HOME » NEWS » State » BANGALORE CRIME AJJAMPURA WOMAN SUSPICIOUSLY DIED IN BENGALURU AFTER DOWRY HARASSMENT BY HUSBAND SCT

Bangalore Crime: ಗಂಡನ ಕಿರುಕುಳದ ಬಗ್ಗೆ ವಿಡಿಯೋ ಮಾಡಿದ್ದ ಗೃಹಿಣಿ ಬೆಂಗಳೂರಿನಲ್ಲಿ ಶವವಾಗಿ ಪತ್ತೆ!

Bengaluru Crime News: ಗಂಡನ ಕಿರುಕುಳಕ್ಕೆ ಬೇಸತ್ತ ದೀಪಿಕಾ 4 ವರ್ಷದ ಮಗುವಿನೊಂದಿಗೆ 3 ದಿನಗಳ ಹಿಂದೆ ತವರೂರಾದ ಅಜ್ಜಂಪುರಕ್ಕೆ ತೆರಳಿದ್ದ ದಿನವೇ ಆಕೆಯ ಮಗು ಮೃತಪಟ್ಟಿತ್ತು. ಗಂಡ ತನಗೆ ಕಿರುಕುಳ ಕೊಟ್ಟಿರೋ ಬಗ್ಗೆ ವಿಡಿಯೋ ಮಾಡಿದ್ದ ದೀಪಿಕಾ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

news18-kannada
Updated:April 20, 2021, 8:13 AM IST
Bangalore Crime: ಗಂಡನ ಕಿರುಕುಳದ ಬಗ್ಗೆ ವಿಡಿಯೋ ಮಾಡಿದ್ದ ಗೃಹಿಣಿ ಬೆಂಗಳೂರಿನಲ್ಲಿ ಶವವಾಗಿ ಪತ್ತೆ!
ಮೃತ ಗೃಹಿಣಿ ದೀಪಿಕಾ
  • Share this:
ಬೆಂಗಳೂರು (ಏ. 20): ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಬನಶಂಕರಿ ಠಾಣಾ ವ್ಯಾಪ್ತಿಯ ಕದಿರೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ದೀಪಿಕಾ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ತಮ್ಮ ಮಗಳ ಸಾವಿಗೆ ಆಕೆಯ ಗಂಡ ಜಯಕುಮಾರ್ ಕಾರಣ ಎಂದು ದೀಪಿಕಾಳ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. 3 ದಿನಗಳ ಹಿಂದೆ ಆಕೆಯ ಮಗು ಕೂಡ ಸಾವನ್ನಪ್ಪಿತ್ತು. ತವರೂರಿಗೆ ತೆರಳಿ ನಾಪತ್ತೆಯಾಗಿದ್ದ ದೀಪಿಕಾ ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲಿ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ.

ದೀಪಿಕಾ- ಜಯಕುಮಾರ್ ದಂಪತಿಗೆ 4 ವರ್ಷದ ಗಂಡು ಮಗುವಿತ್ತು. ವರದಕ್ಷಿಣೆಗಾಗಿ ಜಯಕುಮಾರ್ ಹೆಂಡತಿ ಹಾಗೂ ಮಗುವಿಗೆ ಕಿರುಕುಳ ನೀಡುತ್ತಿದ್ದ ಎಂದು ದೀಪಿಕಾಳ ಪೋಷಕರು ಆರೋಪ ಮಾಡಿದ್ದಾರೆ. ಗಂಡನ ಕಿರುಕುಳಕ್ಕೆ ಬೇಸತ್ತ ದೀಪಿಕಾ 3 ದಿನಗಳ ಹಿಂದೆ ತವರೂರಾದ ಅಜ್ಜಂಪುರಕ್ಕೆ ತೆರಳಿದ್ದರು.

4 ವರ್ಷದ ಗಂಡು ಮಗುವಿನೊಂದಿಗೆ ತವರಿಗೆ ತೆರಳಿದ್ದ ದೀಪಿಕಾಗೆ ಅಲ್ಲೊಂದು ದೊಡ್ಡ ಆಘಾತವೇ ಕಾದಿತ್ತು. ದೀಪಿಕಾ ತವರಿಗೆ ತೆರಳಿದ್ದ ದಿನವೇ ಆಕೆಯ ಮಗು ಮೃತಪಟ್ಟಿತ್ತು. ಇದಾದ ಬಳಿಕ ಗಂಡ ಜಯಕುಮಾರ್ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ದೀಪಿಕಾ ದೂರು ನೀಡಿದ್ದರು. ದೂರಿನ ಬಳಿಕ ತವರು ಮನೆಯಿಂದ ನಾಪತ್ತೆಯಾಗಿದ್ದ ದೀಪಿಕಾ ಇದೀಗ ಹೆಣವಾಗಿ ಪತ್ತೆಯಾಗಿದ್ದಾರೆ.

ದೀಪಿಕಾ ನಾಪತ್ತೆ ಬಗ್ಗೆ ಆಕೆಯ ಕುಟುಂಬಸ್ಥರು ತರೀಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಕೆಗಾಗಿ ಎಲ್ಲ ಕಡೆಯೂ ಹುಡುಕಾಟ ನಡೆಸಿದ್ದರು. ಇದೀಗ ನಿನ್ನೆ ರಾತ್ರಿ ಬೆಂಗಳೂರಿನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಪಿಕಾ ಶವ ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
Youtube Video

ಗಂಡ ತನಗೆ ಕಿರುಕುಳ ಕೊಟ್ಟಿರೋ ಬಗ್ಗೆ ವಿಡಿಯೋ ಮಾಡಿದ್ದ ದೀಪಿಕಾ ಇದೀಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
Published by: Sushma Chakre
First published: April 20, 2021, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories