HOME » NEWS » State » BANGALORE CRIME A BIDAR MAN SUICIDE AT BANGALORE AFTER GOOGLE SEARCH KMTV LG

Bangalore Crime: ಸಾಯೋದು ಹೇಗೆಂದು ಗೂಗಲ್​ ಸರ್ಚ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಆನ್ ಲೈನ್ ನಲ್ಲಿ ಸಿಕ್ಕ ಮಾಹಿತಿಯಂತೆ ಜೀವನ್ ಬಲೂನ್ ಗಳಿಗೆ ತುಂಬಿಸುವ ನೈಟ್ರೋಜನ್ ಸಿಲಿಂಡರ್ ತಂದಿದ್ದಾನೆ. ಬಳಿಕ ಸಿಲಿಂಡರ್ ಪೈಪ್ ಮೂಗಿಗೆ ಇಟ್ಕೊಂಡು ಕನೆಕ್ಟ್ ಮಾಡಿದ್ದ ಯುವಕ ಮುಖವನ್ನ ಕವರ್ ಪ್ಯಾಕ್ ಮಾಡ್ಕೊಂಡು ಗ್ಯಾಸ್ ಸಿಲಿಂಡರ್ ಆನ್ ಮಾಡಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

news18-kannada
Updated:March 21, 2021, 3:31 PM IST
Bangalore Crime: ಸಾಯೋದು ಹೇಗೆಂದು ಗೂಗಲ್​ ಸರ್ಚ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಆತ್ಮಹತ್ಯೆ ಮಾಡಿಕೊಂಡ ಜೀವನ್ ಅಂಬಾಟೆ
  • Share this:
ಬೆಂಗಳೂರು(ಮಾ.21): ಆತ್ಮಹತ್ಯೆ ಬಗ್ಗೆ ಗೂಗಲ್ ಸರ್ಚ್ ಮಾಡಿ ಯುವಕನೊಬ್ಬ ಸಾವಿಗೀಡಾದ ಘಟನೆ ಬೆಂಗಳೂರಿನ ಮಹದೇಹಪುರದಲ್ಲಿ ನಡೆದಿದೆ. ಬೀದರ್ ಮೂಲದ ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದ ಯುವಕ. ಜೀವನ್ ಅಂಬಾಟೆ ನಗರದ ಖಾಸಗಿ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಾ ಗರುಡಾಚಾರಪಾಳ್ಯದ ಲಕ್ಷ್ಮೀಸಾಗರ ಬಡಾವಣೆಯಲ್ಲಿ ವಾಸವಾಗಿದ್ದ. ಜೀವನದ ಬಗ್ಗೆ ಬಹಳ ಮಹತ್ವಾಕಾಂಕ್ಷೆ ಹೊಂದಿದ್ದ ಜೀವನ್ ನೂರಾರು ಕನಸುಗಳನ್ನ ಹೊತ್ತು ಬೀದರ್​​ನಿಂದ ಬೆಂಗಳೂರಿಗೆ ಬಂದಿದ್ದ. ನಗರದಲ್ಲಿ ಕೆಲಸಕ್ಕೆ ಸೇರಿದ ಬಳಿಕ ಆತನ ಜೀವನ ಶೈಲಿಯೇ ಬದಲಾಗಿದ್ದು ಕೆಲ ದಿನಗಳಿಂದ ಜಿಗುಪ್ಸೆಗೆ ಒಳಗಾಗಿದ್ದನಂತೆ.  

ಜೀವನದ ಬಗ್ಗೆ ತುಂಬ ಬೇಸರಗೊಂಡಿದ್ದ ಜೀವನ್ ಬದುಕಿನ ಪಯಣ ಮುಗಿಸೋ ಸಲುವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದು, ಅದಕ್ಕಾಗಿ ಗೂಗಲ್ ನಲ್ಲಿ ಕೆಲವು ಮಾರ್ಗಗಳನ್ನ ಹುಡುಕಿದ್ದ ಎಂದು ಮಹದೇಹಪುರ ಪೊಲೀಸ್ ಮೂಲಗಳು ತಿಳಿಸಿವೆ. ಆನ್ ಲೈನ್ ನಲ್ಲಿ ಸಿಕ್ಕ ಮಾಹಿತಿಯಂತೆ ಜೀವನ್ ಬಲೂನ್ ಗಳಿಗೆ ತುಂಬಿಸುವ ನೈಟ್ರೋಜನ್ ಸಿಲಿಂಡರ್ ತಂದಿದ್ದಾನೆ. ಬಳಿಕ ಸಿಲಿಂಡರ್ ಪೈಪ್ ಮೂಗಿಗೆ ಇಟ್ಕೊಂಡು ಕನೆಕ್ಟ್ ಮಾಡಿದ್ದ ಯುವಕ ಮುಖವನ್ನ ಕವರ್ ಪ್ಯಾಕ್ ಮಾಡ್ಕೊಂಡು ಗ್ಯಾಸ್ ಸಿಲಿಂಡರ್ ಆನ್ ಮಾಡಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

BY Vijayendra: ಹೈಕಮಾಂಡ್​ ಸೂಚಿಸಿದರೆ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧೆ; ಸಿಎಂ ಯಡಿಯೂರಪ್ಪ

ಘಟನೆ ಬಳಿಕ ಸ್ನೇಹಿತರು ಜೀವನ್ ಪೋನ್ ಗೆ ಕರೆ ಮಾಡಿದ್ದಾರೆ. ಆದ್ರೆ ಎರಡ್ಮೂರು ದಿನ ಜೀವನ್ ಕರೆ ಸ್ವೀಕರಿಸದೆ ಇದ್ದರಿಂದ ಖುದ್ದು ರೂಂಗೆ ಬಂದು ನೋಡಿದ್ದಾರೆ. ಈ ವೇಳೆ ಡೋರ್ ಮೇಲೆ ಡಯಾಗ್ರಾಮ್ ವೊಂದು ಪತ್ತೆಯಾಗಿದೆ. ಅದರಲ್ಲಿ ಮನೆ ಬಾಗಿಲು ತೆಗೆದ ಕೂಡಲೇ ವಿಂಡೋಗಳು ಓಪನ್ ಮಾಡಿ. ಯಾರೂ ಲೈಟ್ಸ್ ಆನ್‌ ಮಾಡಬೇಡಿ ಅಂತಾ ಬರೆದಿದ್ದನಂತೆ. ಇನ್ನೂ ಆತ್ಮಹತ್ಯೆ ಮಾಡಿಕೊಳ್ಳಲು ತಾನು ಗೂಗಲ್ ನಲ್ಲಿ ಸರ್ಚ್ ಮಾಡಿದ ಬಗ್ಗೆಯೂ ಡೆತ್ ನೋಟ್ ಉಲ್ಲೇಖ ಮಾಡಿದ್ದಾನಂತೆ. ಸುಮಾರು ನಾಲ್ಕು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಡೆತ್ ನೋಟ್ ನಲ್ಲಿ ತನ್ನ ಸಾವಿನ ಬಗ್ಗೆ ಕೆಲವು ವಿಚಾರಗಳನ್ನ ಪ್ರಸ್ತಾಪಿಸಿದ್ದಾನಂತೆ. ಮನೆಯವರು ನನಗೆ ಫೋನ್ ಮಾಡ್ತಿಲ್ಲ, ನನ್ನ ಬಗ್ಗೆ ಕೇರ್ ಮಾಡ್ತಿಲ್ಲ, ಲೈಫ್ ಬ್ಯೂಟಿಫುಲ್‌ ಆಗಿರಬೇಕು ಅಂತಾ ಬೀದರ್ ನಿಂದ ಬೆಂಗಳೂರಿಗೆ ಬಂದೆ. ಏನಾದರೂ ಸಾಧಿಸಬೇಕು ಅನ್ನೋ ಆಕಾಂಕ್ಷೆಯೊಂದಿಗೆ ಬಂದಿದ್ದೆ, ಆದ್ರೆ ಇಲ್ಲಿ ನಾನ್ ಅನ್ಕೊಂಡ ಹಾಗೇ ಏನು ನಡೀತಿಲ್ಲ. ಲೈಫು ಬೋರಾಗಿದೆ ಅಂತಾ ಡೆತ್ ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ. 29 ವರ್ಷದ ಜೀವನ್ ಮದುವೆಯಾಗಿರಲಿಲ್ಲ. ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಮಹದೇಹಪುರದ ಲಕ್ಷ್ಮೀ ಸಾಗರ ಬಡಾವಣೆಯಲ್ಲಿ ವಾಸವಾಗಿದ್ದ.

ಸದ್ಯ ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವಕನ ಅಣ್ಣ ಸಹ ನಗರದಲ್ಲಿ ಕೆಲಸ ಮಾಡುತ್ತಿದ್ದು ಪೋಷಕರು ಬೀದರ್ ನಲ್ಲಿ ನೆಲೆಸಿದ್ದಾರಂತೆ. ಪೊಲೀಸರು ಈ ವಿಚಿತ್ರ ಘಟನೆ ಬಗ್ಗೆ ಹಲವು ಆಯಾಮಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
Published by: Latha CG
First published: March 21, 2021, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories