Bangalore Coronavirus: ಮಧ್ಯರಾತ್ರಿ ಬಂದ ಆ ಮೆಸೇಜ್​ನಿಂದ ಬೆಂಗಳೂರಿನ 8 ರೋಗಿಗಳ ಜೀವ ಉಳಿಸಿದ ಆಂಧ್ರದ ವ್ಯಕ್ತಿ

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಆಂಧ್ರಪ್ರದೇಶದ ಚಿತ್ತೂರಿನ ವರುಣ್ ಕುಮಾರ್ ಎಂಬುವವರು ಟ್ವಿಟ್ಟರ್​ನಲ್ಲಿ ಬಂದ ಪೋಸ್ಟ್ ಒಂದನ್ನು ನೋಡಿ 8 ಜೀವಗಳನ್ನು ಉಳಿಸಿದ್ದಾರೆ.

ವರುಣ್ ಕುಮಾರ್

ವರುಣ್ ಕುಮಾರ್

  • Share this:
    ಬೆಂಗಳೂರು (ಮೇ 24): ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು, ಲಾಕ್​ಡೌನ್ ಮಾಡಿದರೂ ಹೆಚ್ಚೇನೂ ಇಳಿಕೆ ಕಂಡಬಂದಿಲ್ಲ. ಬೆಂಗಳೂರಿನಲ್ಲಿ ಆಕ್ಸಿಜನ್, ವೆಂಟಿಲೇಟರ್ ಕೊರತೆಯಿಂದ ಸಾಕಷ್ಟು ಜನರು ಸಾವನ್ನಪ್ಪಿದ ಬಗ್ಗೆಯೂ ವರದಿಯಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಆಂಧ್ರಪ್ರದೇಶದ ಚಿತ್ತೂರಿನ ವರುಣ್ ಕುಮಾರ್ ಎಂಬುವವರು ಟ್ವಿಟ್ಟರ್​ನಲ್ಲಿ ಬಂದ ಪೋಸ್ಟ್ ಒಂದನ್ನು ನೋಡಿ 8 ಜೀವಗಳನ್ನು ಉಳಿಸಿದ್ದಾರೆ.

    ಚಿತ್ತೂರಿನ ವರುಣ್ ಕುಮಾರ್ ಬೆಂಗಳೂರಿನಲ್ಲಿ ಫಾರ್ಮಾ ಬ್ಯುಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮೇ 6ರಂದು ಟ್ವಿಟ್ಟರ್​ನಲ್ಲಿ ಬಂದ ಪೋಸ್ಟ್​ ಒಂದು ಕಾಣುತ್ತದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಆ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಪೋರ್ಟ್​ನಲ್ಲಿದ್ದ 8 ರೋಗಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ರಾತ್ರಿ 1.30 ಸುಮಾರಿಗೆ ಪೋಸ್ಟ್ ಒಂದು ಕಾಣುತ್ತದೆ. ಅವರಿಗೆ ಇನ್ನೂ 90 ನಿಮಿಷಗಳೊಳಗೆ ಆಕ್ಸಿಜನ್ ಪೂರೈಕೆ ಮಾಡದಿದ್ದರೆ ಬದುಕುಳಿಯುವ ಸಾಧ್ಯತೆಯೇ ಕಡಿಮೆ ಇತ್ತು.

    ಇದನ್ನೂ ಓದಿ: ಕೋವಿಡ್ ಟೆಸ್ಟ್​ಗೆ ಹೆದರಿ ಅಸ್ಸಾಂ ವಿಮಾನ ನಿಲ್ದಾಣದಿಂದ 400 ಪ್ರಯಾಣಿಕರು ಪರಾರಿ!

    ಈ ವಿಷಯ ತಿಳಿಯುತ್ತಿದ್ದಂತೆ ಆ ಆಸ್ಪತ್ರೆಗೆ ಫೋನ್ ಮಾಡಿದ ವರುಣ್ ಆ ವಿಷಯ ನಿಜವೇ ಎಂಬುದನ್ನು ಖಚಿತಪಡಿಸಿಕೊಂಡರು. ನಂತರ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ತಮ್ಮ ಸಂಪರ್ಕದಲ್ಲಿದ್ದವರಿಗೆಲ್ಲ ಫೋನ್ ಮಾಡಿ ಈ ಬಗ್ಗೆ ಸಹಾಯ ಕೋರಿದರು.

    ಅಧಿಕಾರಿಗಳಿಗೆ ಹೇಳಿ ಏನಾದರೂ ವ್ಯವಸ್ಥೆ ಮಾಡಿಸುತ್ತೇನೆಂದು ಕಮಿಷನರ್ ಕಮಲ್ ಪಂತ್ ಭರವಸೆ ನೀಡಿದರು. ಹಾಗೇ, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಅಜಯ್ ಕುಮಾರ್ ಅವರ ಬಳಿಯೂ ಮಾತನಾಡುವಂತೆ ಅವರು ಸೂಚಿಸಿದರು. ಆ ಆಸ್ಪತ್ರೆಯ ಆಕ್ಸಿಜನ್ ಫಿಲ್ಲಿಂಗ್ ವಾಹನ ಪೀಣ್ಯಾದ ಫಿಲ್ಲಿಂಗ್ ಸ್ಟೇಷನ್​ಗೆ ಬಂದಾಗ ಅಲ್ಲಿ ದೊಡ್ಡ ಕ್ಯೂ ಇತ್ತು. ಆ ವಾಹನಕ್ಕೆ ಬೆಳಗ್ಗಿನ ನಂತರ ಆಕ್ಸಿಜನ್ ಫಿಲ್ ಮಾಡಲಾಗುವುದು ಎಂದು ಅಲ್ಲಿಯ ಸಿಬ್ಬಂದಿ ಹೇಳಿದರು. ಆದರೆ, ರೋಗಿಗಳ ಜೀವ ಉಳಿಸಿಕೊಳ್ಳಲು ಅಷ್ಟು ಸಮಯವಿರಲಿಲ್ಲ.

    ಇದನ್ನೂ ಓದಿ: Cyclone Yaas: ಪಶ್ಚಿಮ ಬಂಗಾಳಕ್ಕೆ ಇಂದು ಅಪ್ಪಳಿಸಲಿದೆ ಯಾಸ್ ಚಂಡಮಾರುತ; 950 NDRF​ ಸಿಬ್ಬಂದಿ ಏರ್​ಲಿಫ್ಟ್​

    ಅಷ್ಟರಲ್ಲಿ ವರುಣ್ ಅವರಿಂದ ವಿಷಯ ತಿಳಿದ ಎಸಿಪಿ ಅಜಯ್ ಕುಮಾರ್ ತಮ್ಮ ಸಿಬ್ಬಂದಿಗಳನ್ನು ಕಳುಹಿಸಿ, ಮೊದಲು ಆ ಆಸ್ಪತ್ರೆಯ ಆಕ್ಸಿಜನ್ ವಾಹನಕ್ಕೆ ಆಕ್ಸಿಜನ್ ಫಿಲ್ ಮಾಡಿ ಕಳುಹಿಸುವಂತೆ ಆಕ್ಸಿಜನ್ ಫಿಲ್ಲಿಂಗ್ ಸ್ಟೇಷನ್ ಸಿಬ್ಬಂದಿಗೆ ತಿಳಿಸಿದರು. ಅದರಂತೆ ನಿಗದಿತ ಸಮಯದೊಳಗೆ ಆಕ್ಸಿಜನ್ ವಾಹನ ಆಸ್ಪತ್ರೆಯನ್ನು ತಲುಪಿದ್ದರಿಂದ 8 ರೋಗಿಗಳ ಜೀವ ಉಳಿಯಿತು.

    ಇದಾದ ನಂತರವೂ ಆಸ್ಪತ್ರೆಯ ಸಿಬ್ಬಂದಿ ಜೊತೆಗೆ ಸಂಪರ್ಕದಲ್ಲಿದ್ದ ವರುಣ್ ಆಕ್ಸಿಜನ್ ಫಿಲ್ಲಿಂಗ್ ಯುನಿಟ್ ಜೊತೆಗೂ ಫೋನ್ ಸಂಪರ್ಕದಲ್ಲಿದ್ದರು. ವರುಣ್ ಅವರ ಸಮಯಪ್ರಜ್ಞೆಯಿಂದ 8 ರೋಗಿಗಳ ಪ್ರಾಣ ಉಳಿಯಿತು.
    Published by:Sushma Chakre
    First published: