HOME » NEWS » State » BANGALORE CRIME 3 ACCUSED ARRESTED FOR HARASSMENT ON COSTUMERS AFTER GIVING LOAN THROUGH CHINA APPS LG

ಆನ್​ಲೈನ್​ ಆ್ಯಪ್​ನಲ್ಲಿ ಲೋನ್ ತೆಗೆದುಕೊಳ್ಳುವ ಗ್ರಾಹಕರೇ ಎಚ್ಚರ; ನಿಮ್ಮ ಖಾಸಗಿ ಡೇಟಾ ಲೀಕ್ ಆದೀತು..!

ಚೀನಾದ ಮನಿ ಡೇ, ಪೈಸಾ ಪೇ, ಲೋನ್ ಟೈಮ್, ರೂಪಿ ಡೇ, ರೂಪಿ ಕರ್ಟ್, ಇನ್ ಕ್ಯಾಷ್ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹೇಳುತ್ತಿದ್ದರು. ಆ್ಯಪ್ ಡೌನ್‌ಲೋಡ್ ಬಳಿಕ ಐದಾರು ಸಾವಿರ ಲೋನ್ ನೀಡುತ್ತಿದ್ದರು. ಬಳಿಕ ಲೋನ್ ಆ್ಯಪ್ ಮೂಲಕ ಇತರ ಆ್ಯಪ್ ಗಳಿಗೆ ಲಗ್ಗೆ ಇಟ್ಟು,  ಪೋನ್ ನಲ್ಲಿರುವ ಕಾಂಟ್ಯಾಕ್ಟ್ ನಂಬರ್ಸ್, ಗ್ಯಾಲರಿಗೆ ಎಂಟ್ರಿ ಕೊಡುತ್ತಿದ್ದರು. ಫೋನ್ ನಂಬರ್ ಗಳು ಮತ್ತು ಫೋಟೊಗಳನ್ನು ಸಂಗ್ರಹಿಸಿ ಬೆದರಿಕೆ ಹಾಕುತ್ತಿದ್ದರು. ಇಷ್ಟೇ ಅಲ್ಲದೇ, ಖಾಸಗಿ ಫೋಟೊಗಳನ್ನ ಲೀಕ್ ಮಾಡುವುದಾಗಿ ಹೆದರಿಸುತ್ತಿದ್ದರು. 

news18-kannada
Updated:December 28, 2020, 8:44 AM IST
ಆನ್​ಲೈನ್​ ಆ್ಯಪ್​ನಲ್ಲಿ ಲೋನ್ ತೆಗೆದುಕೊಳ್ಳುವ ಗ್ರಾಹಕರೇ ಎಚ್ಚರ; ನಿಮ್ಮ ಖಾಸಗಿ ಡೇಟಾ ಲೀಕ್ ಆದೀತು..!
ಆರೋಪಿಗಳು
  • Share this:
ಬೆಂಗಳೂರು(ಡಿ.28): ಆನ್​ಲೈನ್​ ಆ್ಯಪ್​ಗಳ ಮೂಲಕ ಲೋನ್​ ನೀಡಿ ಕಿರುಕುಳ ನೀಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸೈಯದ್ ಅಹಮದ್, ಸೈಯದ್ ಇರ್ಫಾನ್ ಮತ್ತು ಆದಿತ್ಯಾ ನೆನಾಪತಿ ಎಂದು ಗುರುತಿಸಲಾಗಿದೆ. ಈ ಮೂವರು ಆಸಾಮಿಗಳು ಚೀನಾ ಮೂಲದ ಆ್ಯಪ್​ಗಳ ಡೈರಕ್ಟರ್​​ಗಳಾಗಿದ್ದರು ಎಂದು ತಿಳಿದು ಬಂದಿದೆ. ಆ್ಯಪ್ ಗಳ ಮೂಲಕ ಲೋನ್ ನೀಡಿ ಬಳಿಕ ಬಡ್ಡಿ, ಚಕ್ರಬಡ್ಡಿ, ಸರ್ವಿಸ್ ಚಾರ್ಜ್ ವಿಧಿಸಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಲೋನ್ ಕಟ್ಟಲು ವಿಳಂಬವಾದಲ್ಲಿ ಫೋನ್ ಮಾಡಿ ಮಾನಸಿಕ ಕಿರುಕುಳದ ಜೊತೆಗೆ ಬೆದರಿಕೆಯನ್ನೂ ಹಾಕುತ್ತಿದ್ದರು ಎನ್ನಲಾಗಿದೆ. 

ಈ ಕುರಿತು ಸೈಬರ್ ಕ್ರೈಮ್​ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಸೈಬರ್ ಕ್ರೈಮ್ ಪೊಲೀಸರು ಕೇಸ್ ದಾಖಲಿಸಿ ತನಿಖೆ ಶುರು ಮಾಡಿದ್ದರು. ಆ್ಯಪ್ ಮೂಲಕ ಸಾಲ ನೀಡುತ್ತಿದ್ದ ಕೋರಮಂಗಲದ ಅಸ್ಪರ್ಲ್ ಸರ್ವೀಸಸ್​ ಪ್ರೈವೇಟ್ ಲಿಮಿಟೆಡ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಒಂದೇ ಕಚೇರಿಯಲ್ಲಿ ಮೂರು ಕಂಪನಿಗಳು ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

ಹೈಜೆಕಿ ಸರ್ವಿಸ್ಡ್ ಪ್ರೈವೇಟ್ ಲಿಮಿಟೆಡ್, ಎಕ್ಸಿಡ್ವೆಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಮಾಸ್ಕೋ ಸ್ಟಾರ್ ಸರ್ವಿಸ್ಡ್ ಪ್ರೈವೇಟ್ ಲಿಮಿಟೆಡ್ ಅಕ್ವಾ ಸ್ಟೀಲರ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಷಯ ಪೊಲೀಸರಿಗೆ ತಿಳಿದಿದೆ.  ತನಿಖೆ ವೇಳೆ ಎಲ್ಲಾ ಕಂಪನಿಗಳು ಚೀನಾ ಮೂಲದವು ಎಂಬ ವಿಷಯಯವೂ ಸಹ ಬೆಳಕಿಗೆ ಬಂದಿದೆ.

ದತ್ತಪೀಠದ ಹೋರಾಟ ಸತ್ಯದ ಹೋರಾಟ; ಕೋರ್ಟ್​​​ನಲ್ಲಿ ಸತ್ಯದ ಪರ ತೀರ್ಪು ಬರಲಿದೆ; ಸಿ.ಟಿ.ರವಿ

ಕಂಪನಿಗಳಿಗೆ ಚೀನಾದವರು ಮಾಲೀಕರಾಗಿದ್ದು ಮೂವರು ಡೈರೆಕ್ಟರ್​ಗಳನ್ನು ನೇಮಕ ಮಾಡಲಾಗಿತ್ತು. ಈ ಕಂಪನಿಗಳು ಚೀನಾದ ವಿವಿಧ ಆ್ಯಪ್ ಗಳ ಮೂಲಕ ಲೋನ್ ಕೊಡುತ್ತಿದ್ದವು.  ಬಂಧಿತ ಆರೋಪಿಗಳು ಲೋನ್ ಹಣ ವಸೂಲಿಗೆ ಕೆಲವು ಕಾಲ್ ಸೆಂಟರ್ ಗಳಿಗೆ ಗುತ್ತಿಗೆ ನೀಡಿದ್ದರು ಎನ್ನಲಾಗಿದ್ದು,  ಲೋನ್ ಅಮೌಂಟ್ ಮತ್ತು ಬಡ್ಡಿ ಕಟ್ಟಲು ವಿಳಂಬವಾದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಖತರ್ನಾಕ್ ಆರೋಪಿಗಳು ಗ್ರಾಹಕರಿಗೆ ಲೋನ್ ಕೊಡಲು ಚೀನಾ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿಸುತ್ತಿದ್ದರು. ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿ ಬಳಿಕ ಲೋನ್ ಗೆ ಅಪ್ಲೈ ಮಾಡಿ ಎಂದು ಹೇಳುತ್ತಿದ್ದರು. ಚೀನಾದ ಮನಿ ಡೇ, ಪೈಸಾ ಪೇ, ಲೋನ್ ಟೈಮ್, ರೂಪಿ ಡೇ, ರೂಪಿ ಕರ್ಟ್, ಇನ್ ಕ್ಯಾಷ್ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹೇಳುತ್ತಿದ್ದರು. ಆ್ಯಪ್ ಡೌನ್‌ಲೋಡ್ ಬಳಿಕ ಐದಾರು ಸಾವಿರ ಲೋನ್ ನೀಡುತ್ತಿದ್ದರು. ಬಳಿಕ ಲೋನ್ ಆ್ಯಪ್ ಮೂಲಕ ಇತರ ಆ್ಯಪ್ ಗಳಿಗೆ ಲಗ್ಗೆ ಇಟ್ಟು,  ಪೋನ್ ನಲ್ಲಿರುವ ಕಾಂಟ್ಯಾಕ್ಟ್ ನಂಬರ್ಸ್, ಗ್ಯಾಲರಿಗೆ ಎಂಟ್ರಿ ಕೊಡುತ್ತಿದ್ದರು. ಫೋನ್ ನಂಬರ್ ಗಳು ಮತ್ತು ಫೋಟೊಗಳನ್ನು ಸಂಗ್ರಹಿಸಿ ಬೆದರಿಕೆ ಹಾಕುತ್ತಿದ್ದರು. ಇಷ್ಟೇ ಅಲ್ಲದೇ, ಖಾಸಗಿ ಫೋಟೊಗಳನ್ನ ಲೀಕ್ ಮಾಡುವುದಾಗಿ ಹೆದರಿಸುತ್ತಿದ್ದರು. ಕಾಂಟ್ಯಾಕ್ಟ್ ನಂಬರ್ಸ್ ಸಂಗ್ರಹಿಸಿ ಸ್ನೇಹಿತರು ಮತ್ತು ಇತರರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇನ್ನು,  ಬಂಧಿತ ಆರೋಪಿಗಳಿಂದ 30 ಕಂಪ್ಯೂಟರ್, 200 ಬೇಸಿಕ್ ಮೊಬೈಲ್ ಫೋನ್ ಗಳು, 8 ಚೆಕ್ ಬುಕ್ ಗಳು, 20 ಆ್ಯಂಡ್ರಾಯ್ಡ್ ಫೋನ್ ಗಳು, 30 ಸಿಮ್ ಮತ್ತು ಸೀಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇಷ್ಟೇ ಅಲ್ಲದೇ ಸಿಸಿಬಿ ಪೊಲೀಸರು ಲೋನ್ ಕಂಪನಿಗಳ ಚೀನಾ ಮಾಲೀಕರ ಕುರಿತಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.  ಮಾಲೀಕರ ಬಂಧನಕ್ಕೆ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.
Published by: Latha CG
First published: December 28, 2020, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories