ಬೆಂಗಳೂರು ಹೈಫೈ ಕಮರ್ಷಿಯಲ್ ಸ್ಟ್ರೀಟ್ ಬ್ಯುಸಿನೆಸ್ ಡಲ್; ಲಕ್ಷಾಂತರ‌ ಬಾಡಿಗೆ ಕಟ್ಟದೆ ಚರ್ಚ್ ಸ್ಟ್ರೀಟ್​ನ ಹಲವು ಶಾಪ್ ಕ್ಲೋಸ್

ಕೊರೋನಾ ಕಾರಣದಿಂದ ಬೆಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿವೆ. ಅನ್‌ಲಾಕ್ 1, 2, 3 ಮಾಡಿದ್ರೂ ಚೇತರಿಕೆ ಕಾಣುತ್ತಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್, ಹೋಟೆಲ್, ಬೇಕರಿ, ಅಂಗಡಿ, ಸಣ್ಣಪುಟ್ಟ ಮಳಿಗೆ ಕ್ಲೋಸ್ ಆಗಿವೆ. ಮೊಬೈಲ್ ಬಿಡಿ ಭಾಗದ ಅಂಗಡಿಗಳು, ಫುಟ್ ವೇರ್ ಅಂಗಡಿ ಸೇರಿದಂತೆ ಸಣ್ಣಪುಟ್ಟ ಅಂಗಡಿಗಳು ಬಂದ್ ಆಗಿದೆ.

news18-kannada
Updated:August 7, 2020, 6:36 PM IST
ಬೆಂಗಳೂರು ಹೈಫೈ ಕಮರ್ಷಿಯಲ್ ಸ್ಟ್ರೀಟ್ ಬ್ಯುಸಿನೆಸ್ ಡಲ್; ಲಕ್ಷಾಂತರ‌ ಬಾಡಿಗೆ ಕಟ್ಟದೆ ಚರ್ಚ್ ಸ್ಟ್ರೀಟ್​ನ ಹಲವು ಶಾಪ್ ಕ್ಲೋಸ್
ಮುಚ್ಚಿರುವ ಅಂಗಡಿಗಳು
  • Share this:
ಬೆಂಗಳೂರು(ಆ.07): ಅನ್‌ಲಾಕ್‌ ಆದ್ರೂ ರಾಜ್ಯದಲ್ಲಿ ವ್ಯಾಪಾರ ಚೇತರಿಕೆಯಾಗ್ತಿಲ್ಲ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಜನರಿಲ್ಲದೆ ಬಣಬಣಗುಡುತ್ತಿದೆ. ಸದಾ ಬ್ಯುಸಿ ಇರ್ತಿದ್ದ ಎಂಜಿ ರೋಡ್, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್ ಇದೀಗ ಖಾಲಿ ಖಾಲಿ ಹೊಡೆಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ‌ ಬರೋಬ್ಬರಿ 50 ಸಾವಿರ ಶಾಪ್ ಕ್ಲೋಸ್ ಆಗಿವೆ.

ಅನ್ ಲಾಕ್‌ ಆದ್ರೂ ಹೊರಗೆ ಬರಲು ಜನರು ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೂಪಿಸಿರುವ ಬೆಂಗಳೂರಿನ ಕಮರ್ಷಿಯಲ್ ಚರ್ಚ್ ಸ್ಟ್ರೀಟ್ ಜನರೇ‌ ಬರ್ತಿಲ್ಲ. ಕಳೆದ‌ ನಾಲ್ಕು ತಿಂಗಳಿನಿಂದ ಲಕ್ಷಾಂತರ ಬಾಡಿಗೆ ಕೊಟ್ಟು ನಡೆಸದೆ ಅಂಗಡಿ ಮಾಲಿಕರು ಕ್ಲೋಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಕೊರೊನಾ ಎಫೆಕ್ಟ್ ಶೇ.80ರಷ್ಟು ಬ್ಯುಸಿನೆಸ್ ಡೌನ್ ಆಗಿದೆ. ಸಂಜೆಯಾಗುತ್ತಿದ್ದಂತೆ ಫುಲ್ ಬ್ಯುಸಿನೆಸ್ ಇರುತ್ತಿದ್ದ ಏರಿಯಾ ಇದು ಇದೀಗ ಅನ್‌ಲಾಕ್ ಆದ್ರೂ ಜನರೇ ಹೊರಗಡೆ ಬರುತ್ತಿಲ್ಲ.

ಪಬ್ ಗಳು ನಿಷೇಧ ಹಿನ್ನೆಲೆ ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್‌ ನಲ್ಲಿ ನಲ್ಲಿ ಬ್ಯುಸಿನೆಸ್ ಶೇ.80 ರಷ್ಟು ಡಲ್ ಹೊಡೆದಿದೆ. ಇಲ್ಲಿರುವ ಶಾಪಿಂಗ್, ಕಾಂಪ್ಲೆಕ್ಸ್, ಪಬ್, ರೆಸ್ಟ್ರೋರೆಂಟ್ ಗಳಿಗೆ ಸಂಕಷ್ಟ ಶುರುವಾಗದೆ. ಶೇ.25ರಷ್ಟು ಶಾಪ್ ಗಳು ಕ್ಲೋಸ್. ಶೇ.30ರಷ್ಟು ಪಬ್ ಗಳು ಈಗಾಗಲೇ ಬಂದ್ ಇವೆ. ಇದೇ ಪರಿಸ್ಥಿತಿ ಇನ್ನೊಂದು ತಿಂಗಳು ಮುಂದುವರೆದರೆ ಶೇ.25ರಷ್ಟು ಶಾಪ್ ಬಂದ್ ಆಗೋದು‌ ಗ್ಯಾರಂಟಿ ಎನ್ನುತ್ತಾರೆ ಚರ್ಚ್ ಸ್ಟ್ರಿಟ್ ಹಾಗೂ ಬ್ರಿಗೇಡ್ ಅಸೋಸಿಯೇಷನ್ ಸೆಕ್ರಟರಿ ಇರ್ಫಾನ್ ಹಾಗೂ ಸೋಯಿಲ್ ಯೂಸೆಫ್.

ಕೇರಳದ ಇಡುಕ್ಕಿಯಲ್ಲಿ ಭೂ ಕುಸಿತದಿಂದ 15 ಮಂದಿ ಸಾವು; 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

ಕೊರೋನಾ ಕಾರಣದಿಂದ ಬೆಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿವೆ. ಅನ್‌ಲಾಕ್ 1, 2, 3 ಮಾಡಿದ್ರೂ ಚೇತರಿಕೆ ಕಾಣುತ್ತಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್, ಹೋಟೆಲ್, ಬೇಕರಿ, ಅಂಗಡಿ, ಸಣ್ಣಪುಟ್ಟ ಮಳಿಗೆ ಕ್ಲೋಸ್ ಆಗಿವೆ. ಮೊಬೈಲ್ ಬಿಡಿ ಭಾಗದ ಅಂಗಡಿಗಳು, ಫುಟ್ ವೇರ್ ಅಂಗಡಿ ಸೇರಿದಂತೆ ಸಣ್ಣಪುಟ್ಟ ಅಂಗಡಿಗಳು ಬಂದ್ ಆಗಿದೆ. ವ್ಯಾಪಾರ ಅಂಗಡಿಗಳು ಹಬ್ಬದ ಸಮಯದಲ್ಲೂ ತೆರಯಲಾದ ಸ್ಥಿತಿ ತಲುಪಿದೆ. ಎಲ್ಲಿ ನೋಡಿದ್ರೂ ಬಹುತೇಕ ಕಡೆ ಟು ಲೆಟ್ ಅಂತ ಬೋರ್ಡ್ ಕಾಣುತ್ತಿದೆ.

ಜಯನಗರ, ಎಸ್ ಪಿ ರೋಡ್, ಚಂದ್ರ ಲೇ ಔಟ್, ಯಶವಂತಪುರ ಸೇರಿ ಬಹುತೇಕ ಕಡೆ ಶಾಪ್ ಕ್ಲೋಸ್ ಮಾಡಿದ ದೃಶ್ಯ ಕಾಣಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿವೆ ಬರೋಬ್ಬರಿ ನಾಲ್ಕು ಲಕ್ಷ ಮಳಿಗೆಗಳು. ಇದರಲ್ಲಿ ಶೇಕಡಾ 15 ರಷ್ಟು ಮಳಿಗೆಗಳು ಕ್ಲೋಸ್ ಆಗಿವೆ. ಇನ್ನುಳಿದ 15 ರಷ್ಟು ಮಳಿಗೆಗಳು ಸಂಪೂರ್ಣ ಮುಚ್ಚಿವೆ. ಹೀಗೆ ಮುಂದವರೆದರೆ ಅಂಗಡಿ ಮುಚ್ಚಿಕೊಂಡು‌ ಹೋಗುತ್ತಿದೆ ಎಂದು ಅಂಗಡಿ ಮಾಲಿಕ ರಾಜ್‌ಪುರೋಹಿತ, ಹರೀಶ್ ಹೇಳುತ್ತಾರೆ.
ಇದರ ಪರಿಣಾಮ ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಟು ಲೆಟ್ ಬೋರ್ಡ್ ಕಾಣಿಸುತ್ತಿದೆ. ಮಳಿಗೆ ಬಾಡಿಗೆ ಜೊತೆ ಮನೆ ಬಾಡಿಗೆ ಕೊಡದೆ ವ್ಯಾಪಾರಿಗಳ ಸಂಕಷ್ಟ ಎದುರಾಗಿದೆ. ಇದರಲ್ಲಿ ಬೇರೆ ರಾಜ್ಯಗಳಿಂದ‌ ಬಂದು ವ್ಯಾಪಾರ ಮಾಡುತ್ತಿದ್ದವರ ಮಳಿಗೆಗಳು ಕ್ಲೋಸ್ ಆಗಿದೆ. ಕೆಲಸ ಅರಸಿ ಬಂದ ಉತ್ತರ ಕರ್ನಾಟಕದ ಬಹುತೇಕ ಹೋಟೆಲ್, ಬೇಕರಿ ಕ್ಲೋಸ್ ಮಾಡಿಕೊಂಡು ಹೋದ್ರೆ, ಕೊರೊನಾ ಮುಂಜಾಗ್ರತೆಗೆ ಕೆಲವರು ಸ್ವ ಇಚ್ಚೆಯಿಂದ ಕ್ಲೋಸ್‌ ಮಾಡಿಕೊಂಡು‌ ಹೋಗಿದ್ದಾರೆ.
Published by: Latha CG
First published: August 7, 2020, 6:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading