HOME » NEWS » State » BANGALORE CRIME A MAN KILLED AT BANGALORE AND POLICE STARTED INVESTIGATION GVTV LG

Bangalore Crime: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು 

ಮೃತ ದಡಿಯಾ ಮಂಜ ಈ ಹಿಂದೆ ಯಾವ ಅಪರಾಧ ಪ್ರಕರಣ ಹೊಂದಿಲ್ಲದಿದ್ದರೂ, ಆತನ ಸಹೊದರನ ಮೇಲೆ ಕೆಲ ಗಲಾಟೆಗಳಿದ್ದವು ಎನ್ನಲಾಗಿದೆ.. ಮೇಲ್ನೋಟಕ್ಕೆ ಹತ್ಯೆಯ ನಿಖರ ಕಾರಣ ತಿಳಿಯದಿದ್ದರೂ, ಪರಿಚಯಸ್ಥರೇ ಕೃತ್ಯ ಎಸಗಿರೊ ಶಂಕೆ ವ್ಯಕ್ತವಾಗಿದೆ.

news18-kannada
Updated:March 25, 2021, 10:14 AM IST
Bangalore Crime: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು 
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.25): ಆತ ಆ ಏರಿಯಾದ ಯುವಕರಿಗೆಲ್ಲಾ ಅಚ್ಚು ಮೆಚ್ಚಿನ ಗೆಳೆಯ. ಮಾಡೋಕೆ ಕೆಲಸ ಇಲ್ಲ ಅಂದ್ರು, ಹುಡುಗರ ಜೊತೆ ಸೇರಿ ಓಡಾಡ್ಕೊಂಡು ಎಣ್ಣೆ ಪಾರ್ಟಿ ಮಾಡ್ಕೊಂಡು ಆರಾಮಾಗಿದ್ದ. ಆದ್ರೆ ಇತ್ತೀಚೆಗೆ ಅವೆಲ್ಲ ಬಿಟ್ಟು ಸೈಲೆಂಟ್ ಆಗಲು ನಿರ್ಧರಿಸಿದ್ದ. ಹೀಗೆ ಎಲ್ಲಾ ಚಟ ಬಿಟ್ಟವನು ಇಂದು ಬೆಳಿಗ್ಗೆ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ. ಹೌದು, ಆ ವ್ಯಕ್ತಿಯ ಹೆಸರು ಮಂಜುನಾಥ್ ಅಲಿಯಾಸ್ ದಡಿಯಾ ಮಂಜ. ನಗರದ ಇಟ್ಟಮಡುವಿನ ಮುಖ್ಯರಸ್ತೆಯ ದೊಡ್ಡ ಬೇಕರಿಯ ಏರಿಯಾ ಬಳಿ ವಾಸವಿದ್ದ. ಕಳೆದ ಏಳೆಂಟು ವರ್ಷದಿಂದ ಅದೇ ಏರಿಯಾದಲ್ಲಿದ್ದು ಕೊಂಡು ಚಿರಪರಿಚಿತನಾಗಿದ್ದ ಆತ ಇಂದು ಬೆಳ್ಳಂಬೆಳಿಗ್ಗೆ ಕೊಲೆಯಾಗಿ ಹೋಗಿದ್ದಾನೆ.

ಅದು ಹೇಗೆ ಎನ್ನುವ ಅನುಮಾನ ಇಡೀ ಏರಿಯಾಗೆ ಶುರುವಾಗಿದೆ. ಮಾಡೊಕೆ ಕೆಲಸ ಇಲ್ಲದ ದಡಿಯಾ ಮಂಜ, ಏರಿಯಾದಲ್ಲಿ ಓಡಾಡಿಕೊಂಡಿದ್ದ. ಏರಿಯಾದ ಹುಡುಗರ ಜೊತೆ ಇರುತ್ತಿದ್ದ. ಈತ ಯಾವಾಗಲು ಎಣ್ಣೆ ಪಾರ್ಟಿ ಮಾಡಿಕೊಂಡು, ಸುತ್ತಾಡಿಕೊಂಡಿದ್ದ.. ಆದ್ರೆ ಇತ್ತೀಚೆಗೆ ಎಲ್ಲವನ್ನು ಬಿಟ್ಟು, ತಾನಾಯ್ತು ತನ್ನ ಪಾಡಾಯ್ತು ಅಂತ ಇರೋಕೆ ನಿರ್ಧರಿಸಿದ್ದ. ಅದರಂತೆ, ನಿನ್ನೆ ಕೂಗಳತೆ ದೂರದಲ್ಲೇ ಇದ್ದ ಆತನ ಅಣ್ಣನ ಮನೆಯಲ್ಲಿ ಊಟ ಮಾಡಿಕೊಂಡು ತಾನಿದ್ದ ರೂಂಗೆ ಬಂದಿದ್ದ. ಬಳಿಕ ಮಲಗಿದವನ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಅದೊಂದು ದುಷ್ಕರ್ಮಿಗಳ ಗ್ಯಾಂಗ್ ಅಟ್ಯಾಕ್ ಮಾಡಿದೆ.

ಅಸಲಿಗೆ ರಾತ್ರಿ ಡೋರ್ ಲಾಕ್ ಮಾಡಿಕೊಂಡು ಮಲಗಿದ್ದ ಮಂಜನ ರೂಂ ಬಳಿ ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಬಾಗಿಲ ಬೀಗ ಮುರಿದು ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಮಲಗಿದ್ದ ಮಂಜನ ಮೇಲೆ ಚೂಪಾದ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ‌‌. ಈ ವೇಳೆ ಆತನ ತಲೆ ಹಾಗೂ ಹೊಟ್ಟೆಯ ಭಾಗದಲ್ಲಿ ತೀವ್ರವಾದ ಗಾಯಗಳಾಗಿದ್ದು, ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

ಇನ್ನು ಮೃತ ದಡಿಯಾ ಮಂಜ ಈ ಹಿಂದೆ ಯಾವ ಅಪರಾಧ ಪ್ರಕರಣ ಹೊಂದಿಲ್ಲದಿದ್ದರೂ, ಆತನ ಸಹೊದರನ ಮೇಲೆ ಕೆಲ ಗಲಾಟೆಗಳಿದ್ದವು ಎನ್ನಲಾಗಿದೆ.. ಮೇಲ್ನೋಟಕ್ಕೆ ಹತ್ಯೆಯ ನಿಖರ ಕಾರಣ ತಿಳಿಯದಿದ್ದರೂ, ಪರಿಚಯಸ್ಥರೇ ಕೃತ್ಯ ಎಸಗಿರೊ ಶಂಕೆ ವ್ಯಕ್ತವಾಗಿದೆ.

ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ. ಇನ್ನು ಹಳೇ ದ್ವೇಷದ ಹಿನ್ನಲೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಈ ನಡುವೆ ಏರಿಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.. ಇದೇ ಕಾರಣಕ್ಕೆ ಪ್ಲಾನ್ ಮಾಡಿ ಹತ್ಯೆ ಮಾಡಿರಬಹುದಾ ಎಂಬ ಅನುಮಾನವೂ ಮೂಡಿದೆ.

ಕೊಲೆಯಾದ ವ್ಯಕ್ತಿ ಮಲಗಿದ್ದ ಕೊಠಡಿ ಪಕ್ಕದಲ್ಲೇ ತಂದೆ ಮಲಗಿದ್ದು,ಅವ್ರನ್ನ ವಿಚಾರಣೆ ಮಾಡಲಾಗ್ತಿದೆ . ಹೀಗೆ ಕುಟುಂಬಸ್ಥರನ್ನ  ಮತ್ತು ಸ್ನೇಹಿತರ ಬಳಿ ಮಾಹಿತಿ ಪಡೆದು ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲು ಪೊಲೀಸ್ರು ಮುಂದಾಗಿದ್ದಾರೆ. ಆದ್ರೆ ಅದೇನೆ ಇದ್ರು, ಉಂಡಾರಿ ಗುಂಡನಂತೆ ಊರೂರು ತಿರುಗಿಕೊಂಡಿದ್ದವನು ರಾತ್ರಿ ಮಲಗಿ ಬೆಳಗ್ಗೆ ಎದ್ದೇಳುವಷ್ಟರಲ್ಲೇ ಕೊಲೆಯಾಗಿದ್ದು, ವಿಪರ್ಯಾಸ.
Published by: Latha CG
First published: March 25, 2021, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories