HOME » NEWS » State » BANGALORE CRIME ANEKAL WOMAN KILLED BY WOODEN STICK POLICE SUSPECTS SEXUAL RELATIONSHIP BEHIND MURDER SCT CANK

Bangalore Crime: ಆನೇಕಲ್​ನಲ್ಲಿ ಕಟ್ಟಿಗೆಯಿಂದ ಹೊಡೆದು ಮಹಿಳೆಯ ಕೊಲೆ; ಅಕ್ರಮ ಸಂಬಂಧದ ಶಂಕೆ

Bangalore Murder: ಗಂಡನಿಲ್ಲದ ಫಿರ್ಮಳ ಮನೆಗೆ ಯಾದಗಿರಿ ಮೂಲದ ಮೆಹಬೂಬ್ ಎಂಬಾತ ಆಗಾಗ ಬಂದು ಹೋಗುತ್ತಿದ್ದ . ಕಳೆದ ಶನಿವಾರ ಸಹ ಮೆಹಬೂಬ್ ಫಿರ್ಮ ಒಬ್ಬಂಟಿಯಾಗಿದ್ದಾಗ ಮನೆಗೆ ಬಂದಿದ್ದ. ಸುಮಾರು ಎರಡು ತಾಸಿನ ಬಳಿಕ ಕಿರುಚಾಟ ಚೀರಾಟ ಕೇಳಿದೆ . ಕೆಲ ಹೊತ್ತಿನ ಬಳಿಕ ಚೀರಾಟ ನಿಂತಿದೆ. ಅಲ್ಲಿಂದ ಮೆಹಬೂಬ್ ಸಹ ಪರಾರಿಯಾಗಿದ್ದಾನೆ. 

news18-kannada
Updated:March 24, 2021, 10:04 AM IST
Bangalore Crime: ಆನೇಕಲ್​ನಲ್ಲಿ ಕಟ್ಟಿಗೆಯಿಂದ ಹೊಡೆದು ಮಹಿಳೆಯ ಕೊಲೆ; ಅಕ್ರಮ ಸಂಬಂಧದ ಶಂಕೆ
ಸಾಂದರ್ಭಿಕ ಚಿತ್ರ
  • Share this:
ಆನೇಕಲ್ (ಮಾ. 24): ಆಕೆ ಹೊಟ್ಟೆಪಾಡಿಗೆಂದು ದೂರದ ಯಾದಗಿರಿಯಿಂದ ಬೆಂಗಳೂರಿಗೆ ಬಂದು ತನ್ನ‌ ಮಗನೊಂದಿಗೆ ನೆಲೆಸಿದ್ದಳು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆ ಇದ್ದಕ್ಕಿದ್ದಂತೆ ತಾನು ವಾಸವಿದ್ದ ಮನೆಯಲ್ಲಿಯೇ ದಾರುಣವಾಗಿ ಕೊಲೆಯಾಗಿ ಹೋಗಿದ್ದಾಳೆ .‌ಅಷ್ಟಕ್ಕೂ ಆ ಒಂಟಿ ಮಹಿಳೆಯನ್ನು ಕೊಂದಿದ್ಯಾರು? ಕೊಲೆಗೆ ಕಾರಣವಾದರೂ ಏನು ಅಂತೀರಾ? ಈ ಸ್ಟೋರಿ ಓದಿ.

ಆಕೆಯ ಹೆಸರು ಫಿರ್ಮ . ಯಾದಗಿರಿ ಮೂಲದ ಈ ಮಹಿಳೆ ಕಳೆದ ಶನಿವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ನಾಯ್ಡು ಲೇಔಟ್​ನ ಮನೆಯೊಂದರಲ್ಲಿ ಕೊಲೆಯಾಗಿ ಹೋಗಿದ್ದಾಳೆ . ತನ್ನವರನ್ನು ತೊರೆದು ದೂರದ ಯಾದರಿಗಿಯಿಂದ ಬೆಂಗಳೂರಿಗೆ ಮಕ್ಕಳೊಂದಿಗೆ ಬಂದಿದ್ದ ನಿಗೂಡವಾಗಿ ಕೊಲೆಯಾಗಿ ಹೋಗಿದ್ದಾಳೆ . ಮೃತ ಫಿರ್ಮಗೆ ಒಟ್ಟು ಮೂರು ಮಂದಿ ಮಕ್ಕಳಿದ್ದು, ಆಕೆಯ ಗಂಡ ಆಕೆಯನ್ನು ಹಲವು ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದ . ಹಾಗಾಗಿ ಆಕೆ‌ ತನ್ನ ಮಕ್ಕಳನ್ನು ಗಾರೆ ಕೆಲಸ ಮಾಡಿ‌ ಪೋಷಣೆ ಮಾಡುತ್ತಿದ್ದು ,  ತನ್ನ ಎರಡನೇಯ ಮಗನೊಂದಿಗೆ ಪರಪ್ಪನ ಅಗ್ರಹಾರದಲ್ಲಿ ನೆಲೆಸಿದ್ದಳು . ಎಂದಿನಂತೆ ಆಕೆಯ ಎರಡನೆಯ ಮಗ ಹುಸೇನ್ ಕೆಲಸಕ್ಕೆ ಹೋಗಿದ್ದ. ವಾಪಸ್ ಬಂದು ನೋಡಿದಾಗ ಫಿರ್ಮಾ ಕೊಲೆಯಾಗಿತ್ತು. ಅಕ್ಕಪಕ್ಕದವರು ಪೋನ್ ಮಾಡಿ ತಿಳಿಸಿದಾಗ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Crime News: ಅತ್ಯಾಚಾರ ನಡೆಸಲು ಯತ್ನಿಸಿದವನ ಗುಪ್ತಾಂಗವನ್ನೇ ಕತ್ತರಿಸಿದ ಮಹಿಳೆ!

ಇನ್ನೂ ಗಂಡನಿಲ್ಲದ ಫಿರ್ಮಳ ಮನೆಗೆ ಯಾದಗಿರಿ ಮೂಲದ ಮೆಹಬೂಬ್ ಎಂಬಾತ ಆಗಾಗ ಬಂದು ಹೋಗುತ್ತಿದ್ದ . ಕಳೆದ ಶನಿವಾರ ಸಹ ಮೆಹಬೂಬ್ ಫಿರ್ಮ ಒಬ್ಬಂಟಿಯಾಗಿದ್ದಾಗ ಮನೆಗೆ ಬಂದಿದ್ದ. ಸುಮಾರು ಎರಡು ತಾಸಿನ ಬಳಿಕ ಕಿರುಚಾಟ ಚೀರಾಟ ಕೇಳಿದೆ . ಕೆಲ ಹೊತ್ತಿನ ಬಳಿಕ ಚೀರಾಟ ನಿಂತಿದೆ. ಅಲ್ಲಿಂದ ಮೆಹಬೂಬ್ ಸಹ ಪರಾರಿಯಾಗಿದ್ದಾನೆ.  ಕೊನೆಗೆ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಕೊಲೆಯಾಗಿರುವ ಬೆಳಕಿಗೆ ಬಂದಿದೆ.  ಯಾರೂ ಇಲ್ಲದ ವೇಳೆ ಫಿರ್ಮಳ ಮನೆಗೆ ಬಂದಿದ್ದ ಮೆಹಬೂಬ್ ಮೇಲೆಯೇ ಪೊಲೀಸರಿಗೆ ಸಂಶಯ ಮೂಡಿದೆ . ಸದ್ಯ ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ .  ಶಂಕಿತ ಆರೋಪಿ ಮೆಹಬೂಬ್ ಗಾಗಿ ಪರಪ್ಪನ ಅಗ್ರಹಾರ ಪೊಲೀಸರು ಶೋಧ ನಡೆಸುತ್ತಿದ್ದು , ಇಲ್ಲಿಯವರೆಗೆ ಆರೋಪಿ ಸುಳಿವು ಪತ್ತೆಯಾಗಿಲ್ಲ ಎಂದು ಸ್ಥಳೀಯ ಶಂಕರ್ ತಿಳಿಸಿದ್ದಾರೆ .
Youtube Video

ಒಟ್ಟಿನಲ್ಲಿ  ಫಿರ್ಮ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ವೇಳೆ ಅಕ್ರಮ ಸಂಬಂಧದ ವಾಸನೆ ಕಂಡು ಬಂದಿದ್ದು , ಅಕ್ರಮ ಸಂಬಂಧ ವಿಚಾರವಾಗಿ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಹಾಗಾಗಿ ಪೊಲೀಸರ ತನಿಖೆಯಿಂದ ಆರೋಪಿ ಮತ್ತು ಕೊಲೆಗೆ ನಿಖರ ಕಾರಣ ಇನ್ನಷ್ಟೆ  ತಿಳಿದು ಬರಬೇಕಿದೆ .

(ವರದಿ  : ಆದೂರು ಚಂದ್ರು )
Published by: Sushma Chakre
First published: March 24, 2021, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories