂವರು ವಂಚಕರನ್ನ ಪತ್ತೆ ಹಚ್ಚಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳು ಮುಂಬೈ ಮೂಲದ ಹರ್ಷದ್ ಎಂಬಾತನ‌ ಜೊತೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹರ್ಷದ್ ಕೂಡ ಮುಂಬೈನಲ್ಲಿ ಆನ್ ಲೈನ್ ವಂಚನೆ ಮಾಡುತ್ತಿದ್ದು ಸಾರ್ವಜನಿಕರಿಂದ ದೋಚುವ ಹಣವನ್ನ ಈ ಮೂವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿದ್ದನಂತೆ.

ಆರೋಪಿಗಳು ತಮ್ಮ ಬ್ಯಾಂಕ್ ವಿವರಗಳನ್ನ ಹರ್ಷದ್ ಗೆ ನೀಡಿದ್ದು ಆತ ಒಂದು ಲಕ್ಷ ಹಣಕ್ಕೆ ಮೂರು ಸಾವಿರ ಕಮೀಷನ್ ಕೊಡ್ತಿದ್ದನಂತೆ. ಸದ್ಯ ಮೂವರನ್ನ ಬಂಧಿಸಿದ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನೂ ಪ್ರಮುಖ ಆರೋಪಿ ಅಪ್ಪಾಜಿ ಗಂಗಾರಾಂ ಏಳನೇ ತರಗತಿ ಓದಿದ್ದು ಏರ್ಪೋರ್ಟ್ ನಲ್ಲಿ ಅಡುಗೆ ಭಟ್ಟನಾಗಿದ್ದ ಕೆಲಸ ಮಾಡ್ತಿದ್ದನಂತೆ.
ಇತ್ತೀಚೆಗಷ್ಟೆ ಮದುವೆಯಾಗಿದ್ದ ಗಂಗಾರಾಂ ನಗರದಲ್ಲಿ ನೆಲೆಸಿ ಸಣ್ಣಪುಟ್ಟ ಕೆಲಸಗಳನ್ನ ಮಾಡುತ್ತಿದ್ದ ಎನ್ನಲಾಗಿದೆ. ಕೆಲಸದ ವೇಳೆ ಪರಿಚಯವಾದ ಇಬ್ಬರು ಸ್ನೇಹಿತರ ಜೊತೆಗೂಡಿ ಹೆಚ್ಚಿನ ಹಣ ಸಂಪಾದಿಸಲು ಸಾರ್ವಜನಿಕರಿಗೆ ಲಾಟರಿ ಮತ್ತು ಲಕ್ಕಿ ಡ್ರಾ ಮೆಸೇಜ್ ಕಳಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನ ಬಂಧಿಸಿದ ಆಗ್ನೇಯ ಸಿಇಎನ್ ಪೊಲೀಸರು ಈ ಹಿಂದಿನ ಕೃತ್ಯ ಮತ್ತು ಪೂರ್ವಾಪರಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
Published by: Sushma Chakre
First published: March 19, 2021, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories